ಭಾರತದಿಂದ ದುಬೈಗೆ ಬಂದಿಳಿದ ಎಮಿರೇಟ್ಸ್ ವಿಮಾನಕ್ಕೆ ಬೆಂಕಿ
Update: 2016-08-03 15:25 IST
ದುಬೈ, ಆ. 3: ತಿರುವನಂತಪುರಂ ನಿಂದ ದುಬೈಗೆ ಬಂದ ಎಮಿರೇಟ್ಸ್ ವಿಮಾನವೊಂದು ಬುಧವಾರ ಮಧ್ಯಾಹ್ನ ಉಪಕರಣವೊಂದರ ವೈಫಲ್ಯದಿಂದಾಗಿ ಸಮರ್ಪಕವಾಗಿ ಇಳಿಯಲು ಸಾಧ್ಯವಾಗದೆ ಬೆಂಕಿ ಅವಗಢ ಸಂಭವಿಸಿದೆ ಎಂದು ವರದಿಯಾಗಿದೆ. ವಿಮಾನದಿಂದ ದಟ್ಟ ಹೊಗೆ ಹೊರಬರುತ್ತಿರುವ ಚಿತ್ರ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಬುಧವಾರ ಮಧ್ಯಾಹ್ನ 12.45ಕ್ಕೆ ಘಟನೆ ನಡೆದಿರುವುದನ್ನು ಎಮಿರೇಟ್ಸ್ ಖಚಿತಪಡಿಸಿದೆ.
ಅದೃಷ್ಟವಶಾತ್ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರಗೆ ತರಲಾಗಿದೆ ಹಾಗು ಈವರೆಗೆ ಯಾರಿಗೂ ಗಾಯಗಳಾದ ಬಗ್ಗೆ ವರದಿಯಾಗಿಲ್ಲ . ಆದರೆ ವಿಮಾನಕ್ಕೆ ಘಟನೆಯಲ್ಲಿ ತೀವ್ರ ಹಾನಿ ಉಂಟಾಗಿದೆ ಎಂದು ಹೇಳಲಾಗಿದೆ.
#Emirates pic.twitter.com/8BdKSTHUkQ
— almulla (@gxbdc) 3 August 2016