×
Ad

ಜವುಳಿ ವಲಯಕ್ಕೆ ತೆರಿಗೆ ಉತ್ತೇಜನ ಮಸೂದೆ ಮಂಜೂರು

Update: 2016-08-10 23:53 IST

ಹೊಸದಿಲ್ಲಿ, ಆ.10: ಜವುಳಿ ವಲಯಕ್ಕೆ ತೆರಿಗೆ ಉತ್ತೇಜಕಗಳನ್ನು ಒದಗಿಸುವ ಹಾಗೂ ಮಾರ್ಬಲ್ ಹಾಗೂ ಗ್ರಾನೈಟ್‌ಗಳ ಮೇಲೆ ಶೇ.10ರಿಂದ 40ರಷ್ಟು ಕಸ್ಟಮ್ಸ್ ಸುಂಕ ಹೆಚ್ಚಿಸಲು ಸರಕಾರಕ್ಕೆ ಅವಕಾಶ ನೀಡುವ ಮಸೂದೆಯೊಂದಕ್ಕೆ ಲೋಕಸಭೆಯಿಂದು ಮಂಜೂರಾತಿ ನೀಡಿದೆ.

ಈ ಕ್ರಮಗಳಿಂದ ಉದ್ಯೋಗ ಸೃಷ್ಟಿ ಹಾಗೂ ಆಮದು ಹೆಚ್ಚಳದಿಂದ ದೇಶೀಯ ಉದ್ಯಮಗಳ ರಕ್ಷಣೆಗೆ ಸಹಾಯವಾಗಲಿದೆಯೆಂದು ಮಸೂದೆ ಮಂಡಿಸಿದ ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದರು.
ತೆರಿಗೆ ಕಾನೂನು(ತಿದ್ದುಪಡಿ) ಕಾಯ್ದೆ-2016 ಸರಕಾರದಿಂದ ಷೇರುಗಳ ವರ್ಗಾವಣೆಗೆ ಸಂಬಂಧಿಸಿದ ಶರ್ತಗಳಿಗೆ ಅವಕಾಶ ಕಲ್ಪಿಸುತ್ತದೆಂದು ಅವರು ಹೇಳಿದರು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News