×
Ad

ಅಧಿಸೂಚನೀಯ ರೋಗವಾಗಿ ಮಿದುಳು ಜ್ವರ:ಸಚಿವ ನಡ್ಡಾ

Update: 2016-08-11 21:11 IST

ಹೊಸದಿಲ್ಲಿ,ಆ.11: ಪೂರ್ವ ಭಾರತದಲ್ಲಿ ಪ್ರತಿ ವರ್ಷ ನೂರಾರು ಜೀವಗಳನ್ನು ಬಲಿ ಪಡೆಯುತ್ತಿರುವ ಮಿದುಳಿನ ಉರಿಯೂತ ಅಥವಾ ಮಿದುಳು ಜ್ವರವನ್ನು ಅಧಿಸೂಚನೀಯ ಕಾಯಿಲೆಯನ್ನಾಗಿ ಮಾಡಲಾಗುವುದು ಎಂದು ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರು ಗುರುವಾರ ಲೋಕಸಭೆಯಲ್ಲಿ ಪ್ರಕಟಿಸಿದರು. ಹಲವಾರು ವರ್ಷಗಳ ಸತತ ಪ್ರಯತ್ನಗಳ ಬಳಿಕವೂ ಮಿದುಳು ಜ್ವರವನ್ನು ನಿಯಂತ್ರಿಸುವಲ್ಲಿ ವೈಫಲ್ಯದ ಬಗ್ಗೆ ಸದಸ್ಯರು ಕಳವಳಗಳನ್ನು ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸಚಿವರ ಈ ಪ್ರಕಟಣೆ ಹೊರಬಿದ್ದಿದೆ.

ಪುಣೆಯ ರಾಷ್ಟ್ರೀಯ ವೈರಾಣುಶಾಸ್ತ್ರ ಸಂಸ್ಥೆಯ ಗೋರಖಪುರ ಘಟಕವನ್ನು ಪ್ರಾದೇಶಿಕ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಬೇಕೆಂಬ ಉತ್ತರ ಪ್ರದೇಶದ ಇಬ್ಬರು ಸಂಸದರ ಬೇಡಿಕೆಯನ್ನೂ ನಡ್ಡಾ ಒಪ್ಪಿಕೊಂಡರು. ಉತ್ತರ ಪ್ರದೇಶವು ಮಿದುಳು ಜ್ವರದಿಂದ ಅತ್ಯಂತ ಹೆಚ್ಚು ಪೀಡಿತ ರಾಜ್ಯವಾಗಿದ್ದು, ಸಾವನ್ನಪ್ಪುವವರಲ್ಲಿ ಹೆಚ್ಚಿನವರು ಮಕ್ಕಳೇ ಆಗಿದ್ದಾರೆ.

ಈ ವರ್ಷ ಗೋರಖಪುರದ ಬಿಆರ್‌ಡಿ ಆಸ್ಪತ್ರೆಯೊಂದರಲ್ಲೇ ಮಿದುಳು ಜ್ವರಕ್ಕೆ 125ಕ್ಕೂ ಹೆಚ್ಚಿನ ಮಕ್ಕಳು ಬಲಿಯಾಗಿದ್ದಾರೆ ಮತ್ತು 1978ರಿಂದಲೂ ಪ್ರತಿ ವರ್ಷ ಇಂತಹ ಸಾವುಗಳು ಮರುಕಳಿಸುತ್ತಲೇ ಇವೆ ಎಂದು ಯೋಗಿ ಆದಿತ್ಯನಾಥ್(ಬಿಜೆಪಿ) ಅವರು ಗಮನ ಸೆಳೆಯುವ ಸೂಚನೆಯಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News