ಕಡಬ: ಶ್ರಮದಾನದ ಮೂಲಕ ಗ್ರಾಮಸ್ಥರಿಂದಲೇ ರಸ್ತೆ ದುರಸ್ತಿ

Update: 2016-08-04 05:42 GMT

ಕಡಬ, ಆ.4: ಕೊಂಬಾರು ಗ್ರಾಮದ ಕೆಂಜಳ ಕೋಲ್ಕಜೆ ನಾರಡ್ಕದಿಂದ ನೆಟ್ಟಣ ಸಂಪರ್ಕ ರಸ್ತೆಯನ್ನು ಗ್ರಾಮಸ್ಥರು ಸೇರಿ ಶ್ರಮದಾನದ ಮೂಲಕ ದುರಸ್ತಿಗೊಳಿಸಿದರು.

ಕೊಂಬಾರು ಗ್ರಾಮದ ಕೆಂಜಳ ಮೂಲಕ ನೆಟ್ಟಣ ಸೇರುವ ಈ ರಸ್ತೆಯು ಸುಮಾರು 2 ಕಿ.ಮೀ. ಜಿ.ಪಂ. ರಸ್ತೆಯಾಗಿದೆ. ಓಡೋಳಿ ಎಂಬಲ್ಲಿ ಶಿಥಿಲಾವಸ್ಥೆಯಲ್ಲಿರುವ ಸೇತುವೆಯೊಂದಿದ್ದು, ಅಲ್ಲಿಂದ 2.5 ಕಿ.ಮೀ. ನಷ್ಟು ಗ್ರಾ.ಪಂ.ರಸ್ತೆಯಾಗಿದೆ. ಒಟ್ಟು 4 ಕಿ.ಮೀ. ಉದ್ದವಿರುವ ಈ ರಸ್ತೆ ಸಂಪೂರ್ಣ ನಾದುರಸ್ತಿಯಲ್ಲಿದ್ದು ಊರವರು ಶ್ರಮದಾನದ ಮೂಲಕ ರಸ್ತೆಯ ಎರಡು ಬದಿಗಳಲ್ಲಿ ಗಿಡ ಗಂಟಿಗಳನ್ನು ತೆರವುಗೊಳಿಸಿ ಜೆಸಿಬಿ ಯಂತ್ರದ ಮೂಲಕ ಚರಂಡಿ ತೆಗೆದು ದುರಸ್ತಿಗೊಳಿಸಿದರು.

ಈ ಸಂದರ್ಭದಲ್ಲಿ ಶ್ರಿಪಂಚಲಿಂಗೇಶ್ವರ ಯುವಕ ಮಂಡಲದ ಅಧ್ಯಕ್ಷ ಶಿವಪ್ರಸಾದ್ ಭಟ್ ಕಲ್ಲರ್ತನೆ, ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆಯ ಕೊಂಬಾರು ಒಕ್ಕೂಟದ ಅಧ್ಯಕ್ಷ ಲಿಂಗಪ್ಪ ಪೊರ್ದೆಲು, ಬಿಳಿನೆಲೆ ಗ್ರಾ.ಪಂ.ನ ಗುಮಾಸ್ತ ಸೇಸಪ್ಪ, ಸಾಮಾಜಿಕ ಕಾರ್ಯಕರ್ತ ರಾಮಕೃಷ್ಣ ಹೊಳ್ಳಾರು, ಧರ್ಮಪಾಲ ಕೋಲ್ಕಾಜೆ, ಗೋಪಾಲ ಓಡೋಳಿ, ಭುವನೇಶ್ವರ ಅಮ್ಚೂರು, ಶೀನಪ್ಪ ಗೌಡ ಇಡಾಲ, ಚಂದ್ರಶೇಖರ ಕುಂಡಕೋರಿ, ಶಿವರಾಮ ಕೊಡೆಂಕಿರಿ, ನಿತ್ಯಾನಂದ ಕೋಲ್ಕಜೆ, ಜನಾರ್ಧನ ಕೊಡೆಂಕಿರಿ, ಪ್ರಶಾಂತ್ ಹೊಳ್ಳಾರು, ಸುರೇಶ್ ಕೋಲ್ಕಜೆ, ವಿನೋದ್ ಹೊಳ್ಳಾರು, ಭುವನೇಶ್ವರ ಕೋಲ್ಕಜೆ, ಕೊರಗು ಕೋಲ್ಕಜೆ, ಸುಧೀರ್ ಕೋಲ್ಕಜೆ, ಚೋಮ ಕೈಂತಿಲ, ಮೋಹನ್ ರಾಜ್, ಪ್ರವೀಣ್, ದಿನೇಶ್, ತೇಜಸ್ ಕೂತೂರು, ಸಾಗರ್ ದೀಪ್ ಕಾಪಾರು, ರೇಗಸ್ ಸಿಆರ್‌ಸಿ, ವ್ನಿೇಶ್ವರ ಶ್ರಮದಾನದಲ್ಲಿ ಭಾಗವಹಿಸಿದ್ದರು.

ಯುವ ಉದ್ಯಮಿ ಕಿಶೋರ್ ಹೊಳ್ಳಾರು ಜೆಸಿಬಿ ಯಂತ್ರವನ್ನು ನೀಡಿ ಸಹಕರಿಸಿದರೆ, ನಾರಾಯಣ ಕೊಲ್ಕಾಜೆ, ಹರ್ಷಿತ್, ಸೋಮಶೇಖರ್ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News