ಗುಜರಾತ್ ಮುಖ್ಯಮಂತ್ರಿಯಾಗಿ ವಿಜಯ್ ರೂಪಾನಿ ಆ.7 ರಂದು ಪ್ರತಿಜ್ಞೆ

Update: 2016-08-06 14:47 GMT

ಗಾಂಧಿನಗರ, ಆ.6: ಗುಜರಾತ್ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಶುಕ್ರವಾರ ಆಯ್ಕೆಯಾಗಿರುವ ರಾಜ್ಯದ ನಿಯೋಜಿತ ಮುಖ್ಯಮಂತ್ರಿ ವಿಜಯ್ ರೂಪಾನಿ ಇಂದು ರಾಜ್ಯಪಾಲರನ್ನು ಭೇಟಿಯಾಗಿ ಹೊಸ ಸರಕಾರ ರಚನೆಗೆ ಅಹವಾಲು ಮಂಡಿಸಿದ್ದಾರೆ.

ರೂಪಾನಿ ಆ.7 ರ ಮಧ್ಯಾಹ್ನ 12:40ರ ವೇಳೆ ಪ್ರಮಾಣ ವಚನ ಸ್ವೀಕರಿಸಲಿದ್ದಾರಂದು ಬಿಜೆಪಿಯ ರಾಜ್ಯ ಪ್ರಭಾರಿ ದಿನೇಶ್ ಶರ್ಮ ತಿಳಿಸಿದ್ದಾರೆ. ರೂಪಾನಿ, ಶರ್ಮ, ನಿಯೋಜಿತ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಹಾಗೂ ರಾಜ್ಯದ ಇತರ ನಾಯಕರು ರಾಜ್ಯಪಾಲರನ್ನು ಭೇಟಿಯಾದರು. ಆದರೆ ಅವರೊಂದಿಗೆ ನಿರ್ಗಮನ ಮುಖ್ಯಮಂತ್ರಿ ಆನಂದಿ ಬೆನ್ ಪಟೇಲ್ ಇರಲಿಲ್ಲ.

ಬಿಜೆಪಿ ಶಾಸಕಾಂಗ ಪಕ್ಷವು ವಿಜಯ್ ರೂಪಾಯಿಯವರನ್ನು ಮುಖ್ಯಮಂತ್ರಿಯಾಗಿ ಹಾಗೂ ನಿತಿನ್ ಪಟೇಲರನ್ನು ಉಪಮುಖ್ಯಮಂತ್ರಿಯಾಗಿ ಅನುಮೋದಿಸಿರುವುದನ್ನು ತಾವು ರಾಜ್ಯಪಾಲ ಒ.ಪಿ. ಕೊಹ್ಲಿಯವರಿಗೆ ತಿಳಿಸಿದೆವು. ಅವರು ಆ.7 ರ ಮಧ್ಯಾಹ್ನ 12:40ಕ್ಕೆ ಪ್ರಮಾಣವಚನ ಬೋಧಿಸಲು ಒಪ್ಪಿಕೊಂಡಿದ್ದಾರೆಂದು ಶರ್ಮಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News