ಡೆಮಾಕ್ರಟಿಕ್ ಪ್ರೈಮರಿ ಚುನಾವಣೆಯಲ್ಲಿ ಇಲ್ಹಾನ್ ಉಮರ್ ಗೆ ಐತಿಹಾಸಿಕ ಜಯ
Update: 2016-08-10 20:57 IST
ಮಿನಪೊಲಿಸ್ (ಅಮೆರಿಕ), ಆ. 10: ಅಮೆರಿಕದ ಡೆಮಾಕ್ರಟಿಕ್ ಪಕ್ಷದ ಪ್ರಾಥಮಿಕ ಚುನಾವಣೆಯಲ್ಲಿ ಸೊಮಾಲಿಯನ್ನರ ಹಕ್ಕುಗಳ ಕಾರ್ಯಕರ್ತೆಯೊಬ್ಬರು ಮಿನಸೋಟ ರಾಜ್ಯ ಶಾಸಕಾಂಗದಲ್ಲಿ ದೀರ್ಘಾವಧಿ ಸದಸ್ಯರಾಗಿದ್ದ ಓರ್ವರನ್ನು ಸೋಲಿಸಿದ್ದಾರೆ.
ಈ ಮೂಲಕ ಇಲ್ಹಾನ್ ಉಮರ್ ಅಮೆರಿಕದ ಮೊದಲ ಸೊಮಾಲಿ-ಅಮೆರಿಕನ್ ಸಂಸದರಾಗುವ ಅವಕಾಶವನ್ನು ಪಡೆದುಕೊಂಡಿದ್ದಾರೆ.
ಡೆಮಾಕ್ರಟ್‌ಗಳೇ ಹೆಚ್ಚಾಗಿರುವ ಮಿನಪೊಲಿಸ್ ಜಿಲ್ಲೆಯಲ್ಲಿ ಮಂಗಳವಾರ ನಡೆದ ಅಭ್ಯರ್ಥಿ ಸ್ಪರ್ಧೆಯಲ್ಲಿ ಇಲ್ಹಾನ್ 22 ಬಾರಿಯ ಪ್ರತಿನಿಧಿ ಫೈಲಿಸ್ ಕಾಹ್ನ್‌ರನ್ನು ಸೋಲಿಸಿದರು.
ಜಿಲ್ಲೆಯಲ್ಲಿ ಸೊಮಾಲಿಯ ಹಾಗೂ ಇತರ ಪೂರ್ವ ಆಫ್ರಿಕನ್ ದೇಶಗಳ ವಲಸಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ರಾಜಕೀಯ ಕಾರ್ಯಕರ್ತೆಯಾಗಿರುವ ಉಮರ್ ಮಿನಪೊಲಿಸ್ ಸಿಟಿ ಕೌನ್ಸಿಲ್‌ನ ಮಾಜಿ ಸಹಾಯಕರಾಗಿದ್ದಾರೆ.