ಮೂಡುಬಿದಿರೆ: ಕಡಲಕೆರೆಗೆ 50 ಸಾವಿರ ಮೀನಿನ ಮರಿಗಳ ಸಮರ್ಪಣೆ

Update: 2016-08-08 10:14 GMT

ಮೂಡುಬಿದಿರೆ, ಆ.8: ಒಂಟಿಕಟ್ಟೆಯಲ್ಲಿರುವ ಕಡಲಕೆರೆಗೆ 50 ಸಾವಿರ ಮೀನಿನ ಮರಿಗಳ ಸಮರ್ಪಣೆ, ದೋಣಿವಿಹಾರಕ್ಕೆ ಚಾಲನೆ ಹಾಗೂ ವನಮಹೋತ್ಸವ ಕಾರ್ಯಕ್ರಮವು ರವಿವಾರ ನಡೆಯಿತು.

ಮೂಡುಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಕಡಲಕೆರೆಗೆ ಮೀನುಗಳನ್ನು ಸಮರ್ಪಿಸಿ ಮಾತನಾಡಿ, ಕಡಲಕೆರೆಯ ನಿಸರ್ಗಧಾಮದ 18 ಎಕರೆ ಪ್ರದೇಶದಲ್ಲಿ ಹೂಳೆತ್ತುವ ಕಾರ್ಯವು ಈಗಾಗಲೇ ಮುಗಿದಿದೆ. ಪ್ರತಿವರ್ಷದಂತೆ ಈ ವರ್ಷವೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕೆರೆಗೆ ಮೀನಿನ ಮರಿಗಳನ್ನು ಸಮರ್ಪಣೆ ಮಾಡಲಾಗಿದೆ. ವಿವಿಧ ಜಾತಿಯ ಪಕ್ಷಿಗಳನ್ನು ಒಳಗೊಂಡಿರುವ ಪಕ್ಷಿಧಾಮವೂ ಇದೆ. ಪಕ್ಷಿಗಳಿಗಾಗಿ ಹಣ್ಣು ಹಂಪಲುಗಳ ಗಿಡಗಳನ್ನು ನೆಡಲಾಗಿದೆ. ಹಕ್ಕಿಗಳಿಗೆ ಮೀನು ಆಹಾರವಾಗುತ್ತೆ ಮತ್ತು ಪರಿಸರದ ಜನರು ಮೀನುಗಳ ಪ್ರಯೋಜನವನ್ನು ಪಡೆಯುತ್ತಾರೆ. ಇದಲ್ಲದೆ ಈ ವರ್ಷ ಕೋಟಿ ವೃಕ್ಷ ಅಭಿಯಾನದಂಗವಾಗಿ ಮನಮಹೋತ್ಸವದ ಮೂಲಕ ಪರಿಸರದಲ್ಲಿ ಗಿಡಗಳನ್ನು ನೆಡಲಾಗಿದೆ ಎಂದು ತಿಳಿಸಿದರು.

ಮೂಡುಬಿದಿರೆ ಪುರಸಭಾಧ್ಯಕ್ಷೆ ರೂಪಾ ಶೆಟ್ಟಿ, ಮೂಡ ಅಧ್ಯಕ್ಷ ಸುರೇಶ್ ಕೋಟ್ಯಾನ್, ಪುರಸಭಾ ಸದಸ್ಯ ಪಿ.ಕೆ.ತೋಮಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ತಹಶೀಲ್ದಾರ್ ಮುಹಮ್ಮದ್ ಇಸಾಕ್, ಮೂಡುಬಿದಿರೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಆರ್.ಸುಬ್ರಹ್ಮಣ್ಯ, ವಲಯ ಅರಣ್ಯಾಧಿಕಾರಿ ಜಿ.ಡಿ.ದಿನೇಶ್, ಮೂಡುಬಿದಿರೆ ರೋಟರಿ ಕ್ಲಬ್ ಅಧ್ಯಕ್ಷ ಮುಹಮ್ಮದ್ ಶರೀಫ್, ಲಯನ್ಸ್ ಅಧ್ಯಕ್ಷ ರುಕ್ಕಯ ಪೂಜಾರಿ, ಕಲ್ಲಬೆಟ್ಟು ಎಕ್ಸಲೆಂಟ್ ಕಾಲೇಜಿನ ಅಧ್ಯಕ್ಷ ಯುವರಾಜ ಜೈನ್, ಕೃಷಿ ತಜ್ಞ ಡಾ.ಎಲ್.ಸಿ.ಸೋನ್ಸ್, ಇನ್ನರ್‌ವೀಲ್ ಅಧ್ಯಕ್ಷೆ ಡಾ.ಸೀಮಾ ಸುದೀಪ್, ಆಲಂಗಾರು ಲಯನ್ಸ್ ಕ್ಲಬ್‌ನ ಕಾರ್ಯದರ್ಶಿ ಸುಜಾತ, ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ರಕ್ಷಾ ಸಮಿತಿಯ ಸದಸ್ಯ ಸಿ.ಎಚ್.ಗಫೂರ್, ಪೊಲೀಸ್ ನಿರೀಕ್ಷಕ ರಾಮಚಂದ್ರ, ಬೋಟ್ ಹೌಸ್‌ನ ನಿರ್ವಾಹಕ ನಝೀರ್ ಹಾಗೂ ಸಂಘ ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿದ್ದರು.

ಅರಣ್ಯ ಇಲಾಖೆ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕಡಲಕೆರೆಯ ಹಲವಾರು ಹಲವಾರು ಗಿಡಗಳನ್ನು ನೆಡಲಾಯಿತು. ಹಾಗೂ ವಿದ್ಯಾರ್ಥಿಗಳಿಗೆ ದೋಣಿ ವಿಹಾರ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News