ಕಾಶ್ಮೀರ ಸ್ಥಿತಿಯ ಮೇಲೆ ನಿಗಾ ಮುಂದುವರಿಯಲಿದೆ:ವಿಶ್ವಸಂಸ್ಥೆ
ವಿಶ್ವಸಂಸ್ಥೆ,ಆ.2: ಇತ್ತೀಚಿನ ದಿನಗಳಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವಿನ ಘರ್ಷಣೆಗಳಲ್ಲಿ 40ಕ್ಕೂ ಅಧಿಕ ಜನರು ಸಾವನ್ನಪ್ಪಿ, ನೂರಾರು ಜನರು ಗಾಯಗೊಂಡಿರುವ ಕಾಶ್ಮೀರದಲ್ಲಿಯ ಸ್ಥಿತಿಯ ಮೇಲೆ ನಿಗಾವನ್ನು ತಾನು ಮುಂದುವರಿಸುವುದಾಗಿ ವಿಶ್ವಸಂಸ್ಥೆಯು ಹೇಳಿದೆ.
ಕಾಶ್ಮೀರ ವಿಷಯದಲ್ಲಿ ಪರಸ್ಪರರೊಂದಿಗೆ ರಚನಾತ್ಮಕವಾಗಿ ಕಾರ್ಯ ನಿರ್ವಹಿಸುವಂತೆ ವಿಶ್ವಸಂಸ್ಥೆಯು ಭಾರತ ಮತ್ತು ಪಾಕಿಸ್ತಾನಗಳಿಗೆ ಪದೇ ಪದೇ ಸಂದೇಶಗಳನ್ನು ನೀಡಿದೆ. ವಿಶ್ವಸಂಸ್ಥೆಯು ಭಾರತ ಮತ್ತು ಪಾಕಿಸ್ತಾನದಲ್ಲಿಯ ವಿಶ್ವಸಂಸ್ಥೆ ಮಿಲಿಟರಿ ವೀಕ್ಷಕರ ಗುಂಪಿನ ಮೂಲಕ ಕಾಶ್ಮೀರದಲ್ಲಿನ ಸ್ಥಿತಿಯ ಮೇಲೆ ತನ್ನ ನಿಗಾವನ್ನು ಮುಂದುವರಿಸಲಿದೆ ಎಂದು ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಬಾನ್ ಕಿ-ಮೂನ್ ಅವರ ಉಪ ವಕ್ತಾರ ಫರ್ಹಾನ್ ಹಕ್ ಅವರು ಹೇಳಿದರು. ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ಬುರ್ಹಾನ್ ವಾನಿಯ ಹತ್ಯೆಯ ಬಳಿಕ ಕಾಶ್ಮೀರದಲ್ಲಿ ಸೃಷ್ಟಿಯಾಗಿರುವ ಅಶಾಂತಿಯ ಕುರಿತಂತೆ ಪಾಕಿಸ್ತಾನಿ ಪತ್ರಕರ್ತರೋರ್ವರ ಪ್ರಶ್ನೆಗೆ ಹಕ್ ಉತ್ತರಿಸುತ್ತಿದ್ದರು.