×
Ad

ಇವುಗಳ ಮೂಲಕ ನೀವೇ ನಿಮ್ಮ ಆತ್ಮಗೌರವ ಕಳೆದುಕೊಳ್ಳಬೇಡಿ

Update: 2016-08-03 20:00 IST

ಪ್ರತಿಯೊಬ್ಬರ ಜೀವನದಲ್ಲೂ ಕೆಲವೊಂದು ಘಳಿಗೆ ನಮ್ಮನ್ನು ನಾವೇ ತುಚ್ಛವಾಗಿ ಕಾಣುತ್ತೇವೆ. ಆದರೆ ಇಂಥ ಮನೋಭಾವ ಸದಾ ಇದ್ದರೆ ಅದನ್ನು ಬದಲಿಸಿಕೊಳ್ಳುವುದು ಸೂಕ್ತ. ನಮ್ಮ ಜೀವನಶೈಲಿ ಹಾಗೂ ಭಾವನೆಗಳನನ್ನು ಬದಲಾಯಿಸಿಕೊಳ್ಳಬೇಕು. ಆರೋಗ್ಯಕರ ನಡವಳಿಕೆ ರೂಢಿಸಿಕೊಳ್ಳಲು ಸಮಯ ಹಿಡಿಯುತ್ತದೆ. ಆದರೆ, ಇದು ಖಂಡಿತಾ ನಿಮ್ಮ ಆತ್ಮಗೌರವ ವೃದ್ಧಿಗೆ ದೊಡ್ಡ ಕೊಡುಗೆ ನೀಡುತ್ತದೆ. ನಿಮ್ಮ ಆತ್ಮಗೌರವಕ್ಕೆ ಧಕ್ಕೆ ತರುವ ಈ ಅಂಶಗಳನ್ನು ಬಿಡಲು ಪ್ರಯತ್ನಿಸಿ.

1. ಬೇರೆಯವರ ಜತೆ ತುಲನೆ ಮಾಡಿಕೊಳ್ಳುವುದು:

ನಿಮಗೆ ನೀವು ಮಾಡಿಕೊಳ್ಳಬಹುದಾದ ಅತಿದೊಡ್ಡ ಹಾನಿ ಎಂದರೆ ಇನ್ನೊಬ್ಬರ ಜತೆ ನಿಮ್ಮನ್ನು ಹೋಲಿಸಿಕೊಳ್ಳುವುದು. ಇದರ ಬದಲು ನಿಮ್ಮ ಗುರಿ- ಸಾಧನೆ ಬಗ್ಗೆಯೇ ನಿಮ್ಮ ದೃಷ್ಟಿ ಇರಲಿ.

2. ಎಲ್ಲರನ್ನೂ ಮೆಚ್ಚಿಸುವ ಪ್ರಯತ್ನ:

ಇಲ್ಲ ಎನ್ನಲು ಕಲಿಯಿರಿ. ಸ್ವಾರ್ಥಿಯಾಗಿ ಎಂದು ಹೇಳುತ್ತಿಲ್ಲ. ಆದರೆ ಕೆಲವೊಮ್ಮೆ ಇಲ್ಲ ಎಂದು ಹೇಳುವುದರಿಂದ ನೀವು ನೈಜವಾಗಿ ನಿಮ್ಮ ಅಂತರಂಗದ ಧ್ವನಿ ಹಾಗೂ ಯೋಚನೆಗಳಿಗೆ ಬದ್ಧವಾಗಿರಲು ಸಾಧ್ಯವಾಗುತ್ತದೆ.

3. ಅನಗತ್ಯ ವಿಳಂಬ:

ಕೆಲಸವನ್ನು ವಿಳಂಬ ಮಾಡುವುದು ಅಥವಾ ಇದನ್ನು ಮಾಡಲು ಸಾಧ್ಯವೇ ಇಲ್ಲ ಎಂಬ ಮನೋಭಾವ ಬೆಳೆಸಿಕೊಳ್ಳುವುದು ಒಳ್ಳೆಯದಲ್ಲ. ನಿಮ್ಮ ಬುದ್ಧಿ ನಿರ್ಭೀತಿಯಿಂದ ಇರಲು ಮನಸ್ಸಿಗೆ ತಿಳಿಹೇಳಬೇಕು. ಬಹುತೇಕ ಸಲ ನಾವು ವಿಫಲರಾಗುತ್ತೇವೆ ಎಂಬ ಭಯದಿಂದ ಋಣಾತ್ಮಕ ಚಿಂತನೆಗೆ ತೊಡಗುತ್ತೇವೆ.

4. ಇತರರನ್ನು ಕೀಳಾಗಿ ಕಾಣುವುದು:

ಇದು ಸರಣಿ ಪರಿಣಾಮ ಬೀರುತ್ತದೆ. ಬೇರೆಯವರನ್ನು ಬೇಸರಪಡಿಸುವುದಲ್ಲದೇ ಅಂತಿಮವಾಗಿ ನಿಮ್ಮ ಬೇಸರಕ್ಕೂ ಇದು ಕಾರಣವಾಗುತ್ತದೆ.

5. ವ್ಯಸನ ಬೆಳೆಸಿಕೊಳ್ಳುವುದು:

ಮನಸ್ಸು ಹಗುರ ಗಳಿಸಿಕೊಳ್ಳುವ ಸಲುವಾಗಿ ಮದ್ಯಪಾನ ಅಥವಾ ಮಾದಕ ವ್ಯಸನ ರೂಢಿಸಿಕೊಳ್ಳುವುದು ಇನ್ನೂ ಕೆಟ್ಟದು. ಸಂಕಷ್ಟದ ಪರಿಸ್ಥಿತಿ ಎದುರಿಸುವ ಶಕ್ತಿ ಬೆಳೆಸಿಕೊಳ್ಳಬೇಕಾದರೆ ಇವುಗಳನ್ನು ಜೀವನದಲ್ಲಿ ಎದುರಿಸಬೇಕು.

6. ಸಂತ್ರಸ್ತ ಮನೋಭಾವನೆ ಬೆಳೆಸಿಕೊಳ್ಳುವುದು:

ಸದಾ ಕಾಲ ನೀವು ಅಸಹಾಯಕ ಅಥವಾ ಸಂತ್ರಸ್ತ ಎಂಬ ಭಾವನೆಯನ್ನು ಹೊಂದಿರುವುದು ಕೂಡಾ ಕೆಟ್ಟದ್ದು.

7. ಕಾಲಹರಣ:

ವೃಥಾ ಕಾಲಹರಣ ಮಾಡುವುದು ಕೂಡಾ ನಿಮಗೆ ಯಾವ ರೀತಿಯಿಂದಲೂ ನೆರವಾಗದು. ಸಂಶೋಧನೆಯ ಪ್ರಕಾರ, ವ್ಯಾಯಾಮ ನಿಮ್ಮ ಆತ್ಮಗೌರವಕ್ಕೆ ಪೂರಕ ಹಾಗೂ ನಿಮ್ಮ ಮನಸ್ಥಿತಿಯನ್ನು ಅದು ಉತ್ತಮಪಡಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News