×
Ad

ಇಂಜಿನಿಯರಿಂಗ್ ವಿದ್ಯಾರ್ಥಿಗಳ ನಡುವೆ ಘರ್ಷಣೆ: ಮೂವರಿಗೆ ಇರಿತ, ಆಸ್ಪತ್ರೆಗೆ ದಾಖಲು

Update: 2016-08-11 12:49 IST

   ಕೋಯಮತ್ತೂರು, ಆ.11: ಸೂಲೂರಿನ ಖಾಸಗಿ ಇಂಜಿನಿಯರಿಂಗ್ ಕಾಲೇಜ್‌ನ ಕೇರಳ ವಿದ್ಯಾರ್ಥಿಗಳ ನಡುವೆ ಘರ್ಷಣೆ ನಡೆದಿದ್ದು ಇರಿತಕ್ಕೊಳಗಾಗಿ ಗಾಯಗೊಂಡ ಮೂವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿದು ಬಂದಿದೆ.ಕೋಯಮತ್ತೂರು ಸಾಲೂರ್ ರಂಗನಾಥಪುರಂ ಅಮರಜ್ಯೋತಿ ನಗರದ ಲ್ಲಿ ಬಾಡಿಗೆಗೆ ಪಡೆದ ಮನೆಯಲ್ಲಿ ವಾಸ್ತವ್ಯ ಇರುವ ನಾಲ್ಕನೆ ವರ್ಷದ ಮೆಕಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ಕೊಲ್ಲಂನ ಸುಜೀತ್, ತೃಶೂರಿನ ಕಿಶನ್, ಮಲಪ್ಪುರಂನ ವಿವೇಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ತರಗತಿಯಲ್ಲಿ ಕಲಿಯುತ್ತಿದ್ದ ಮುಹಮ್ಮದ್ ನಾಝಿಕ್‌ನನ್ನು ಕಾಲೇಜಿನಿಂದ ಸಸ್ಪೆಂಡ್ ಮಾಡಲಾಗಿತ್ತು. ಸುಜೀತ್ ಮತ್ತು ಗೆಳೆಯರು ತನ್ನ ಅಮಾನತಿಗೆ ಕಾರಣವೆಂದು ನಾಝಿಕ್ ಜಗಳ ಮಾಡಿದ್ದ. ಆನಂತರ ಕಳೆದ ಸೋಮವಾರದಂದು ರಾತ್ರೆಯ ವೇಳೆಯಲ್ಲಿ ಮುಹಮ್ಮದ್ ನಾಝಿಕ್, ತನ್ನ ಗೆಳೆಯರಾದ ರಾಹುಲ್, ಅರುಣ್,ದಹಲ್‌ರಾಜ್ ಜೊತೆಗೂಡಿ ಸುಜೀತ್ ಮತ್ತು ಗೆಳೆಯರು ವಾಸವಿದ್ದ ಬಾಡಿಗೆಮನೆಗೆ ನುಗ್ಗಿದ್ದ. ಇವರು ಅಲ್ಲಿದ್ದ ಸುಜೀತ್ ಮತ್ತು ಇನ್ನಿಬ್ಬರು ವಿದ್ಯಾರ್ಥಿಗಳಿಗೆ ಚಾಕುವಿನಿಂದ ಇಳಿದು ಗಾಯಗೊಳಿಸಿದ್ದಾರೆಂದು ವರದಿ ತಿಳಿಸಿದೆ. ಮುಹಮ್ಮದ್ ನಾಝಿಕ್ ಸಹಿತ ನಾಲ್ಕು ಮಂದಿ ವಿದ್ಯಾರ್ಥಿಗಳನ್ನು ಸೂಲೂರು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News