ಕಾಶ್ಮೀರ ಸಮಸ್ಯೆ ಬಗ್ಗೆ ಪ್ರಧಾನಿ ಯಾಕೆ ಮಾತಾಡುವುದಿಲ್ಲ? : ಜಮ್ಮು- ಕಾಶ್ಮೀರ, ಸಿಪಿಎಂ ನಾಯಕನ ಪ್ರಶ್ನೆ
ಶ್ರೀನಗರ,ಆ.7: ಕಾಶ್ಮೀರ ಸಂಘರ್ಷಗ್ರಸ್ತವಾಗಿಯೂ ಪ್ರಧಾನಿ ನರೇಂದ್ರಮೋದಿ ಯಾಕೆ ಮೌನ ಪಾಲಿಸುತ್ತಿದ್ದಾರೆ ಎಂದು ಜಮ್ಮು-ಕಾಶ್ಮೀರದ ಜಮ್ಮು ಕಾಶ್ಮೀರದ ಸಿಪಿಎಂ ಕಾರ್ಯದರ್ಶಿ ಹಾಗೂ ಕುಲ್‌ಗಾಂ ಶಾಸಕ ಮುಹಮ್ಮದ್ ಯೂಸುಫ್ ತಿರಿಗಾಮಿ ಪ್ರಶ್ನಿಸಿದ್ದಾರೆ ಎಂದು ವರದಿಯಾಗಿದೆ. ಈ ಮೌನದ ಅರ್ಥವೇನು?- ಎಂದ ಅವರು ಈ ಪರಿಸ್ಥಿತಿಯಲ್ಲಿ ಕಾಶ್ಮೀರದಲ್ಲಾಗುವ ದಮನದ ವಿರುದ್ಧ ಪ್ರಜಾಪ್ರಭುತ್ವಪರ ಶಕ್ತಿಗಳು ಧ್ವನಿಯೆತ್ತಬೇಕು. ಪಾರ್ಲಿಮೆಂಟ್‌ನಲ್ಲಿ ಪ್ರತಿಪಕ್ಷಗಳು ಕಾಶ್ಮೀರ ವಿಷಯವನ್ನು ಬಲವಾಗಿ ಪ್ರಸ್ತಾಪಿಸಬೇಕು,ಹಾಗೂ ಮೋದಿ ಮೌನತೊರೆಯುವಂತೆ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.
ಪ್ರತಿಭಟನಕಾರರ ವಿರುದ್ಧ ಸರಕಾರ ಸ್ವೀಕರಿಸುವ ಬೇಜವಾಬ್ದಾರಿಕೆಯ ಮತ್ತು ಅಮಾನವೀಯ ಕ್ರಮಗಳು ಸಮಸ್ಯೆಯನ್ನು ಇನ್ನಷ್ಟು ಬಿಗಾಡಿಸುತ್ತಿವೆ. ಎಲ್ಲಪಕ್ಷಗಳನ್ನು ಸೇರಿಸಿ ಅರ್ಥಪೂರ್ಣವಾದ ಚರ್ಚೆ ನಡೆಯಬೇಕು ಹಾಗೂ ಈ ಸಭೆಯಲ್ಲಿ ಕಾಶ್ಮೀರ ವಿಷಯದಲ್ಲಿ ಎಲ್ಲರಿಗೂ ಸಮ್ಮತವಾಗುವಂತಹ ಒಮ್ಮತದ ರಾಜಕೀಯ ತೀರ್ಮಾನ ಕೈಗೊಳ್ಳಬೇಕಾಗಿದೆ ಎಂದು ತಿರಿಗಾಮಿ ಹೇಳಿದ್ದಾರೆಂದು ವರದಿ ತಿಳಿಸಿದೆ.