×
Ad

ಆಸ್ಟ್ರೇಲಿಯ ವಿರುದ್ಧ ಭಾರತಕ್ಕೆ ಹೀನಾಯ ಸೋಲು

Update: 2016-08-10 23:20 IST

ರಿಯೋ ಡಿ ಜನೈರೊ, ಆ.10: ಭಾರತದ ಮಹಿಳಾ ಹಾಕಿ ತಂಡ ರಿಯೋ ಒಲಿಂಪಿಕ್ಸ್‌ನ ಬಿ ಗುಂಪಿನ ಪಂದ್ಯದಲ್ಲಿ ಆಸ್ಟ್ರೇಲಿಯದ ವಿರುದ್ಧ 1-6 ಗೋಲುಗಳ ಅಂತರದಿಂದ ಹೀನಾಯವಾಗಿ ಸೋತಿದೆ.

ಬುಧವಾರ ಇಲ್ಲಿ ನಡೆದ ತನ್ನ ಮೂರನೆ ಲೀಗ್ ಪಂದ್ಯದಲ್ಲಿ ಭಾರತ ಕಳಪೆ ಪ್ರದರ್ಶನ ಮುಂದುವರಿಸಿತು. ಭಾರತಕ್ಕೆ ಇದು ಸತತ 2ನೆ ಸೋಲು. ಬ್ರಿಟನ್ ವಿರುದ್ಧದ 2ನೆ ಪಂದ್ಯವನ್ನು 0-3 ಅಂತರದಲ್ಲಿ ಸೋತಿತ್ತು. ಜಪಾನ್ ವಿರುದ್ಧದ ಮೊದಲ ಪಂದ್ಯವನ್ನು ಡ್ರಾಗೊಳಿಸಿತ್ತು.

36 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಆಡುತ್ತಿರುವ ಭಾರತಕ್ಕೆ ಕ್ವಾರ್ಟರ್‌ಫೈನಲ್ ಸ್ಪರ್ಧೆಯಲ್ಲಿರಲು ಈ ಪಂದ್ಯವನ್ನು ಗೆಲ್ಲಲೇಬೇಕಾಗಿತ್ತು. ಕ್ವಾರ್ಟರ್‌ಫೈನಲ್ ತಲುಪಲು 2 ಪಂದ್ಯಗಳಲ್ಲಿ ಗೆಲ್ಲಬೇಕಾಗಿದೆ.

ಭಾರತಕ್ಕೆ ಇನ್ನೆರಡು ಪಂದ್ಯ ಆಡಲು ಬಾಕಿಯಿದೆ. 48ನೆ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಬಾರಿಸಿದ ಜೊಡಿ ಕೆನ್ನಿ 183ನೆ ಪಂದ್ಯದಲ್ಲಿ 100ನೆ ಅಂತಾರಾಷ್ಟ್ರೀಯ ಗೋಲು ಬಾರಿಸಿದರು. ಕೆನ್ನಿ ಪಂದ್ಯದಲ್ಲಿ ಅವಳಿ ಗೋಲು ಬಾರಿಸಿ ಭರ್ಜರಿ ಗೆಲುವಿಗೆ ದೊಡ್ಡ ಕಾಣಿಕೆ ನೀಡಿದರು. ಭಾರತದ ಪರ ಅನುರಾಧಾ ಏಕೈಕ ಗೋಲು ಬಾರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News