×
Ad

ಭಾರತದ ಪಾರುಪತ್ಯಕ್ಕೆ ಅಂಕುಶ ಹಾಕಿದ ಹೊಸ ನಿಯಮಗಳು

Update: 2016-08-10 22:58 IST

1980ರವರೆಗೆ ಹಾಕಿಯು ಪ್ರಸಿದ್ಧ ವ್ಯಕ್ತಿಗಳ ಕ್ರೀಡಾ ಪ್ರದರ್ಶನಕ್ಕೆ ಅಗ್ರಮಾನ್ಯ ಕ್ರೀಡೆಯಾಗಿತ್ತು. ನಂತರ ಕ್ರೀಡೆಯ ಅವಸಾನ ಮತ್ತು 1983ರಲ್ಲಿ ಕ್ರಿಕೆಟ್‌ನಲ್ಲಿ ಭಾರತ ವಿಶ್ವಕಪ್ ಗೆದ್ದ ನಂತರ ಎಲ್ಲವೂ ಬಹುತೇಕ ಖಾಯಂ ಆಗಿ ಬದಲಾಯಿತು. 1980ರಲ್ಲಿ ಮಾಸ್ಕೊ ಒಲಿಂಪಿಕ್ಸ್‌ನಲ್ಲಿ ಖಾಲಿಖಾಲಿ ಮೈದಾನದಲ್ಲಿ ಭಾರತ ಹಾಕಿ ತಂಡ ಕೊನೆಯ ಬಾರಿ ಒಲಿಂಪಿಕ್ಸ್‌ನಲ್ಲಿ ಬಂಗಾರ ಗೆದ್ದಿತ್ತು. ಆ ದಿನಗಳ ನಂತರ ಭಾರತ ಹಾಕಿ ತಂಡ ತನ್ನ ಹಳೆಯ ವೈಭವದ ದಿನಗಳನ್ನೇ ಬೆಂಬಲ ಪಡೆಯಲು ಈಗಲೂ ನೆಚ್ಚಿಕೊಂಡಿದೆ. ಆ ಅತ್ಯದ್ಭುತ ಎಂಟು ಸ್ವರ್ಣ ಪದಕಗಳ ಪರಿಣಾಮ ಹೇಗಿದೆಯೆಂದರೆ ಈಗಲೂ ಕೂಡಾ ಹಾಕಿಯಲ್ಲಿ ಅದಕ್ಕಿಂತ ದೊಡ್ಡ ದಾಖಲೆ ಬರೆಯಲು ಯಾರಿಂದಲೂ ಸಾಧ್ಯವಾಗಿಲ್ಲ-ನೆದರ್ಲ್ಯಾಂಡ್ಸ್ ಐದು ಸ್ವರ್ಣ ಪದಕಗಳನ್ನು ಗೆದ್ದು ಎರಡನೇ ಸ್ಥಾನದಲ್ಲಿದೆ. ಭಾರತವು ಯಾಕೆ ತನ್ನ ಆಧಿಪತ್ಯವನ್ನು ಕಳೆದುಕೊಂಡಿತು? ಇದಕ್ಕೆ ಹಲವು ಕಾರಣಗಳಿವೆ, ಆದರೆ ಪ್ರಮುಖ ಕಾರಣ ಖಂಡಿತವಾಗಿಯೂ, ಎಫ್‌ಐಎಚ್‌ನ ಪರಿಣಾಮದಿಂದಾಗಿ ಕ್ರೀಡೆಯ ನಿಯಮಗಳಲ್ಲಾದ ನಿರಂತರ ಬದಲಾವಣೆಗಳು. ಎಫ್‌ಐಎಚ್‌ನ ಸದಸ್ಯರು ಭಾರತ ಮತ್ತು ಪಾಕಿಸ್ತಾನ ಖ್ಯಾತವಾಗಿದ್ದ ಹಾಕಿ ಕ್ರೀಡೆಯ ಕಲಾತ್ಮಕ ಆಟವನ್ನು ನಿರ್ಲಕ್ಷಿಸಿದರು. ಅದರ ಬದಲು ಹೊಸ ನಿಯಮಗಳು ಪವರ್ ಪ್ಲೇ, ಒತ್ತಾಯಪೂರ್ವಕ, ಎತ್ತರದ ಹೊಡೆತ ಮತ್ತು ದೀರ್ಘ ಅಂತರದ ಹೊಡೆತ ಮುಂತಾದುವುಗಳಿಗೆ ಹೆಚ್ಚು ಮಹತ್ವ ನೀಡಿ ಹಾಕಿ ಸ್ಟಿಕ್ ಆಟದ ಮಹತ್ವವನ್ನು ಕಡೆಗಣಿಸಲಾಯಿತು.

ಆಫ್ ಸೈಡ್ ಇಲ್ಲ
ಪ್ರಾಯಶಃ ಇದಕ್ಕೊಂದು ದೊಡ್ಡ ಉದಾಹರಣೆ ಆಫ್‌ಸೈಡ್ ನಿಯಮವನ್ನು ರದ್ದು ಮಾಡಿದ್ದು. ಹಾಗಾಗಿ ಒಂದು ತಂಡ ಬಾಲ್‌ಗೆ ಸ್ಟಿಕ್‌ನಿಂದ ನಿರಂತರ ಹೊಡೆಯುತ್ತಾ ಮುಂದಕ್ಕೆ ಓಡುತ್ತಾ ಸಾಗಿ ವಿರೋಧಿ ತಂಡದ ಗೋಲ್‌ನತ್ತ ಸಾಗಬೇಕಾದರೆ ಈಗ ಆಫ್‌ಸೈಡ್ ಇಲ್ಲದ ಕಾರಣ ಎದುರಾಳಿ ತಂಡದ ಗೋಲ್ ಪೋಸ್ಟ್ ಬಳಿಯೇ ಫಾರ್ವರ್ಡ್‌ನಲ್ಲಿ ಆಡುತ್ತಿದ್ದರೂ ಆಫ್‌ಸೈಡ್ ಎಂದು ಪರಿಗಣಿಸಲಾಗವುದೇ ಇಲ್ಲ.
ಇನ್ನು ಲಾಂಗ್ ಕಾರ್ನರ್ ಎಂದು ಕರೆಯಲ್ಪಡುತ್ತಿದ್ದ ಜಾಗ ಈಗ ಕಾರ್ನರ್ ಆಗಿಯೇ ಉಳಿದಿಲ್ಲ. ಈಗ ಪ್ರತಿಬಾರಿಯೂ ಚೆಂಡು ರಕ್ಷಕ ಆಟಗಾರನ ಸ್ಟಿಕ್‌ನಿಂದ ಬೇಸ್‌ಲೈನನ್ನು ದಾಟಿ ಹೋದಾಗ ದಾಳಿ ನಡೆಸಿದ ತಂಡವು ಈ ಹಿಂದಿನಂತೆ ಕಾರ್ನರ್ ಫ್ಲ್ಯಾಗ್‌ನಿಂದ ಆರಂಭಿಸುವ ಬದಲು 23 ಗಜ ಗೆರೆಯಿಂದ ಆಟ ಆರಂಭಿಸಬೇಕಾಗುತ್ತದೆ.

ಗೋಲ್‌ನತ್ತ ತಲೆಯ ಮೇಲಿಂದ ಹೊಡೆತ
ಟೆನಿಸ್‌ನಲ್ಲಿರುವ ಫೋರ್ಹೆಡ್ ಹೊಡೆತದಂತೆ ಇತ್ತೀಚಿನ ದಿನಗಳಲ್ಲಿ ಹಾಕಿಯಲ್ಲಿ ಓವರ್‌ಹೆಡ್ ಹೊಡೆತ ಸಾಮಾನ್ಯವಾಗಿ ಬಿಟ್ಟಿದೆ. ಯಾಕೆಂದರೆ ಈಗ ಆಟಗಾರ ಐದು ಗಜದೊಳಗೆ ಬೇರೆ ಆಟಗಾರರು ಇಲ್ಲದಿದ್ದರೆ ತಲೆಯ ಮೇಲಿಂದ ಚೆಂಡನ್ನು ಬಾರಿಸಬಹುದಾಗಿದೆ. ಹಾಗಾಗಿ, ದೀರ್ಘ ಗಾಳಿಯಲ್ಲಿ ಹೊಡೆದ ಫಾರ್ವರ್ಡ್ ಹೊಡೆತ ಅಥವಾ ಸ್ಕೂಪ್ ಈಗಿನ ಹಾಕಿ ಆಟದಲ್ಲಿ ನ್ಯಾಯಬದ್ಧವಾಗಿ ಗೋಲ್ ಬಾರಿಸುವ ಪ್ರಯತ್ನವಾಗಿದೆ. ಇದು ಕೌಶಲ್ಯದ ಮೇಲೆ ಶಕ್ತಿಯ ಪಾರಮ್ಯಕ್ಕೆ ಇನ್ನೊಂದು ಉದಾಹರಣೆ.
ಸ್ವಾಭಾವಿಕ ಹುಲ್ಲಿನಿಂದ ಕೃತಕ ಹುಲ್ಲಿನ ಮೈದಾನದತ್ತ ಆಟವನ್ನು ಸ್ಥಳಾಂತರಿಸಿದಾಗಲೇ ಭಾರತದ ಆಟದ ಕುಸಿತ ಆರಂಭವಾಯಿತು. ಕಳೆದ 24 ತಿಂಗಳುಗಳಲ್ಲಿ ಅಭೂತಪೂರ್ವ ಏಳಿಗೆಯನ್ನು ಕಂಡಿರುವ ಬೆಲ್ಜಿಯಂನಂತಹ ತಂಡಗಳು ಮುಖ್ಯವಾಗಿ ಇಂತಹ ಕೃತಕ ಹುಲ್ಲಿನ ಮೈದಾನಗಳಲ್ಲೇ ಗಂಭೀರ ಆಟ ಆಡಲು ಆರಂಭಿಸಿದ್ದವು. ಅವರು ಸ್ವಾಭಾವಿಕ ಹುಲ್ಲಿನ ಮೈದಾನದಲ್ಲಿ ಆಡಿದ ಅನುಭವವನ್ನು ಮರೆಯುವಂತಹ ಅಗತ್ಯವಿರಲಿಲ್ಲ, ಅದು ಅವರ ಪರವಾಗಿ ಕೆಲಸ ಮಾಡಿತು.

ದೈಹಿಕವಾಗಿ ಎತ್ತರ ಮತ್ತು ಬಲಿಷ್ಠ ದೇಹ ಹೊಂದಿರುವ ಯೂರೋಪಿಯನ್ ಮತ್ತು ಆಸ್ಟ್ರೇಲಿಯನ್ನರು ಕೃತಕ ಹುಲ್ಲಿನ ಮೈದಾನದಲ್ಲಿ ಆಡುವ ವೇಗದ ಆಟಕ್ಕೆ ಹೇಳಿಮಾಡಿಸಿದಂತಿದ್ದರು. ಅವರು ಭಾರತೀಯರನ್ನು ಓಡಿಸಿ ಓಡಿಸಿ ಉಸಿರುಗಟ್ಟಿಸುವ ಮೂಲಕವೇ ಆಟದಲ್ಲಿ ಸೋಲಿಸುತ್ತಾರೆ. ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳು ಪ್ರತಿದಾಳಿಯಲ್ಲಿ ಉತ್ತಮವಾಗಿವೆ ಆದರೆ ಎದುರಾಳಿ ತಂಡ ಮಾತ್ರ ಉಸಿರು ಕಾಯ್ದುಕೊಳ್ಳುವಲ್ಲಿ ಈ ಎರಡೂ ತಂಡಗಳನ್ನು ಮಣಿಸುತ್ತವೆ.

                                             ಹೊಸ ನಿಯಮಗಳು

ಭಾರತವು ಅಗ್ರಸ್ಥಾನಿಯಾಗಿದ್ದ ಸಮಯದಿಂದ ಈಗ ಹಾಕಿಯು ಬದಲಾದ 11 ಅಂಶಗಳು ಹೀಗಿವೆ, ಇವೆಲ್ಲಾ ಹೊಸ ನಿಯಮಗಳಿಗೂ ಸದ್ಯ ಅಗ್ರಸ್ಥಾನದಲ್ಲಿರುವ ದೇಶಗಳು ಧನ್ಯವಾದ ಹೇಳಬೇಕು.

1. ಈಗ ಹಾಕಿ 60 ನಿಮಿಷಗಳ, 15 ನಿಮಿಷಗಳಂತೆ ನಾಲ್ಕು ಭಾಗಗಳಾಗಿ ವಿಂಗಡಿಸಲ್ಪಟ್ಟ ಆಟವಾಗಿದೆ. ಎರಡು ಭಾಗಗಳಾಗಿ ವಿಂಗಡಿಸಲ್ಪಟ್ಟಿದ್ದ 70 ನಿಮಿಷಗಳ ಆಟ ಈಗ ಇತಿಹಾಸ. ಕ್ರೀಡೆಯ ವೇಗವನ್ನು ಹೆಚ್ಚಿಸಲು ಮತ್ತು ಎರಡು ವಿಶ್ರಾಂತಿ ಸಮಯದಲ್ಲಿ ತಂಡಗಳು ಮರುತಂತ್ರ ಹೆಣೆಯಲು ಮತ್ತು ಶಕ್ತಿ ಒಗ್ಗೂಡಿಸಲು ಹೀಗೆ ಮಾಡಲಾಗಿದೆ. ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ಶಕ್ತಿಯುತ ಹೊಡೆತಗಳನ್ನು ಬಾರಿಸಲು ಮತ್ತಷ್ಟು ಅವಕಾಶ.

2. ನಾಕ್‌ಔಟ್ ಆಟ ಪರಸ್ಪರ ಡ್ರಾದಲ್ಲಿ ಕೊನೆಗೊಂಡಾಗ ಎಕ್ಸ್ಟ್ರಾ ಟೈಂಗೆ ಅವಕಾಶವಿಲ್ಲ ಬದಲಿಗೆ ನೇರವಾಗಿ ಶೂಟೌಟ್ ಹಂತಕ್ಕೆ ಹೋಗುವುದರಿಂದ ಇಲ್ಲೂ ಕುಶಲತೆಯನ್ನು ಶಕ್ತಿಯು ಸೋಲಿಸುತ್ತದೆ.

3. ಇನ್ನು ಶೂಟೌಟ್‌ನಲ್ಲಿ ಹಿಂದಿನಂತೆ ಆಟಗಾರ ಗೋಲ್‌ಕೀರ್‌ಗಿಂತ ಏಳು ಗಜಗಳ ಅಂತರದಲ್ಲಿ ಚೆಂಡನ್ನು ಹೊಡೆಯುವುದಲ್ಲ. ಬದಲಿಗೆ ಈ ನಿಯಮವನ್ನು ಆಟಗಾರ ಮತ್ತು ಗೋಲ್‌ಕೀಪರ್ ಮಧ್ಯೆ ನೇರಾನೇರ ಹೋರಾಟವನ್ನಾಗಿ ಪರಿವರ್ತಿಸಲಾಗಿದೆ. ಇದರಲ್ಲಿ ಆಟಗಾರನು 23 ಗಜ ಗೆರೆಯಿಂದ ಚೆಂಡನ್ನು ದೂಡಿಕೊಂಡು ಸಾಗುತ್ತಾನೆ ಮತ್ತು ಗೋಲ್ ಬಾರಿಸಲು ಆತನ ಬಳಿ ಎಂಟು ಸೆಕೆಂಡ್‌ಗಳ ಸಮಯವಿರುತ್ತದೆ. ಇಲ್ಲೂ ಚೆಂಡನ್ನು ಜೋರಾಗಿ ಬಾರಿಸಬೇಕೇ ಹೊರತು ಜಾಣ್ಮೆಯಿಂದಲ್ಲ.

4. ಫ್ರೀಹಿಟ್ ಪಡೆದ ಸಂದರ್ಭದಲ್ಲಿ ದಾಳಿ ನಡೆಸುವ ತಂಡವು ಐದು ಗಜಗಳ ಒಳಗೆ ಆಡಬೇಕಾಗಿದ್ದು ಆಟಗಾರನು ಒಂದೋ ಚೆಂಡನ್ನು ಐದು ಗಜಗಳವರೆಗೆ ದೂಡಬೇಕಾಗಿದೆ ಅಥವಾ ಚೆಂಡು ಸ್ಟ್ರೈಕಿಂಗ್ ವೃತ್ತದ ಒಳಗೆ ಹೊಡೆಯುವುದಕ್ಕೂ ಮುನ್ನ ವೃತ್ತದ ಹೊರಗಡೆಯಿರುವ ತಂಡದ ಸಹಆಟಗಾರನಿಗೆ ಪಾಸ್ ಮಾಡಬೇಕು.

5. ಈಗ ಲಾಂಗ್ ಕಾರ್ನರ್‌ಗಳನ್ನು 23 ಗಜಗಳ ಗೆರೆಯಿಂದ ಪರಿಗಣಿಸಲಾಗುತ್ತಿದ್ದು ಚೆಂಡು ಬೇಸ್‌ಲೈನನ್ನು ದಾಟಿದ ಸ್ಥಳದಿಂದಲೇ ಇದನ್ನು ಪರಿಗಣಿಸಲಾಗುತ್ತದೆ, ಹಾಗಾಗಿ ಶಕ್ತಿಗೇ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾಗುತ್ತದೆ.

6. ಹಾಕಿಯಲ್ಲೀಗ ಆಫ್‌ಸೈಡ್ ನಿಯಮವಿಲ್ಲ. ಅದನ್ನು 1992ರಲ್ಲಿ ತೆಗೆದುಹಾಕಲಾಯಿತು. ಇದರ ಬಗ್ಗೆ ಈಗಾಗಲೇ ಮಾಹಿತಿ ನೀಡಲಾಗಿದೆ.

7. ಈಗ ಒಬ್ಬ ಸೈಡ್‌ಲೈನ್ ಹಿಟ್‌ನಿಂದ ಚೆಂಡನ್ನು ಖುದ್ದಾಗಿ ಬಾರಿಸಬಹುದು. ಮೊದಲೆಲ್ಲಾ ಸೈಡ್‌ಲೈನ್ ಹಿಟ್ ತೆಗೆದುಕೊಳ್ಳುವ ಆಟಗಾರ ಆಟವನ್ನು ಆರಂಭಿಸಲು ಚೆಂಡನ್ನು ಸಹಆಟಗಾರನಿಗೆ ಪಾಸ್ ಮಾಡುವ ಅಗತ್ಯವಿತ್ತು.

8. ಆಟಗಾರರನ್ನು ಬದಲಾಯಿಸಲು ಯಾವುದೇ ನಿರ್ಬಂಧವಿಲ್ಲ. ಎಷ್ಟು ಆಟಗಾರರನ್ನು ಬೇಕಾದರೂ ಎಷ್ಟು ಬಾರಿ ಬೇಕಾದರೂ ಯಾವುದೇ ಸಮಯದಲ್ಲಿ ಬದಲಾಯಿಸಬಹುದು. ಹಾಗಾಗಿ ಕಾಲುಗಳು ದಣಿಯುವ ಹಾಗಿಲ್ಲ.

9. ಈಗ ಹಸಿರು ಚೀಟಿಯೆಂದರೆ ಎರಡು ನಿಮಿಷಗಳ ಅಮಾನತು ಮತ್ತು ಹಳದಿ ಚೀಟಿಯೆಂದರೆ ಐದು ಅಥವಾ ಅಧಿಕ ನಿಮಿಷಗಳ ನಿರ್ಬಂಧ.

10. ಈಗ ಹಿಂದಿನಂತೆ ಸ್ವಾಭಾವಿಕ ಹುಲ್ಲಿನ ಮೇಲೆ ಆಡುತ್ತಿದ್ದ ಸಮಯದಲ್ಲಿ ಕಂಡುಬರುತ್ತಿದ್ದ ಆರಂಭಿಕ ಬೆದರಿಸುವಿಕೆ ಇಲ್ಲ. ಆಗೆಲ್ಲಾ ವಿರೋಧಿ ತಂಡಗಳು ತಮ್ಮ ಸ್ಟಿಕ್ಕನ್ನು ಮೂರು ಬಾರಿ ಪರಸ್ಪರ ಮತ್ತು ಮೂರು ಬಾರಿ ಮೈದಾನಕ್ಕೆ ಹೊಡೆಯುವ ಮೂಲಕ ಆಟ ಆರಂಭಿಸುತ್ತಿದ್ದವು. ನಂತರ ಕೆಲವೇ ಸೆಕೆಂಡುಗಳಲ್ಲಿ ತಮ್ಮ ಸ್ಥಾನಗಳನ್ನು ಆಕ್ರಮಿಸುತ್ತಿದ್ದವು. ಈಗ ಮಾಮೂಲಿಯಾಗಿ ಚೆಂಡನ್ನು ತನ್ನದೇ ತಂಡದ ಆಟಗಾರನಿಗೆ ಚೆಂಡು ಪಾಸ್ ಮಾಡುವ ಮೂಲಕ ಆಟ ಆರಂಭವಾಗುತ್ತದೆ.
11. ಆಟಗಾರನ ಕಾಲಿಗೆ ಚೆಂಡು ಹೊಡೆದಾಗ ಅಡ್ವಾಂಟೇಜ್ ನಿಯಮ ಅನುಷ್ಠಾನಕ್ಕೆ ಬರುತ್ತದೆ. ಹಿಂದೆ ಹೀಗಾದಾಗ ಫ್ರೀಹಿಟ್ ನೀಡಲಾಗುತ್ತಿತ್ತು. ಆದರೆ ಈಗ ಎದುರಾಳಿ ತಂಡದ ಆಟಕ್ಕೆ ತಡೆಯಾಗದಿದ್ದರೆ ಅಂಪೈರ್‌ಗಳು ಆಟ ನಿರಂತರವಾಗಿ ಸಾಗಲು ಫ್ರೀಹಿಟ್ ನೀಡುವುದಿಲ್ಲ.

Writer - ಸುಹಾವಿ ಕೌರ್

contributor

Editor - ಸುಹಾವಿ ಕೌರ್

contributor

Similar News