ಅಚ್ಯುತಾನಂದನ್‌ಗೆ ಸಂಪುಟದರ್ಜೆ ಸ್ಥಾನಮಾನ

Update: 2016-08-03 16:10 GMT

ತಿರುವನಂತಪುರಂ, ಆ.3: ಕೇರಳ ಮಾಜಿ ಮುಖ್ಯಮಂತ್ರಿ ವಿ.ಎಸ್.ಅಚ್ಯುತಾನಂದನ್‌ರನ್ನು ಕೇರಳ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರನ್ನಾಗಿ ಬುಧವಾರ ರಾಜ್ಯ ಸರಕಾರ ನೇಮಕ ಮಾಡಿದೆ. ಅವರ ರಾಜಕೀಯ ಅನಿಶ್ಚಿತತೆಗೆ ಅಂತ್ಯ ಹಾಡಿರುವ ರಾಜ್ಯ ಸರಕಾರ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನವನ್ನು ಅಚ್ಯುತಾನಂದನ್‌ರಿಗೆ ನೀಡಿದೆ.

ನೂತನ ವಿಧಾನಸಭೆಯ ಪ್ರಥಮ ಅಧಿವೇಶನದಲ್ಲಿಯೇ ಸರಕಾರವು ಅನರ್ಹತೆ ಕಾಯ್ದೆಗೆ ತಿದ್ದುಪಡಿಯನ್ನು ತರುವ ಮೂಲಕ ವಿ.ಎಸ್. ಅಚ್ಯುತಾನಂದನ್‌ರನ್ನು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ. ತಿದ್ದುಪಡಿ ವಿಧೇಯಕಕ್ಕೆ ರಾಜ್ಯಪಾಲರು ಅನುಮೋದನೆಯನ್ನು ನೀಡಿದರೂ ತೊಂಬತ್ತರ ಹರೆಯದ ಸಿಪಿಎಂ ಹಿರಿಯ ನಾಯಕನ ನೇಮಕದ ಕುರಿತು ರಾಜ್ಯ ಸಂಪುಟ ಅಂತಿಮ ನಿರ್ಧಾರವನ್ನು ತೆಗೆದಿರಲಿಲ್ಲ.ವಿ.ಎಸ್ ಅವರಿಗೆ ಇದರಿಂದಾಗಿ ಇರಿಸುಮುರುಸು ಉಂಟಾಗಿತ್ತು ಎನ್ನಲಾಗಿದೆ.

ಕಳೆದ ಕೇರಳ ವಿಧಾನ ಸಭೆ ಚುನಾವಣೆಯಲ್ಲಿ ಎಡಪಕ್ಷಗಳ ನೇತೃತ್ವವನ್ನು ಅಚ್ಯುತಾನಂದನ್ ಯಶ್ವಸಿಯಾಗಿ ನಿಭಾಯಿಸಿದ್ದರೆಂಬ ಸಾಮಾನ್ಯ ಅನಿಸಿಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಅವರನ್ನು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲು ಸಿಪಿಎಂ ನಿರ್ಧರಿಸಿತ್ತು ಆದಾಗ್ಯೂ, ತನ್ನನು ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡುವವರೆಗೂ ಈ ಹುದ್ದೆಯನ್ನು ಒಪ್ಪಲು ಅವರಿಗೆ ಇಷ್ಟವಿರಲಿಲ್ಲ.ಕೊನೆಗೂ ಪಕ್ಷದ ಕೇಂದ್ರ ಸಮಿತಿಯ ನಾಯಕತ್ವ ಮಧ್ಯಸ್ಥಿಕೆ ವಹಿಸಿದ ಬಳಿಕ ಹುದ್ದೆಯನ್ನು ಸ್ವೀಕರಿಸಲು ಸಮ್ಮತಿಸಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News