×
Ad

ರಾಜನ್ ವಿರುದ್ಧ ಪೂರಕ ದೋಷಾರೋಪ ಪಟ್ಟಿ ಸಲ್ಲಿಸಿದ ಸಿಬಿಐ

Update: 2016-08-05 23:35 IST

ಮುಂಬೈ, ಆ.5: ಪತ್ರಕರ್ತ ಜೆ ಡೇ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೋಟಾ ರಾಜನ್ ವಿರುದ್ಧ ಪೂರಕ ದೋಷಾರೋಪ ಪಟ್ಟಿಯನ್ನು ಸಿಬಿಐ ವಿಶೇಷ ಮೋಕಾ ನ್ಯಾಯಾಲಯಕ್ಕೆ ಶುಕ್ರವಾರ ಸಲ್ಲಿಸಿದೆ.
ಆಗಸ್ಟ್ 5ರೊಳಗೆ ತನಿಖಾ ಸಂಸ್ಥೆಯು ದೋಷಾರೋಪ ಪಟ್ಟಿಯನ್ನು ಸಲ್ಲಿಸುವಂತೆ ಮೋಕಾ ನ್ಯಾಯಾಲಯದ ನ್ಯಾಯಾಧೀಶ ಎಸ್.ಎಸ್ ಅಡ್ಕಾರ್ ಜುಲೈ 5 ರಂದು ಆದೇಶಿಸಿದ್ದರು.
   ರಾಜನ್ ಭೂಗತ ಜಗತ್ತಿನ ಕೃತಿಯಲ್ಲಿ ಬರೆದ ಹಿನ್ನೆಲೆಯಲ್ಲಿ 2011ರಲ್ಲಿ ಡೇ ಹತ್ಯೆಯ ಗುರಿಯಾಗಿತ್ತು ಎಂದು ಸಿಬಿಐ ತಿಳಿಸಿದೆ.ಪ್ರಕರಣದ ಹೆಚ್ಚುವರಿ ಆರೋಪಿಯಾದ ರವಿರಾಮ್‌ನನ್ನು ಸಾಕ್ಷಿಯಾಗಿಸಿರುವ ಜೊತೆಗೆ ತನಿಖಾ ಸಂಸ್ಥೆಯ ತನ್ನ ದೋಷಾರೋಪ ಪಟ್ಟಿಯಲ್ಲಿ 41 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿದೆ.
 ಮೊದಲು ರವಿರಾಮ್ ಸಾಕ್ಷಿಯಾಗಿದ್ದರು. ಆದರೆ ಈಗ ಆತ ರಾಜನ್ ಮತ್ತು ಇತರ ಆರೋಪಿಗಳ ನಡುವಿನ ಪ್ರಮುಖ ಕೊಂಡಿಯಾಗಿರುವುದು ಪತ್ತೆಯಾಗಿದೆ.ಅಲ್ಲದೇ ರಾಜನ್ ಸೂಚನೆಯಂತೆ 20 ಜಾಗತಿಕ ಸಿಮ್‌ನ್ನು ಪೂರೈಕೆ ಮಾಡಿದ್ದನು ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News