ನಾವು ಎಲ್ಲಿಗೆ ಹೋಗಲಿ ಟ್ರಂಪ್?: ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಮೊದಲ ಮುಸ್ಲಿಮ್-ಅಮೆರಿಕನ್ ಮಹಿಳೆ
ವಾಶಿಂಗ್ಟನ್, ಆ. 9: ಹಿಜಾಬ್ ಧರಿಸಿ ಒಲಿಂಪಿಕ್ಸ್‌ನಲ್ಲಿ ಕತ್ತಿವರಸೆ ಆಟದಲ್ಲಿ ಸ್ಪರ್ಧಿಸುತ್ತಿರುವ ಮೊದಲ ಅಮೆರಿಕನ್ ಮುಸ್ಲಿಮ್ ಮಹಿಳೆ ಇಬ್ತಿಹಾಜ್ ಮುಹಮ್ಮದ್, ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ಗೊಂದು ಮಾರ್ಮಿಕ ಪ್ರಶ್ನೆಯೊಂದನ್ನು ಕೇಳಿದ್ದಾರೆ- 'ನಾವು ಎಲ್ಲಿಗೆ ಹೋಗಲಿ'?
''ಅವರ ಮಾತುಗಳು ಅತ್ಯಂತ ಅಪಾಯಕಾರಿ ಎಂದು ನನಗನಿಸುತ್ತದೆ'' ಎಂದು ಇಬ್ತಿಹಾಜ್ ಕಳೆದ ವಾರ ಸಿಎನ್‌ಎನ್‌ಗೆ ಹೇಳಿದ್ದಾರೆ.
''ಈ ರೀತಿಯ ಹೇಳಿಕೆಗಳನ್ನು ನೀಡುವಾಗ, ಅವುಗಳು ಜನರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಯಾರೂ ಯೋಚಿಸುವುದಿಲ್ಲ. ನಾನು ಆಫ್ರಿಕನ್-ಅಮೆರಿಕನ್. ನನಗೆ ಹೋಗಲು ಬೇರೆ ಮನೆ ಇಲ್ಲ. ನನ್ನ ಕುಟುಂಬ ಇಲ್ಲೆ ಹುಟ್ಟಿದೆ. ನಾನು ಇಲ್ಲೇ ಹುಟ್ಟಿದ್ದೇನೆ. ನಾನು ಜರ್ಸಿಯಲ್ಲಿ ಬೆಳೆದೆ. ನನ್ನ ಎಲ್ಲ ಕುಟುಂಬ ಸದಸ್ಯರು ಜರ್ಸಿಯಲ್ಲೇ ಇದ್ದಾರೆ. ನಾವು ಎಲ್ಲಿಗೆ ಹೋಗಲಿ?'' ಎಂದು ಅವರು ಕೇಳುತ್ತಾರೆ.
ಮುಸ್ಲಿಮರ ವಿರುದ್ಧ ಟ್ರಂಪ್ ನಡೆಸುತ್ತಿರುವ ವಾಗ್ದಾಳಿಗಳಿಂದ ವಿಚಲಿತರಾಗಿರುವ ಇಬ್ತಿಹಾಜ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.