×
Ad

ಪಾಕ್‌ಗೆ ಚೀನಾದಿಂದ ನಿರಂತರ ರಿಯಾಕ್ಟರ್ ಪೂರೈಕೆ

Update: 2016-08-02 23:45 IST

ವಾಶಿಂಗ್ಟನ್, ಆ. 2: ಪಾಕಿಸ್ತಾನಕ್ಕೆ ಪರಮಾಣು ರಿಯಾಕ್ಟರ್‌ಗಳನ್ನು ಮಾರಾಟ ಮಾಡುವುದನ್ನು ಚೀನಾ ಮುಂದುವರಿಸುತ್ತಿದೆ ಎಂದು ವಾಶಿಂಗ್ಟನ್‌ನ ‘ಆರ್ಮ್ಸ್ ಕಂಟ್ರೋಲ್ ಅಸೋಸಿಯೇಶನ್’ ತನ್ನ ನೂತನ ವರದಿಯಲ್ಲಿ ಹೇಳಿದೆ.

ಅಂತಾರಾಷ್ಟ್ರೀಯ ನಿಯಮಾವಳಿಗಳು ಮತ್ತು ಅಂಗೀಕೃತ ವಿಧಿವಿಧಾನಗಳನ್ನು ಉಲ್ಲಂಘಿಸಿ ಚೀನಾ ಪರಮಾಣು ಸಾಮಗ್ರಿಗಳನ್ನು ರಫ್ತು ಮಾಡುತ್ತಿರುವ ಬಗ್ಗೆ ಅದು ಕಳವಳ ವ್ಯಕ್ತಪಡಿಸಿದೆ.

‘‘ತನ್ನ ರಫ್ತು ನಿಯಂತ್ರಣಗಳನ್ನು ಬಲಪಡಿಸಲು ಕಳೆದ ಹಲವಾರು ವರ್ಷಗಳಲ್ಲಿ ಚೀನಾ ಗಮನಾರ್ಹ ಕ್ರಮಗಳನ್ನು ತೆಗೆದುಕೊಂಡಿದೆ. ಆದಾಗ್ಯೂ, ಪರಮಾಣು ಪೂರೈಕೆದಾರರ ಗುಂಪು (ಎನ್‌ಎಸ್‌ಜಿ)ಗೆ ವಿರುದ್ಧವಾಗಿ ಪಾಕಿಸ್ತಾನಕ್ಕೆ ಪರಮಾಣು ರಿಯಾಕ್ಟರ್‌ಗಳನ್ನು ನಿರಂತರವಾಗಿ ಮಾರಾಟ ಮಾಡಲು ಚೀನಾ ತೆಗೆದುಕೊಂಡಿರುವ ನಿರ್ಧಾರ ಹಾಗೂ ವಿಶ್ವಾಸಾರ್ಹತೆ ಹೊಂದಿಲ್ಲದ ದೇಶಗಳಿಗೆ ಕ್ಷಿಪಣಿ ತಂತ್ರಜ್ಞಾನಗಳನ್ನು ಅದು ಮಾರಾಟ ಮಾಡುತ್ತಿರುವುದು ಅದರ ದರ್ಜೆಯನ್ನು ತಗ್ಗಿಸಿದೆ’’ ಎಂದು ಅದು ಹೇಳಿದೆ.

2013-2016ರ ತನ್ನ ರಿಪೋರ್ಟ್ ಕಾರ್ಡ್‌ನಲ್ಲಿ ಅದು ಚೀನಾಕ್ಕೆ ಪರಮಾಣು ಶಸ್ತ್ರಗಳಿಗೆ ಸಂಬಂಧಿಸಿದ ರಫ್ತು ನಿಯಂತ್ರಣದಲ್ಲಿ ‘ಎಫ್ ಗ್ರೇಡ್’ (ವಿಫಲವಾಗಿದೆ) ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News