×
Ad

ಇಲ್ಲಿನ ಜನರು ವಿಷಸರ್ಪದ ರಕ್ತವನ್ನು ಕುಡಿಯುತ್ತಿದ್ದಾರೆ!

Update: 2016-08-04 17:05 IST

ಇಂಡೋನೇಶಿಯ,ಆಗಸ್ಟ್ 4: ಹಾವೆಂದರೆ ಊರಗಲ ಜನರು ಓಡಿಹೋಗುತ್ತಾರೆ. ಹೆದರಿ ಕಂಪಿಸುತ್ತಾರೆ. ಆದರೆ ಇಂಡೋನೇಶಿಯದಲ್ಲಿ ಕೆಲವು ಜನರು ಹಾವಿನ ಮಾಂಸದಿಂದ ತಯಾರಿಸಿದ ತಿಂಡಿ ತಿನ್ನುತ್ತಾರೆ. ಮಾತ್ರವಲ್ಲ ಕೋಬ್ರಾದ(ಸರ್ಪ) ರಕ್ತವನ್ನು ಬಹಳ ಇಷ್ಟಪಟ್ಟು ಕುಡಿಯುತ್ತಿದ್ದಾರೆಂದು ವರದಿಯೊಂದು ತಿಳಿಸಿದೆ.

ಇಂಡೋನೇಶಿಯದ ರಾಜಧಾನಿ ಜಕಾರ್ತದಲ್ಲಿ ಜನರು ಕಾಮಶಕ್ತಿ ಹೆಚ್ಚಿಸಿಕೊಳ್ಳಲು ಮತ್ತು ಆರೋಗ್ಯವನ್ನು ರಕ್ಷಿಸಲು ಕೋಬ್ರಾದ ರಕ್ತವನ್ನು ಕುಡಿಯುತ್ತಿದ್ದಾರೆ ಹಾಗೂ ಮಾಂಸವನ್ನು ತಿನ್ನುತ್ತಾರೆ. ಮಹಿಳೆಯರು ತ್ವಚೆ ರಕ್ಷಣೆಗಾಗಿ ಸರ್ಪದ ರಕ್ತ ಕುಡಿಯುತ್ತಾರೆ. ಜಕಾರ್ತದಲ್ಲಿ ಹೆಚ್ಚಿನ ಕಡೆ ವಿಷಕಾರಿ ಸರ್ಪದ ರಕ್ತ ಮಾರುವ ಅಂಗಡಿಗಳು ಸಂಜೆ ಐದು ಗಂಟೆಗೆ ತೆರೆದುಕೊಳ್ಳುತ್ತವೆ.ಹಾಗೂ ರಾತ್ರಿ ಒಂದು ಗಂಟೆಗೆ ಮುಚ್ಚಿಕೊಳ್ಳುತ್ತವೆ. ಮಾರಾಟಗಾರ ಒಂದೇ ರಾತ್ರಿಯಲ್ಲಿ ಲಕ್ಷಾಂತರ ಹಣ ಜೇಬಿಗಿಳಿಸಿಕೊಳ್ಳುತ್ತಾನೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News