ತುರ್ತು ಸಂದೇಶ ಕಳಿಸಿದ ವಿಮಾನ ರೇಡಾರ್ ನಿಂದ ನಾಪತ್ತೆ .ಮತ್ತೆ...
Update: 2016-08-06 21:31 IST
ಅಲ್ಜೀರ್ಸ್ , ಆ. 6 : ತುರ್ತು ಪರಿಸ್ಥಿತಿ ಘೋಷಿಸಿ ' ರೇಡಾರ್ ನಿಂದ ನಾಪತ್ತೆಯಾದ ' ವಿಮಾನವೊಂದು ಬಳಿಕ ಸುರಕ್ಷಿತವಾಗಿ ಬಂದಿಳಿದ ಘಟನೆ ಅಲ್ಜೀರಿಯ ದೇಶದ ರಾಜಧಾನಿ ಅಲ್ಜೀರ್ಸ್ ನಲ್ಲಿ ನಡೆದಿದೆ. ಶನಿವಾರ ಮಧ್ಯಾಹ್ನ 1.30 ಕ್ಕೆ ಅಲ್ಜೀರ್ಸ್ ನಿಂದ ಮಾರ್ಸೆಲ್ ಗೆ ಹಾರಿದ ವಿಮಾನ ಸ್ವಲ್ಪವೇ ಸಮಯದ ಬಳಿಕ ತುರ್ತು ಪರಿಸ್ಥಿತಿಯ ಸಂದೇಶ ಕಳಿಸಿತು. ಬಳಿಕ ವಿಮಾನ ಮತ್ತೆ ಅಲ್ಜೀರ್ಸ್ ಗೆ ಮರಳುತ್ತಿರುವಂತೆ ರೇಡಾರ್ ತೋರಿಸಿತು. ಆದರೆ ಕೆಲವೇ ಕ್ಷಣಗಳಲ್ಲಿ ವಿಮಾನ ರೇಡಾರ್ ನಿಂದ ಸಂಪೂರ್ಣ ನಾಪತ್ತೆಯಾಯಿತು ಎಂದು ತಿಳಿದು ಬಂದಿದೆ.
ಆದರೆ ಮತ್ತೆ ಈ ಬೋಯಿಂಗ್ 737-600 ವಿಮಾನ್ ಸುರಕ್ಷಿತವಾಗಿ ಅಲ್ಜೀರ್ಸ್ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು ಎಂದು ಏರ್ ಅಲ್ಜೀರ್ ವಕ್ತಾರರು ತಿಳಿಸಿದ್ದಾರೆ. ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿತ್ತು ಎಂದು ಹೇಳಲಾಗಿದ್ದು ಖಚಿತ ಕಾರಣ ತಿಳಿದು ಬಂದಿಲ್ಲ.