×
Ad

ಬಿಬಿಸಿ ಸಾಕ್ಷಚಿತ್ರ ನಿಷೇಧ ತೆರವಿಗೆ ಹೈಕೋರ್ಟ್ ನಕಾರ

Update: 2016-08-05 23:38 IST

ಹೊಸದಿಲ್ಲಿ, ಆ.5: ಕಳೆದ 2012ರ ಡಿ.16ರಂದು ನಡೆದಿದ್ದ ಸಾಮೂಹಿಕ ಅತ್ಯಾಚಾರದ ಕುರಿತಾದ ಬಿಬಿಸಿಯ ಸಾಕ್ಷಚಿತ್ರ ‘ಇಂಡಿಯನ್ ಡಾಟರ್’ ಮೇಲಿನ ನಿರ್ಬಂಧ ತೆರವುಗೊಳಿಸಲು ದಿಲ್ಲಿ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ.

ಬಿಬಿಸಿಯ ಚಿತ್ರದ ಮೇಲಿನ ನಿಷೇಧ ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಹಲವು ರಿಟ್ ಅರ್ಜಿಗಳ ಕುರಿತಾದ ತೀರ್ಪನ್ನು ಅದು 2016ರ ಮಾರ್ಚ್‌ನಲ್ಲಿ ಕಾದಿರಿಸಿತ್ತು. ವಿಚಾರಣಾ ನ್ಯಾಯಾಲಯದಲ್ಲಿ ಪ್ರಕರಣವು ಬಾಕಿಯಿರುವುದನ್ನು ಹೈಕೋರ್ಟ್ ಗಮನಿಸಿತ್ತು. ಚಿತ್ರವು ಶಿಕ್ಷೆ ವಿಧಿಸಲ್ಪಟ್ಟಿರುವ ಒಬ್ಬ ಅತ್ಯಾಚಾರಿಯ ಮಾನಸಿಕತೆಯನ್ನು ಬಹಿರಂಗ ಪಡಿಸಿದೆ. ಆದುದರಿಂದ ಅದರ ಮೇಲಿನ ನಿಷೇಧವನ್ನು ತೆರವುಗೊಳಿಸಬೇಕೆಂದು ಕೋರಿ ಮೂವರು ಕಾನೂನು ವಿದ್ಯಾರ್ಥಿಗಳು ಅರ್ಜಿಗಳನ್ನು ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News