×
Ad

ಮಂದಸೌರ್ ಹಲ್ಲೆ:ನೀಮಚ್‌ನಲ್ಲಿ ಇಬ್ಬರು ಮಹಿಳೆಯರ ಬಂಧನ

Update: 2016-08-03 18:56 IST

ನೀಮಚ್(ಮ.ಪ್ರ):ಆ.3: ಗೋಮಾಂಸವನ್ನು ಸಾಗಿಸುತ್ತಿದ್ದರೆಂಬ ಆರೋಪದಲ್ಲಿ ಮಂದಸೌರ್ ರೈಲ್ವೆ ನಿಲ್ದಾಣದಲ್ಲಿ ಇಬ್ಬರು ಮುಸ್ಲಿಮ್ ಮಹಿಳೆಯರನ್ನು ಥಳಿಸಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದ ಮಹಿಳೆಯರಿಬ್ಬರನ್ನು ಇಂದು ನೀಮಚ್‌ನಲ್ಲಿ ಬಂಧಿಸಲಾಗಿದೆ.
ವೀಡಿಯೋ ಫೂಟೇಜಿನ ಆಧಾರದಲ್ಲಿ ಆರೋಪಿಗಳಾದ ರಜನಿ ತಿವಾರಿ ಮತ್ತು ಮಂಜು ಗುರ್ಜರ್ ಅವರನ್ನು ಗುರುತಿಸಲಾಗಿದ್ದು,ಅವರನ್ನು ಬಂಧಿಸಲಾಗಿದೆ. ಈ ಇಬ್ಬರು ಮಹಿಳೆಯರು ಯಾವುದೇ ಸಂಘಟನೆಯೊಂದಿಗೆ ಗುರುತಿಸಿಕೊಂಡಿಲ್ಲ ಎಂದು ರೈಲ್ವೆ ಎಸ್‌ಪಿ ಮಹೇಶ ಜೈನ್ ಅವರು ಸುದ್ದಿಗಾರರಿಗೆ ತಿಳಿಸಿದರು.
ಜು.26ರಂದು ಗೋಮಾಂಸವನ್ನು ಸಾಗಿಸುತ್ತಿದ್ದ ಆರೋಪದಲ್ಲಿ ಸಲ್ಮಾ ಮತ್ತು ಶಮೀಮ್‌ಬಿ ಎಂಬ ಮಹಿಳೆಯರನ್ನು ಥಳಿಸಿದ್ದ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಈ ಕುರಿತು ಪ್ರತಿಪಕ್ಷಗಳಾದ ಬಿಎಸ್‌ಪಿ ಮತ್ತು ಕಾಂಗ್ರೆಸ್ ರಾಜ್ಯಸಭೆಯಲ್ಲಿ ಕೋಲಾಹಲವನ್ನು ಸೃಷ್ಟಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News