ಫೈನಲ್‌ಗೆ ತಲುಪಲು ಜಿತು, ನಂಜಪ್ಪ ವಿಫಲ
Update: 2016-08-10 23:36 IST
ರಿಯೋ ಡಿ ಜನೈರೊ, ಆ.10: ರಿಯೋ ಒಲಿಂಪಿಕ್ಸ್‌ನ ಪುರುಷರ 50 ಮೀ. ಪಿಸ್ತೂಲ್ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ಕ್ರಮವಾಗಿ 12ನೆ ಹಾಗೂ 25ನೆ ಸ್ಥಾನ ಪಡೆದಿರುವ ಜಿತು ರಾಯ್ ಹಾಗೂ ಪ್ರಕಾಶ್ ನಂಜಪ್ಪ ಫೈನಲ್ ಸುತ್ತಿಗೆ ತಲುಪಲು ವಿಫಲರಾಗಿದ್ದಾರೆ.
ಅಂತಿಮ ಸಿರೀಸ್‌ನಲ್ಲಿ 89 ಅಂಕ ಗಳಿಸಿದ ಜಿತು ಅಗ್ರ-8ರಲ್ಲಿ ಸ್ಥಾನ ಪಡೆಯಲು ವಿಫಲರಾದರು. ಕನ್ನಡಿಗ ಪ್ರಕಾಶ್ ನಂಜಪ್ಪ ತನ್ನ ಚೊಚ್ಚಲ ಒಲಿಂಪಿಕ್ ಗೇಮ್ಸ್‌ನಲ್ಲಿ ಸಂಪೂರ್ಣ ವಿಫಲರಾದರು. ಮೊದಲ ಸರಣಿಯಲ್ಲಿ 85 ಅಂಕ ಗಳಿಸಿದ್ದ ಅವರು ಅಂತಿಮವಾಗಿ 25ನೆ ಸ್ಥಾನ ಪಡೆಯಲಷ್ಟೇ ಶಕ್ತರಾದರು.