×
Ad

ಮೂರನೆ ಟೆಸ್ಟ್ : ಅಶ್ವಿನ್-ಸಹಾ ಶತಕ : ಭಾರತ ಮೊದಲ ಇನಿಂಗ್ಸ್ ಆಲೌಟ್ 353

Update: 2016-08-10 22:37 IST

  ಗ್ರಾಸ್ ಐಸ್ಲೆಟ್, ಆ.10: ವೆಸ್ಟ್ ಇಂಡೀಸ್ ವಿರುದ್ಧದ ಮೂರನೆ ಕ್ರಿಕೆಟ್ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಭಾರತ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಹಾ ಶತಕದ ನೆರವಿನಲ್ಲಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ.
 ಟೆಸ್ಟ್‌ನ ಎರಡನೆ ದಿನವಾಗಿರುವ ಬುಧವಾರ ಪಾನೀಯ ವಿರಾಮದ ಬಳಿಕ ಭಾರತ 129.4 ಓವರ್‌ಗಳಲ್ಲಿ 353 ರನ್‌ಗಳಿಗೆ ಆಲೌಟಾಗಿದೆ.
  ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ ನಾಲ್ಕನೆ ಶತಕ (118) ಮತ್ತು ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಚೊಚ್ಚಲ ಶತಕ (104) ದಾಖಲಿಸಿದರು.
  ಅಶ್ವಿನ್ ಊಟದ ವಿರಾಮದ ಬಳಿಕ ನಾಲ್ಕನೆ ಟೆಸ್ಟ್ ಶತಕ ದಾಖಲಿಸಿದರು. ಬಳಿಕ ಸಹಾ ಶತಕ ಪೂರೈಸಿದರು.ಆರನೆ ವಿಕೆಟ್‌ಗೆ ಅಶ್ವಿನ್ ಮತ್ತು ಸಹಾ 213 ರನ್‌ಗಳ ಜೊತೆಯಾಟ ನೀಡಿದರು. ಸಹಾ ಅವರಿಗೆ ಜೋಸೆಫ್ ಪೆವಿಲಿಯನ್ ಹಾದಿ ತೋರಿಸುವುದರೊಂದಿಗೆ ಇವರ ಜೊತೆಯಾಟವನ್ನು ಮುರಿದರು. ಕೇವಲ 37 ರನ್‌ಗಳಿಗೆ ಭಾರತದ ಅಂತಿಮ ನಾಲ್ಕು ವಿಕೆಟ್‌ಗಳು ಪತನಗೊಂಡಿತು.
ಚೊಚ್ಚಲ ಟೆಸ್ಟ್ ಆಡುತ್ತಿರುವ ಜೋಸೆಫ್ 69ಕ್ಕೆ 3 ವಿಕೆಟ್, ಗ್ಯಾಬ್ರಿಯೆಲ್ (84ಕ್ಕೆ 2), ಚೇಸ್ (70ಕ್ಕೆ 2) ತಲಾ ಎರಡು ಮತ್ತು ಕಮಿನ್ಸ್ 54ಕ್ಕೆ 1 ವಿಕೆಟ್ ಪಡೆದರು.
ಭಾರತ 234/5: ಭಾರತ ಮೊದಲ ದಿನ ಆರಂಭದಲ್ಲಿ ವಿಂಡೀಸ್‌ನ ದಾಳಿಗೆ ಸಿಲುಕಿದರೂ ದಿನದಾಟದಂತ್ಯಕ್ಕೆ 90 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 234 ರನ್ ಗಳಿಸಿತ್ತು.
ಅಶ್ವಿನ್ ಔಟಾಗದೆ 75 ರನ್ ಮತ್ತು ವೃದ್ಧಿಮಾನ್ ಸಹಾ ಔಟಾಗದೆ 46 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದರು.
ಇವರು 6ನೆ ವಿಕೆಟ್‌ಗೆ ಜೊತೆಯಾಟದಲ್ಲಿ 108 ರನ್ ತಂಡವನ್ನು ಆದರಿಸಿದ್ದರು. 49.3 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 126 ರನ್ ಗಳಿಸಿದ್ದ ಭಾರತದ ಸ್ಕೋರ್‌ನ್ನು ಏರಿಸಿದ್ದರು.
ಮೊದಲ ಟೆಸ್ಟ್ ಆಡುತ್ತಿರುವ ಜೋಸೆಫ್ ಮತ್ತು ರೋಸ್ಟನ್ ಚೇಸ್ ಭಾರತದ ಬ್ಯಾಟಿಂಗ್‌ಗೆ ಅಡ್ಡಿಪಡಿಸಿದ್ದರೂ ಭಾರತ ಮೊದಲ ದಿನ ಗೌರವಯುತ ಮೊತ್ತ ದಾಖಲಿಸಿತ್ತು.
ಸ್ಕೋರ್ ಪಟ್ಟಿ
ಭಾರತ ಮೊದಲ ಇನಿಂಗ್ಸ್ 129.4 ಓವರ್‌ಗಳಲ್ಲಿ ಆಲೌಟ್ 353
        ರಾಹುಲ್ ಸಿ ಬ್ರಾಥ್‌ವೈಟ್ ಬಿ ಚೇಸ್050
        ಶಿಖರ್ ಧವನ್ ಸಿ ಡೌರಿಚ್ ಬಿ ಗ್ಯಾಬ್ರಿಯಲ್001
        ವಿರಾಟ್ ಕೊಹ್ಲಿ ಸಿ ಬ್ರಾವೊ ಬಿ ಜೋಸೆಫ್003
            ಅಜಿಂಕ್ಯ ರಹಾನೆ ಬಿ ಚೇಸ್035
            
        ರೋಹಿತ್ ಶರ್ಮ ಸಿ ಡೌರಿಚ್ ಬಿ ಜೋಸೆಫ್009

ಆರ್.ಅಶ್ವಿನ್ ಸಿ ಬ್ಲಾಕ್‌ವುಡ್ ಬಿ ಕಮಿನ್ಸ್118
        ವೃದ್ದಿಮಾನ್ ಸಹಾ ಸಿ ಡೌರಿಚ್ ಬಿ ಜೋಸೆಫ್104
            ಜಡೇಜ ಸಿ ಡೌರಿಚ್ ಬಿ ಕಮಿನ್ಸ್006
        ಬಿ.ಕುಮಾರ್ ಸಿ ಜಾನ್ಸನ್ ಬಿ ಗ್ಯಾಬ್ರಿಯೆಲ್000
            ಮುಹಮ್ಮದ್ ಶಮಿ ಔಟಾಗದೆ000
         ಇಶಾಂತ್ ಶರ್ಮ ಸಿ ಜಾನ್ಸನ್ ಬಿ ಕಮಿನ್ಸ್000
                    ಇತರೆ27
ವಿಕೆಟ್ ಪತನ: 1-9, 2-19, 3-77, 4-87, 5-126, 6-339, 7-351, 8-353, 9-353, 10-353
ಬೌಲಿಂಗ್ ವಿವರ
    ಗ್ಯಾಬ್ರಿಯೆಲ್ 23.0-4-84-2
    ಜೋಸೆಫ್24.0-6-69-3
        ಕಮಿನ್ಸ್21.4-8-54-3
    ಹೋಲ್ಡರ್19.0-7-34-0
        ಚೇಸ್ 33.0-9-70-2
    ಬ್ರಾತ್‌ವೈಟ್09.0-1-27-0
,,,,,,,,,,,,,,,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News