ವಾಹನಗಳ ಟಿಂಟ್ ಗ್ಲಾಸ್ ತೆರವಿಗೆ ಕಾರ್ಯಾಚರಣೆ: ಮಂಗಳೂರು ಪೊಲೀಸ್ ಆಯುಕ್ತ

Update: 2016-08-01 18:37 GMT

ಮಂಗಳೂರು, ಆ.1: ವಾಹನಗಳ ಗಾಜುಗಳಿಗೆ ಕಪ್ಪು ಫಿಲಂ (ಟಿಂಟ್) ಅಂಟಿಸಿದ ಪ್ರಕರಣಗಳು ಹೆಚ್ಚುತ್ತಿ ರುವ ಬಗ್ಗೆ ಗಮನಕ್ಕೆ ಬಂದಿದ್ದು, ಒಂದು ವಾರಗಳ ನಿರಂತರ ಕಾರ್ಯಾಚರಣೆಯ ಮೂಲಕ ನಿರ್ದಾಕ್ಷಿಣ್ಯವಾಗಿ ಅವುಗಳನ್ನು ತೆರವುಗೊಳಿಸುವುದಾಗಿ ಮಂಗಳೂರು ಪೊಲೀಸ್ ಆಯುಕ್ತ ಚಂದ್ರಶೇಖರ್ ಹೇಳಿದ್ದಾರೆ. ಅವರು ತನ್ನ ಕಚೇರಿಯಲ್ಲಿ ನಡೆದ ದಲಿತರ ಕುಂದುಕೊರತೆಗಳ ಸಭೆಯ ಅಧ್ಯಕ್ಷತೆ ವಹಿಸಿ ದಲಿತ ನಾಯಕರ ದೂರಿಗೆ ಸ್ಪಂದಿಸಿ ಪ್ರತಿಕ್ರಿಯಿಸಿದರು. ಉತ್ತರ ಭಾರತದ ಕೆಲವು ಕಡೆ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಜುತ್ತಿದ್ದು, ಮಂಗಳೂರಿನಲ್ಲೂ ಅಂತಹ ಘಟನೆಗಳು ನಡೆಯುವ ಸಾಧ್ಯತೆ ಇರುವುದರಿಂದ ನಗರದ ವೆಲೆನ್ಸಿಯಾ ಹಾಗೂ ಇತರ ಕಡೆ ದಲಿತ ಸಮುದಾಯದವರು ಅಧಿಕವಾಗಿ ವಾಸಿಸುವ ಪ್ರದೇಶಗಳಲ್ಲಿ ಸಿ.ಸಿ.ಟಿವಿ ಕ್ಯಾಮರಾಗಳನ್ನು ಅಳವಡಿಸಬೇಕೆಂದು ಸಭೆ ಯಲ್ಲಿ ದಲಿತ ನಾಯಕರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಚಂದ್ರಶೇಖರ್, ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಪ್ರಸ್ತುತ 49 ಸಿ.ಸಿ.ಟಿವಿ ಕ್ಯಾಮರಾಗಳು ಕಾರ್ಯ ನಿರ್ವಹಿಸುತ್ತಿವೆ. ಇದಲ್ಲದೆ ಹೊಸತಾಗಿ 60 ಸಿ.ಸಿ.ಟಿವಿ ಕ್ಯಾಮರಾಗಳನ್ನು ಅಳವಡಿ ಸಲಾಗುವುದು. ಈ ಸಂದರ್ಭ ದಲಿತರ ಕಾಲನಿಗಳಲ್ಲಿಯೂ ಅಳವಡಿಸುವ ಬಗ್ಗೆ ಗಮನಹರಿಸುವುದಾಗಿ ಹೇಳಿದರು. ಗಾಂಜಾ ಮತ್ತು ಇತರ ಮಾದಕ ವ್ಯವಹಾರಗಳ ವಿರುದ್ಧ ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮಾದಕ ದ್ರವ್ಯಗಳ ಜಾಲದಲ್ಲಿ ತೊಡಗಿರುವವರಿಗೆ ಶಿಕ್ಷೆ, ದಂಡದ ಜತೆಯಲ್ಲೇ ಅವುಗಳ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಂಘಸಂಸ್ಥೆಗಳು ಸ್ವ ಪ್ರೇರಣೆಯಿಂದ ಮುಂದೆ ಬಂದು ಪೊಲೀಸ್ ಇಲಾಖೆ ಜತೆ ಕೈಜೋಡಿಸಬೇಕು ಎಂದು ಪೊಲೀಸ್ ಆಯುಕ್ತರು ಮನವಿ ಮಾಡಿದರು. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಹೊಸ ಕಟ್ಟಡವನ್ನು ಖಾಸಗಿ ಯವರ ಸಹಕಾರದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಈ ಬಗ್ಗೆ ದಾನಿ ಯೊಬ್ಬರು ಮುಂದೆ ಬಂದಿದ್ದಾರೆ. ಒಂದು ತಿಂಗಳೊಳಗೆ ಕೆಲಸ ಆರಂಭವಾಗಲಿದ್ದು, 2016 ಡಿಸೆಂಬರ್ ಒಳಗಡೆ ಪೂರ್ತಿಗೊಂಡು ಹೊಸ ಕಟ್ಟಡದಲ್ಲಿ ಠಾಣೆ ಕಾರ್ಯಾ ರಂಭಗೊಳಿಸುವ ಗುರಿ ಹೊಂದಲಾಗಿದೆ ಎಂದು ಅವರು ತಿಳಿಸಿದರು. ಸಭೆಯಲ್ಲಿ ಡಿಸಿಪಿ ಶಾಂತರಾಜು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News