ಅಮೆರಿಕ: ಹಿಜಾಬ್ ಧರಿಸಿದ್ದಕ್ಕಾಗಿ ಯುವತಿಗೆ ಉದ್ಯೋಗದಿಂದ ಉಚ್ಚಾಟನೆ
ವಾಶಿಂಗ್ಟನ್,ಆ.7: ಜನಾಂಗೀಯ ತಾರತಮ್ಯದ ಪ್ರಕರಣವೊಂದರಲ್ಲಿ, ಹಿಜಾಬ್ ಧರಿಸಿದ್ದಕ್ಕಾಗಿ ಮುಸ್ಲಿಮ್ ಯುವತಿಯೊಬ್ಬಳನ್ನು ಆಕೆ ದಂತವೈದ್ಯಕೀಯ ಕ್ಲಿನಿಕ್‌ನ ಮಾಲಕರು, ಆಕೆಯನ್ನು ಉದ್ಯೋಗದಿಂದ ಕಿತ್ತು ಹಾಕಿದ ಆಘಾತಕಾರಿ ಘಟನೆ ಅಮೆರಿಕದ ವರ್ಜಿನಿಯಾದಲ್ಲಿ ವರದಿಯಾಗಿದೆ.
ಕರ್ತವ್ಯ ನಿರ್ವಹಣೆಯ ವೇಳೆ ಸ್ಕಾರ್ಫ್ ಧರಿಸಿದ್ದೆ ಎಂಬ ಏಕೈಕ ಕಾರಣಕ್ಕಾಗಿ ತನ್ನನ್ನು ಉಚ್ಚಾಟಸಲಾಗಿದಯೆಂದು ವರ್ಜಿನಿಯಾದ ಫೇರ್‌ಓಕ್ಸ್ ಡೆಂಟಲ್ ಕ್ಲಿನಿಕ್‌ನಲ್ಲಿ ದಂತವೈದ್ಯಕೀಯ ಸಹಾಯಕಿಯಾಗಿದ್ದ ನಝಾಫ್ ಖಾನ್ ಶನಿವಾರ ಆರೋಪಿಸಿದ್ದಾರೆ.
‘‘ನನಗೆ ನಿಜಕ್ಕೂ ನೋವಾಗಿದೆ. ಈ ಘಟನೆ ನಡೆದಾಗಿನಿಂದ ನಾನು ತಲ್ಲಣಗೊಂಡಿದ್ದೇನೆ’’ ಎಂದು ನಜಾಫ್ ಎನ್‌ಬಿಸಿ ವಾಶಿಂಗ್ಟನ್ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ನಝಾಫ್ ಮೂರು ದಿನಗಳ ಹಿಂದೆಯಷ್ಟೇ ಈ ಉದ್ಯೋಗಕ್ಕೆ ಸೇರ್ಪಡೆಗೊಂಡಿದ್ದಳು. ಮೊದಲ ಎರಡು ದಿನ ಆಕೆ ಸ್ಕಾರ್ಫ್ ಧರಿಸಿರಲಿಲ್ಲ. ಆದರೆ ಮೂರನೆ ದಿನ ಆಕೆ ಆದನ್ನು ಧರಿಸಲು ನಿರ್ಧರಿಸಿದಳು. ಈ ಉದ್ಯೋಗದಲ್ಲಿ ಮುಂದುವರಿಯಲು ನಿರ್ಧರಿಸಿದ್ದ ಆಕೆ, ಸ್ಕಾರ್ಫ್ ಧರಿಸಿ ಕರ್ತವ್ಯಕ್ಕೆ ಹಾಜರಾಗಿದ್ದಳು.
ಫೇರ ಓಕ್ಸ್ ಡೆಂಟಲ್ ಕೇರ್ ಆಸ್ಪತ್ರೆಯ ಮಾಲಕನಾದ ಡಾ. ಚುಕ್ ಜೊ, ಹಿಜಬ್ ತೆಗೆಯುವಂತೆ ಆಕೆಗೆ ಸೂಚನೆ ನೀಡಿದ್ದರು. ಕಚೇರಿಯಲ್ಲಿ ತಾನು ಜಾತ್ಯತೀತ ವಾತಾವರಣವನ್ನು ಸೃಷ್ಟಿಸಲು ಬಯಸುವುದರಿಂದ ಆಕೆ ಸ್ಕಾರ್ಫ್ ಧರಿಸದ್ಡಂತೆ ತಾಕೀತು ಮಾಡಿದ್ದ. ‘‘ಆದರೆ ನಾನು, ಧರ್ಮದ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲವೆಂದು ದೃಢವಾಗಿ ಹೇಳಿದಾಗ ಆತ ತನಗೆ ಬಾಗಿಲಿನೆಡೆಗೆ ಕೈ ತೋರಿಸಿದ ಮತ್ತು ನಾನು ಹೊರನಡೆದೆ’’ಎಂದು ನಝಾಫ್ ಖಾನ್ ತಿಳಿಸಿದ್ದಾರೆ.