×
Ad

ಸಾಯುವುದಕ್ಕಿಂತ ಖರೀದಿಸುವುದು ಉತ್ತಮವಲ್ಲವೇ?

Update: 2016-08-11 22:48 IST

2004ರಲ್ಲಿ ‘ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ಎಥಿಕ್ಸ್’ ನ ಸಂಪಾದಕೀಯದಲ್ಲಿ ನಾನು ಕಿಡ್ನಿ ಕಸಿ ವಂಚನಾಜಾಲದ ಬಗ್ಗೆ ಬರೆಯುತ್ತಾ ‘‘ನಮ್ಮ ಹಗರಣಪೀಡಿತ ಭಾರತೀಯ ಸಾರ್ವಜನಿಕ ಜೀವನದಲ್ಲಿ ಒಂದು ಹಗರಣವು ಪ್ರತೀ ಕೆಲವು ವರ್ಷಕ್ಕೊಮ್ಮೆ ಪತ್ರಿಕೆಗಳ ಮುಖಪುಟದಲ್ಲಿ ಕಾಣಿಸಿಕೊಳ್ಳುವ ಮೂಲಕ ವಿಭಿನ್ನತೆಯನ್ನು ಕಾಯ್ದುಕೊಂಡಿದೆ. ಅದರಲ್ಲುಂಟಾಗುವ ಒಂದೇ ವ್ಯತ್ಯಾಸವೆಂದರೆ ಯೋಜನಾಬದ್ಧವಾಗಿ ನಡೆಸಲಾಗುತ್ತಿದೆಯೇನೋ ಎಂಬಂತೆ ಆಗುವ ನಗರಗಳ ಬದಲಾವಣೆ. ಇತಿಹಾಸದಲ್ಲಿ ಭಾರತೀಯ ಕಿಡ್ನಿ ಬಝಾರ್ ಎಂದೇ ಸಂಬೋಧಿಸಲ್ಪಡುವ ಜಾಲದಲ್ಲಿ ಭಾಗಿಯಾಗಿರುವವರ ಹತಾಶೆ, ಜಾಣ್ಮೆ ಮತ್ತು ತಂತ್ರದ ಪರಿಣಾಮವಾಗಿ ಈ ಒಂದು ಹಗರಣ ಕೊನೆಗಾಣುವುದೇ ಇಲ್ಲ’’ ಎಂದು ಬರೆದಿದ್ದೆ.

ಇದರ ಕೊನೆಯಲ್ಲಿ ನಾನು ಸಂವಾದನೀಯ ಪರಿಹಾರವನ್ನು ಸೂಚಿಸಿದ್ದೆ. ‘‘ಇದರ ವಿರುದ್ಧ ಎರಡು ಹಂತಗಳಲ್ಲಿ ಹೋರಾಟ ನಡೆಸಬೇಕಿದೆ. ಮೊದಲನೆಯದು ಕಾನೂನು ಮತ್ತು ನಿಗಾ ಸಂಸ್ಥೆಗಳ ಮೂಲಕ. ಎರಡನೆಯದು, ಮಾನವಹಕ್ಕು ಉಲ್ಲಂಘನೆ ಮತ್ತು ಸಾಮಾಜಿಕ ಶೋಷಣೆಯ ಅತ್ಯಂತ ಕೆಟ್ಟ ರೂಪವಾದ ಈ ಹಗರಣದ ವಿರುದ್ಧ ಸೈದ್ಧಾಂತಿಕ ನೆಲೆಯಲ್ಲಿ ಹೋರಾಟ. ಇಲ್ಲದಿದ್ದಲ್ಲಿ ನಾವು ಪದೇಪದೆ ಅದೇ ಹಗರಣದ ವೃತ್ತದಲ್ಲಿ ಸುತ್ತಾಡುತ್ತಾ ನರಳುತ್ತಲೇ ಇರುತ್ತೇವೆ’’ ಎಂದು ತಿಳಿಸಿದ್ದೆ.

ಈ ಹೇಳಿಕೆ ಒಂದು ಭವಿಷ್ಯದ ನುಡಿಯಲ್ಲವಾಗಿದ್ದರೂ ದುರದೃಷ್ಟವಶಾತ್ ಅದೇ ಸತ್ಯವಾಗಿದೆ. ಈ ಧನಪಿಶಾಚಿಯ ಕತೆಯ ಇತ್ತೀಚಿನ ವೃತ್ತಾಂತ ಮುಂಬೈಯ ಆಸ್ಪತ್ರೆಯೊಂದರಲ್ಲಿ ನಡೆಯುತ್ತಿದೆ. 1994ರ ಮಾನವ ಅಂಗಾಂಗ ಕಸಿ ಕಾಯ್ದೆಯು 70-80ರ ದಶಕದಲ್ಲಿ ಅವ್ಯಾಹತವಾಗಿದ್ದ ಕಿಡ್ನಿ ಬಝಾರ್‌ಗೆ ಭಾಗಶಃ ಕಡಿವಾಣ ಹಾಕುವಲ್ಲಿ ಯಶಸ್ವಿಯಾಯಿತು. ಆದರೆ. ಅಂದಿನಿಂದ ಕಾಲಕಾಲಕ್ಕೆ ಬಯಲಾಗುತ್ತಿರುವ ಹಗರಣಗಳು ಈ ದಂಧೆ ಈಗಲೂ ಮತ್ತಷ್ಟು ರಹಸ್ಯವಾಗಿ ನಡೆಯುತ್ತಿರುವುದನ್ನು ತೋರಿಸುತ್ತದೆ. 2011ರಲ್ಲಿ ಈ ಕಾಯ್ದೆಗೆ ಮಾಡಲಾದ ತಿದ್ದುಪಡಿಯು ಅಂಗಾಂಗಗಳ ವಾಣಿಜ್ಯ ವ್ಯವಹಾರದಲ್ಲಿ ತೊಡಗಿರುವವರ ಶಿಕ್ಷೆಯ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಿದೆ. ಮತ್ತು ಯಾವುದೇ ರೀತಿಯ ವ್ಯವಹಾರವನ್ನು ತಡೆಯುವ ಸಲುವಾಗಿ ಪ್ರತೀ ಹಂತದಲ್ಲೂ ಬಹಳಷ್ಟು ಪರೀಕ್ಷೆ, ಪರಿಶೀಲನೆಗಳಿವೆ. ಸಾಕಷ್ಟು ಜನರನ್ನು ಈ ಹಗರಣದ ಸಂಬಂಧ ಬಂಧಿಸಲಾಗಿದೆ ಆದರೆ, ಅಂಗಾಂಗಗಳ ವ್ಯಾಪಾರ ನಡೆಯುತ್ತಲೇ ಇದೆ. ಹಾಗಾದರೆ ಈ ಹಗರಣ ಕೊನೆಗೊಳ್ಳುವುದಿಲ್ಲ ಯಾಕೆ? ಈ ಜಾಲವನ್ನು ಸಂಪೂರ್ಣವಾಗಿ ನಾವು ಕೊನೆಗೊಳಿಸಬಹುದೇ? ಹಿಂದಿನ ಜನರು, ಉತ್ತಮ ಔಷಧಿ

ಭಾರತದಲ್ಲಿ ರೋಗದ ಅಂಕಿಸಂಖ್ಯೆ ವೇಗವಾಗಿ ಬದಲಾಗುತ್ತಿದೆ. ವಿವಿಧ ಅಂಗಗಳ ರೋಗಗಳ ಕೊನೆಯ ಹಂತದಲ್ಲಿ ನರಳುತ್ತಿರುವ ಜನರ ಸಂಖ್ಯೆಯಲ್ಲಿ ಸಾಕಷ್ಟು ಹೆಚ್ಚಳವಾಗಿದೆ. ವೃದ್ಧ ಜನಸಂಖ್ಯೆ ಮತ್ತು ಮಧುಮೇಹ, ದಡೂತಿ ದೇಹ ಮತ್ತು ರಕ್ತದೊತ್ತಡದಂತಹ ಕಾಯಿಲೆಗಳು ಜೊತೆಗೂಡಿ ಕೊನೆಯ ಹಂತದ ಅಂಗ ಸಮಸ್ಯೆಯ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಗುಣಾತ್ಮಕ ಆಧುನಿಕ ಔಷಧಿ ತನ್ನ ಕ್ಷಿತಿಜವನ್ನು ವಿಸ್ತರಿಸಿದಂತೆ ಸುಧಾರಿತ ರೋಗಗಳ ಪತ್ತೆಯೂ ಹೆಚ್ಚಾಗುತ್ತಿವೆ. ಇದು ಸುಧಾರಿತ ಮತ್ತು ಪರಿಣಾಮಕಾರಿ ತಡೆಗಟ್ಟುವಿಕೆಗೆ ಕಾರಣವಾಗಬೇಕಾಗಿದ್ದರೂ ವಿಚಿತ್ರವೆಂಬಂತೆ ಕಸಿಗೆ ಯೋಗ್ಯ ಜನರ ಸಂಖ್ಯೆಯನ್ನೂ ಇದು ಹೆಚ್ಚಿಸುತ್ತಿದೆ. ಜೀವವನ್ನು ಉಳಿಸುವಲ್ಲಿ ಮತ್ತು ಬದುಕಿನ ಗುಣಮಟ್ಟವನ್ನು ಕಾಪಾಡುವಲ್ಲಿ ಕಾಣಬಹುದಾದಂತಹ ಯಶಸ್ಸು ಕಂಡಿದ್ದರೂ ಅಂಗಾಂಗ ಕಸಿಯ ಬೇಡಿಕೆಯೂ ಹೆಚ್ಚಾಗುತ್ತಿದೆ. ಹಾಗಾಗಿ ಮೂತ್ರಪಿಂಡದ ವೈಫಲ್ಯದಿಂದ ಬಳಲುತ್ತಿರುವ ರೋಗಿಗಳು ಕಿಡ್ನಿ ಕಸಿಗಾಗಿ ಕಾಯುತ್ತಾರೆ. ಯಾಕೆಂದರೆ ಗುಣಮಟ್ಟದ ಬದುಕು ಡಯಾಲಿಸಿಸ್‌ಗಿಂತ ಬಹಳ ದೊಡ್ಡದು. ಹಾಗೆಯೇ ಯಕೃತ್ತು ವೈಫಲ್ಯದಿಂದ ಬಳಲುವವರಿಗೆ ಯಕೃತ್ತು ಕಸಿ ಒಂದು ಕಾರ್ಯಸಾಧ್ಯವಾದ ಪರಿಹಾರ. ಆದರೆ, ಈ ಸಂಖ್ಯೆ ಕಿಡ್ನಿ ಕಸಿಗಿಂತ ಬಹಳಷ್ಟು ಕಡಿಮೆಯಿದೆ. ಕಸಿಯಲ್ಲಿ ಉಂಟಾಗಿರುವ ಅಭೂತಪೂರ್ವ ಯಶಸ್ಸು ಕೂಡಾ ಅಂಗಾಂಗಗಳ ಬೇಡಿಕೆಯನ್ನು ಹೆಚ್ಚಿಸಿದೆ. ಕೊನೆಯದಾಗಿ ಅಂಗಾಂಗ ಕಸಿಯು ಒಂದು ಲಾಭದಾಯಕ ಉದ್ಯಮವಾಗಿರುವ ಖಾಸಗಿ ಕ್ಷೇತ್ರದ ಪ್ರಮಾಣ ಮತ್ತು ತಲುಪುವಿಕೆಯೂ ಬಹಳಷ್ಟು ಹೆಚ್ಚಾಗಿದ್ದು ಅಂಗಾಂಗ ಕಸಿಗೆ ಖರ್ಚು ಮಾಡಲು ಸಾಧ್ಯವಿರುವ ಜನರಿಗೆ ಅದರ ತಲುಪುವಿಕೆಯೂ ಹೆಚ್ಚಿದೆ. ಹಾಗಾಗಿ ಭಾರತದಲ್ಲಿ ಅಂಗಾಂಗ ಕಸಿಯ ಅಗತ್ಯ ಮತ್ತು ಬೇಡಿಕೆ ಸಾಕಷ್ಟು ಹೆಚ್ಚಳವಾಗಿದ್ದು ಭವಿಷ್ಯದಲ್ಲಿ ಇದು ಮತ್ತಷ್ಟು ಅಗಾಧವಾಗಲಿದೆ.

ಕಸಿಗೆ ಅಂಗಾಂಗಗಳನ್ನು ಹುಡುಕುವುದು
ಮುಂದಿನ ತಾರ್ಕಿಕ ಪ್ರಶ್ನೆಯೆಂದರೆ ಅಷ್ಟಕ್ಕೂ ಅಂಗಾಂಗಗಳು ಬರುವುದಾದರೂ ಎಲ್ಲಿಂದ?
ಕಸಿಗೆ ಅಂಗಾಂಗಗಳು ಎರಡು ಮೂಲಗಳಿಂದ ಬರುತ್ತವೆ. ಮೊದಲನೆಯದಾಗಿ ಮತ್ತು ಭಾರತದಲ್ಲಿ ಅವ್ಯಾಹತವಾಗಿರು ವುದೆಂದರೆ ಜೀವಂತ ದಾನಿಗಳು ಅದು ಬಹಳಷ್ಟು ಬಾರಿ ಹತ್ತಿರದ ಸಂಬಂಧಿಗಳಾಗಿರುತ್ತಾರೆ ಮತ್ತು ಅಪರೂಪದಲ್ಲಿ ದೂರದ ಸಂಬಂಧಿಗಳಾಗಿರಬಹುದು. ನಾಲ್ಕರಲ್ಲಿ ಕೇವಲ ಒಬ್ಬರು ಹತ್ತಿರ ಸಂಬಂಧಿ ಮಾತ್ರ ದಾನಕ್ಕೆ ಹೊಂದುವ ಅಂಗಾಂಗವನ್ನು ಹೊಂದಿರುತ್ತಾನೆ ಎಂದು ಅಂದಾಜಿಸಲಾಗಿದೆ. ಈ ಮೂಲವನ್ನು ಹೆಚ್ಚು ಮಾಡಲು ಯಾವುದೇ ಸುಲಭದ ದಾರಿಯಿಲ್ಲ. ಇತ್ತೀಚಿನ ನೂತನ ‘ಅದಲುಬದಲು’ ನಿಯಮದ ಪ್ರಕಾರ ಅಂಗ ದಾನ ಮಾಡಲು ಬಯಸುವ ಆದರೆ ಹೋಲಿಕೆಯಾಗದ ಹತ್ತಿರದ ಸಂಬಂಧಿ ಮತ್ತೊಂದು ದಾನಿ ಮತ್ತು ರೋಗಿ ಜೋಡಿಯ ಜೊತೆ ಅಂಗ ಪರಸ್ಪರ ಬದಲಿಸಿಕೊಳ್ಳಬಹುದು. ಆ ಮೂಲಕ ಜೀವಂತ ಅಂಗ ದಾನಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬಹುದು. ಇನ್ನೊಂದು ದಾರಿಯೆಂದರೆ ಸಂಬಂಧವಿಲ್ಲದ ದಾನಿಗಳಿಂದ ಕಾನೂನಾತ್ಮಕ ದಾರಿಯ ಮೂಲಕ ಅಂಗಾಂಗವನ್ನು ಪಡೆಯುವುದು. ಇದರ ಬಗ್ಗೆ ಮತ್ತೆ ಚರ್ಚಿಸುತ್ತೇನೆ.

ಇನ್ನೊಂದು ಮೂಲ ಮತ್ತು ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿ ಅತ್ಯಂತ ಸಾಮಾನ್ಯವಾಗಿರುವ ವಿಧಾನವೆಂದರೆ ಮೃತವ್ಯಕ್ತಿಯಿಂದ ಅಂಗಾಂಗಳನ್ನು ಪಡೆಯುವುದು. ಇದರಲ್ಲಿ ಮೆದುಳು ಮೃತಪಟ್ಟ ವ್ಯಕ್ತಿಯ ಕುಟುಂಬದ ಸಮ್ಮತಿ ಪಡೆದು ಆ ವ್ಯಕ್ತಿಯ ಅಂಗಾಂಗಗಳನ್ನು ತೆಗೆಯಲಾಗುತ್ತದೆ. ಭಾರತದಲ್ಲಿ 1994ರಲ್ಲೇ ಮೆದುಳುಮರಣವನ್ನು ಕಾನೂನಾತ್ಮಕಗೊಳಿಸಿದ್ದರೂ ಈ ಬಗ್ಗೆ ಅಭಿವೃದ್ಧಿ ಮಾತ್ರ ಅತ್ಯಂತ ನಿಧಾನವಾಗಿ ನಡೆದಿದೆ. ಕೆಲವು ರಾಜ್ಯಗಳಲ್ಲಿ ಮೃತರ ಅಂಗಾಂಗ ದಾನದ ಪ್ರಮಾಣ ಇತ್ತೀಚಿನ ದಿನಗಳಲ್ಲಿ ಏರಿಕೆಯನ್ನು ಕಂಡಿದ್ದರೂ ಅದು ಅಗತ್ಯ ಪ್ರಮಾಣಕ್ಕಿಂತ ಸಾಕಷ್ಟು ಕಡಿಮೆಯಿದೆ. ಹಲವು ದಶಕಗಳ ಹಿಂದೆಯೇ ಮೃತರ ಅಂಗಾಂಗ ದಾನ ವ್ಯವಸ್ಥೆ ಜಾರಿಯಲ್ಲಿರುವ ಮತ್ತು ಅದನ್ನು ಆರೋಗ್ಯ ರಕ್ಷಣಾ ವ್ಯವಸ್ಥೆಯಲ್ಲಿ ಪರಿಣಾಮಕಾರಿಯಾಗಿ ಅಳವಡಿಸಿಕೊಂಡಿರುವ ದೇಶಗಳಲ್ಲೂ ಬೇಡಿಕೆ ಮತ್ತು ಪೂರೈಕೆಯ ಮಧ್ಯೆ ಅಗಾಧವಾದ ಅಂತರವಿದೆ.
ಇದರ ಪರಿಣಾಮವಾಗಿ ಕೆಲವು ದೇಶಗಳು ಮೃತರ ಅಂಗಾಂಗಗಳನ್ನು ಪಡೆಯುವ ಇತರ ದಾರಿಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಯೋಚಿಸುತ್ತಿವೆ. ಹೃದಯಾಘಾತ ಇವುಗಳಲ್ಲೊಂದು, ಇದರಲ್ಲಿ ವ್ಯಕ್ತಿಯ ಹೃದಯವು ಸ್ಥಗಿತಗೊಂಡ ಕೂಡಲೇ ಆತನ ಇತರ ಅಂಗಗಳನ್ನು ತೆಗೆಯಲಾಗುತ್ತದೆ. ಇದರಲ್ಲಿ ಸಾವು ಸಂಭವಿಸಿದ ತಕ್ಷಣವೇ ದೇಹವನ್ನು ಸಂರಕ್ಷಕ ದ್ರಾವಣದಲ್ಲಿ ಅದ್ದಿಡಬೇಕಾದ ಶಸ್ತ್ರಚಿಕಿತ್ಸಾ ತಂಡ ಇರಬೇಕಾದ ಕಾರಣ ಇದು ಸಾಕಷ್ಟು ಪರಿಶ್ರಮವನ್ನು ಬೇಡುವ ಕ್ರಮವಾಗಿದೆ. ಹಾಗಾಗಿ ಇಂತಹ ಕಸಿಗಳು ಕೇವಲ ತಕ್ಷಣದಲ್ಲಿ ಆಪರೇಶನ್ ಕೋಣೆ ಲಭ್ಯವಿರುವ ಆಸ್ಪತ್ರೆಗಳಲ್ಲಿ ಮಾತ್ರ ಮಾಡಲು ಸಾಧ್ಯ.

ಇನ್ನು ಕೆಲವೇ ದೇಶಗಳಲ್ಲಿ ಅಳವಡಿಸಿಕೊಳ್ಳಲಾಗಿರುವ ಒಂದು ವಿಧಾನವೆಂದರೆ ವ್ಯಕ್ತಿಯು ಅಂಗಾಂಗ ದಾನ ಮಾಡುವ ವಿರುದ್ಧ ಮಾತನಾಡಿಲ್ಲ ಎಂದಾದರೆ ಆತ ಮೃತಪಟ್ಟ ನಂತರ ಆತ ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿದ್ದಾನೆ ಎಂದು ಭಾವಿಸಿ ಆತನ ಅಂಗಾಂಗಗಳನ್ನು ತೆಗೆಯುವುದು. ಇಲ್ಲಿ ಮೃತನ ಕುಟುಂಬದ ಒಪ್ಪಿಗೆಯ ಅಗತ್ಯವಿರುವುದಿಲ್ಲ. ಇಂತಹ ನಿಯಮಗಳು ಸಾಮಾಜಿಕ ಊಹೆಯ ಬಹುದೊಡ್ಡ ನೆಗೆತವಾಗಿದೆ ಮತ್ತು ಇದನ್ನು ಅನುಷ್ಠಾನಕ್ಕೆ ತರಲು ಸರಿಯಾದ ಮಾಹಿತಿಯುಳ್ಳ ಸಾರ್ವಜನಿಕರ ಅಗತ್ಯವಿದೆ. ಜೊತೆಗೆ ಪಾರದರ್ಶಕ ಮತ್ತು ಸಾಂಘಿಕ ಆರೋಗ್ಯ ರಕ್ಷಣಾ ವ್ಯವಸ್ಥೆಯ ಅಗತ್ಯವಿದೆ. ಬಹಳಷ್ಟು ದೇಶಗಳು ಇದರಿಂದ ದೂರವುಳಿದಿದ್ದು ಅಂಗಾಂಗ ಪಡೆಯಲು ಕುಟುಂಬಸ್ಥರ ಮನವೊಲಿಸುವ ಕೆಲಸಕ್ಕೆ ಹೆಚ್ಚು ಮಹತ್ವ ನೀಡುತ್ತವೆ. ಭಾರತದಲ್ಲಿ ಕುಟುಂಬಸ್ಥರ ಒಪ್ಪಿಗೆ ಪಡೆಯುವುದರಲ್ಲಿ ಯಾವುದೇ ಸಮಸ್ಯೆಯಿಲ್ಲ. ಆದರೆ, ಆರೋಗ್ಯ ವ್ಯವಸ್ಥೆಯಲ್ಲಿ ಮೆದುಳುಸಾವನ್ನು ಗುರುತಿಸುವಲ್ಲಿ ಮತ್ತು ಕುಟುಂಬಸ್ಥರನ್ನು ವ್ಯವಸ್ಥಿತವಾಗಿ ಮತ್ತು ಸೂಕ್ಷ್ಮರೀತಿಯಲ್ಲಿ ತಲುಪಲಾಗದಿರುವುದೇ ಸಮಸ್ಯೆಯಾಗಿದೆ.

ಕಾನೂನಾತ್ಮಕ ಅಂಗಾಂಗ ದಾನಕ್ಕೆ ಉಡುಗೊರೆಗಳು

ದಾನಿಗಳ ಕುಟುಂಬಕ್ಕೆ ಆರ್ಥಿಕೇತರ ಬಹುಮಾನಗಳನ್ನು ನೀಡಬೇಕು ಎಂಬ ಅನೇಕ ಸಲಹೆಗಳು ಬಂದಿದ್ದರೂ ಇವುಗಳಲ್ಲಿ ಯಾವುದನ್ನೂ ಅನುಷ್ಠಾನಗೊಳಿಸಲಾಗಿಲ್ಲ. ದಾನಿಗಳ ಕುಟುಂಬಸ್ಥರು ಇದಕ್ಕಾಗಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಕೇವಲ ಧನ್ಯವಾದವನ್ನಷ್ಟೇ ಪಡೆಯುತ್ತಾರೆ. ಅದರಲ್ಲೂ ಒಂದು ವಿಷಯವಿದೆ, ಮುಂಬೈಯಲ್ಲಿ ಬಹಳಷ್ಟು ಕುಟುಂಬಗಳು ವೈದ್ಯರು ಸಲಹೆ ಮಾಡದಿದ್ದರೂ ತಮ್ಮ ಪ್ರೀತಿಪಾತ್ರರ ಅಂಗಾಂಗಗಳನ್ನು ದಾನ ಮಾಡಲು ಮುಂದೆ ಬಂದ ಉದಾಹರಣೆಗಳನ್ನು ನಾವು ಕಂಡಿದ್ದೇವೆ, ಆದರೆ ದಾನಿಯ ದೇಹವಿರುವ ಆಸ್ಪತ್ರೆ ಅದನ್ನು ದಾನಕ್ಕೆ ಅರ್ಹ ಎಂದು ಗುರುತಿಸಬೇಕು ಎಂಬ ವಿಚಿತ್ರ ಕಾನೂನಿನ ಪರಿಣಾಮವಾಗಿ ಅವರಿಗೆ ಹಾಗೆ ಮಾಡಲು ಸಾಧ್ಯವಾಗಿಲ್ಲ. ಇನ್ನೊಂದು, ಮೆದುಳುಸಾವನ್ನು ಪರಿಗಣಿಸುವ ವಿಚಿತ್ರವಾದ ಕಾನೂನು. ಕುಟುಂಬಸ್ಥರ ಒಪ್ಪಿಗೆಯ ಮೇರೆಗೆ ಅಂಗಾಂಗಗಳನ್ನು ತೆಗೆದ ನಂತರ ಆಮ್ಲಜನಕ ಪೂರೈಕೆಯನ್ನು ಸ್ಥಗಿತಗೊಳಿಸಲಾದರೆ ಒಂದು ವೇಳೆ ಸಂಬಂಧಿಕರು ದಾನಕ್ಕೆ ಒಪ್ಪದಿದ್ದರೆ ಆಮ್ಲಜನಕ ಪೂರೈಕೆಯನ್ನು ಮುಂದುವರಿಸಿ ಇನ್ನಷ್ಟು ದಿನಗಳ ಕಾಲ ವ್ಯಕ್ತಿಯನ್ನು ತೀವ್ರ ನಿಗಾ ಘಟಕದಲ್ಲಿಡುವ ಮೂಲಕ ಸಂಬಂಧಿಕರು ಸಾವಿರಾರು ರೂಪಾಯಿ ಹೆಚ್ಚುವರಿ ವೆಚ್ಚಮಾಡಬೇಕಾಗುತ್ತದೆ. ಸರಳವಾಗಿ ಹೇಳಬೇಕೆಂದರೆ ಅಂಗಾಂಗ ದಾನಕ್ಕೆ ಸೂಚ್ಯವಾಗಿ ಬೆಂಬಲವಿದ್ದರೂ ಪ್ರಾಥಮಿಕ ಹಂತದಲ್ಲಿ ದಾನದ ಪ್ರಮಾಣವನ್ನು ಹೆಚ್ಚಿಸುವಂತಹ ಯಾವುದೇ ಸವಲತ್ತು ಇಲ್ಲ. ಹಾಗಾಗಿ ಸದ್ಯ ಕೊನೆಯ ಹಂತದ ಅಂಗಾಂಗ ವೈಫಲ್ಯದಿಂದ ನರಳುತ್ತಿರುವ ಬಹುತೇಕ ಭಾರತೀಯರು ಕನಿಷ್ಠ ಮುಂದಿನ ಕೆಲವು ವರ್ಷಗಳಾದರೂ ಜೀವಂತ ದಾನಿಗಳನ್ನೇ ಅವಲಂಬಿಸಿರಬೇಕಾಗುತ್ತದೆ. ಈಗಿನ ಕಾನೂನು ರೋಗಿಯ ಜೊತೆಗಿನ ಸಂಬಂಧವನ್ನು ದೃಢೀಕರಿಸಿದ ನಂತರ ಅಂಗಾಂಗಗಳನ್ನು ದಾನ ಮಾಡಲು ಅನುಮತಿ ನೀಡುತ್ತದೆ. ಈ ಅನುಮತಿಯನ್ನು ಬಾಹ್ಯ ಪ್ರತಿನಿಧಿಗಳನ್ನು ಹೊಂದಿರುವ ಸ್ಥಳೀಯ ಆಸ್ಪತ್ರೆ ಮೂಲದ ಸಮಿತಿಗಳು ನೀಡುತ್ತವೆ. ಒಂದು ವೇಳೆ ದಾನಿಯು ರೋಗಿಯ ದೂರದ ಸಂಬಂಧಿ (ಪತಿ, ಪತ್ನಿ, ತಾಯಿ, ತಂದೆ, ಸೋದರ, ಸೋದರಿ, ಮಗ, ಮಗಳು, ಅಜ್ಜ ಮತ್ತು ಅಜ್ಜಿಯ ಹೊರತಾಗಿ) ಅಥವಾ ಪರೋಪಕಾರದ ಭಾವನೆಯಿಂದ ಅಂಗಾಂಗಗಳನ್ನು ದಾನ ಮಾಡುವುದಾದರೆ ರೋಗಿ ಮತ್ತು ದಾನಿಯ ಮಧ್ಯೆ ಯಾವುದೇ ಆರ್ಥಿಕ ಲೇವಾದೇವಿ ನಡೆದಿಲ್ಲ ಎಂಬುದನ್ನು ರಾಜ್ಯ ಆರೋಗ್ಯ ಸೇವಾ ನಿರ್ದೇಶನಾಲಯ ಅಂಗಾಂಗ ಕಸಿಯ ಬಗ್ಗೆ ನಿಗಾಯಿಡಲು ರಚಿಸಿರುವ ಸಮಿತಿಯ ಮುಂದೆ ಹಾಜರಾಗುವ ಮೂಲಕ ಸಾಬೀತುಪಡಿಸಬೇಕು. ಹಾಗಾಗಿ ಸೈದ್ಧಾಂತಿಕವಾಗಿ ಈ ಕಾನೂನು ಆರ್ಥಿಕ ವ್ಯವಹಾರವಿಲ್ಲದಿರುವ ಸಂಬಂಧವಿಲ್ಲದವರ ಮಧ್ಯೆ ಅಂಗಾಂಗ ದಾನಕ್ಕೆ ಅನುಮತಿ ನೀಡುತ್ತದೆ. ಒತ್ತಾಯದ ದಾನದ ಪತ್ತೆ

ಇವೆಲ್ಲವುಗಳ ಮಧ್ಯೆ ದಾನಿಗಳ ಮೇಲೆ ನಡೆಸುವ ಶಸ್ತ್ರಚಿಕಿತ್ಸೆಯ ಪ್ರಕ್ರಿಯೆ ಕೂಡಾ ಸಾಕಷ್ಟು ತೊಡಕುಗಳನ್ನು ಸೃಷ್ಟಿಸಬಹುದು ಅದರಲ್ಲೂ ಅಪರೂಪದಲ್ಲಿ ದಾನಿಯ ಸಾವೂ ಸಂಭವಿಸಬಹುದು. ಜೊತೆಗೆ ಸಂಬಂಧದ ಹೊರತಾಗಿಯೂ ವೈದ್ಯಕೀಯ ತಂಡವು ದಾನಿಯು ಶಸ್ತ್ರಚಿಕಿತ್ಸೆಗೆ ಒಳಗಾಗುವ ಮುನ್ನ ದೈಹಿಕ ಮತ್ತು ಮಾನಸಿಕವಾಗಿ ಸಿದ್ಧಗೊಳ್ಳಲು ಸಾಕಷ್ಟು ಸಮಾಲೋಚನೆಗಳನ್ನು ನಡೆಸಬೇಕಾಗುತ್ತದೆ. ಒಂದು ವೇಳೆ ದಾನಿಯು ಹಣದ ಆಮಿಷಕ್ಕೊಳಗಾಗಿ ಸಂಬಂಧಿಕನಂತೆ ಪೋಸು ನೀಡುವ ಮೂಲಕ ಚಾಣಾಕ್ಷ ವೈದ್ಯಕೀಯ ತಂಡವನ್ನು ವಂಚನೆಗೊಳಿಸದಂತೆ ಗೊಂದಲಮಯ ಪ್ರಶ್ನೆಗಳನ್ನು ಕೇಳಲಾಗುತ್ತದೆ. ವ್ಯಕ್ತಿಯ ಮೇಲೆ ಒತ್ತಡ ಹೇರುವ ಮೂಲಕ (ಹತ್ತಿರದ ಸಂಬಂಧಿಗಳನ್ನು ಕೂಡಾ) ಅಂಗಾಂಗ ದಾನ ಮಾಡಿಸಲಾಗುತ್ತಿದೆ ಎಂಬುದನ್ನು ಪತ್ತೆಹಚ್ಚುವ ಸುಲಭ ದಾರಿಯೆಂದರೆ ಮುಚ್ಚಿದ ಕೋಣೆಯ ಒಳಗೆ ವೈದ್ಯಕೀಯ ತಂಡ ದಾನಿಯ ಜೊತೆ ನೇರಾನೇರ ಮಾತುಕತೆ ನಡೆಸಿ ದಾನ ಮಾಡದಂತೆ ವೈದ್ಯಕೀಯ ಕಾರಣವನ್ನು ನೀಡುವುದು. ಈ ಅತ್ಯದ್ಭುತ ಮತ್ತು ಸೈದ್ಧಾಂತಿಕವಾಗಿ ಸ್ವೀಕಾರಾರ್ಹವೂ ಆಗಿರುವ ಪ್ರಕ್ರಿಯೆಯು ವ್ಯಕ್ತಿಯು ಅಂಗ ದಾನ ಮಾಡಲು ಬಯಸದಿದ್ದರೂ ಆತ/ಆಕೆಯ ಮೇಲೆ ಒತ್ತಡ ಹೇರುವ ಅಥವಾ ಕಿರುಕುಳ ನೀಡುವ ಮೂಲಕ ದಾನ ಪಡೆಯಲಾಗುತ್ತಿದೆ ಎಂಬುದನ್ನು ಸಾಬೀತುಪಡಿಸುತ್ತದೆ. ಇನ್ನು ಕೆಲವು ದೇಶಗಳಲ್ಲಿರುವ ದಾನಿಯ ವಕೀಲ ಎಂಬ ವ್ಯವಸ್ಥೆ ಕೂಡಾ ಪ್ರತೀ ಹಂತದಲ್ಲೂ ದಾನಿಯ ಹಿತಾಸಕ್ತಿಯನ್ನು ಕಾಪಾಡಲು ನೆರವಾಗುತ್ತದೆ. ಸ್ಪಷ್ಟವಾಗಿ ಕಸಿ ಸಮುದಾಯದ ಅನುಭವದ ಆಧಾರದ ಮೇಲೆ ನಡೆಯುವ ಈ ಎಲ್ಲಾ ಕ್ರಿಯೆಗಳು ದಾನಿಯು ಸಂಪೂರ್ಣ ಸ್ವಾಯತ್ತತೆ ಹೊಂದಿರುವುದನ್ನು ದೃಢಪಡಿಸುತ್ತದೆ.

ಆಧುನಿಕ ಅಂಗಾಂಗ ಕಸಿಯ ಒಂದು ಬದಲಾಯಿಸಲಾಗದ ವಾಸ್ತವ ಎಂದರೆ ಹಲವು ರೀತಿಯ ವೈದ್ಯಕೀಯ ಮತ್ತು ಸಾಮಾಜಿಕ ತಂತ್ರಗಳ ಬಳಿಕವೂ ಬೇಡಿಕೆಯು ಪೂರೈಕೆಗಿಂತ ಸಾಕಷ್ಟು ಹೆಚ್ಚಿದೆ. ಅದರ ಪರಿಣಾಮವಾಗಿ ಮೃತರ ಅಂಗಾಂಗ ದಾನ ಸಂದರ್ಭದಲ್ಲಿ ಅದು ಸಾಮಾಜಿಕ ಗುಂಪಿಗೆ ದಾನ ಮಾಡಲಾಗುತ್ತಿದ್ದು ಯಾರು ಈ ಅಂಗಾಂಗಗಳನ್ನು ಮೊದಲು ಪಡೆಯಬೇಕು ಎಂಬ ಬಗ್ಗೆ ಚರ್ಚೆ ಆರಂಭವಾಗಿದೆ. ಬಹುತೇಕ ದೇಶಗಳಲ್ಲಿ ರೋಗದ ತೀವ್ರತೆ ಮತ್ತು ನ್ಯಾಯದ ತತ್ವದ ಆಧಾರದ ಮೇಲೆ ಅಂಗಾಂಗ ಹಂಚಿಕೆ ವ್ಯವಸ್ಥೆಯಿದೆ. ಬಹುತೇಕ ಎಲ್ಲಾ ದೇಶಗಳೂ ಅಂಗಾಂಗ ಕಸಿಯನ್ನು ಸಾರ್ವತ್ರಿಕ ಆರೋಗ್ಯ ವ್ಯವಸ್ಥೆಯ ಭಾಗವೆಂದೇ ಪರಿಗಣಿಸಿವೆ. ಸದ್ಯ ಭಾರತದಲ್ಲಿ ಸಾಂಘಿಕ ವಿತರಣಾ ವ್ಯವಸ್ಥೆಯಿದ್ದರೂ ಮೃತ ದಾನಿಗಳ ಅಂಗಾಂಗಗಳು ಬಹುತೇಕವಾಗಿ ಶ್ರೀಮಂತರ ಪಾಲಾಗುತ್ತವೆ. ಯಾಕೆಂದರೆ, ಕಸಿಯು ಮುಖ್ಯವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಾಗಿ ನಡೆಯುತ್ತಿದ್ದು ಅದಕ್ಕೆ ತಗಲುವ ವೆಚ್ಚ ಕೂಡಾ ಅತ್ಯಧಿಕವಾಗಿರುತ್ತವೆ. ಹಾಗಾಗಿ ಬಡವರು ಅಂಗಾಂಗ ದಾನ ಮಾಡುವಂತೆ ಬೇಡಲಾಗುತ್ತದೆ ಆದರೆ ಅವರಿಗೆ ಅಗತ್ಯ ಬಿದ್ದಾಗ ಅಂಗಾಂಗಗಳು ಸಿಗುವುದಿಲ್ಲ. ಅದೇ ಒಂದು ಹಗರಣ, ಆದರೆ ಅದನ್ನು ಹಾಗೆಂದು ಭಾವಿಸಲಾಗುವುದಿಲ್ಲ. ನಿಯಂತ್ರಿತ ಅಂಗಾಂಗ ಮಾರುಕಟ್ಟೆ?

ಅಂಗಾಂಗಗಳ ಕೊರತೆಗೆ ಸಂಬಂಧಿಸಿದಂತೆ ಸಂಬಂಧಿತ ದಾನದ ಸಾಮಾಜಿಕ ನೀತಿಯ ಮೇಲೆ ಆಸಕ್ತಿದಾಯಕ ವಾದವೊಂದು ತಲೆಯೆತ್ತುತ್ತದೆ. ಪೀಡನಾದಾಯಕ ಅಂಗಾಂಗ ಮಾರಾಟವು ಕಡಿಮೆ ಆದಾಯ ಹೊಂದಿರುವ ದೇಶಗಳಲ್ಲಿ ಅನಿವಾರ್ಯವಾಗಿದ್ದರೂ ಇದು ಸ್ಪಷ್ಟವಾಗಿ ಬಡವರಿಗೆ ಅನ್ಯಾಯವಾಗಿರುವ ಕಾರಣ ಸರಕಾರವೇ ಮೇಲುಸ್ತುವಾರಿ ನೋಡಿಕೊಳ್ಳುವಂತಹ ಒಂದು ನಿಯಂತ್ರಿತ ಮಾರುಕಟ್ಟೆಯನ್ನು ರಚಿಸಲು ಸಾಧ್ಯವಿಲ್ಲವೇ ಎಂಬ ಪ್ರಸ್ತಾವನೆಯೂ ಬರುತ್ತದೆ. ಇದರಿಂದ ದಾನಿಯ ಹಿತಾಸಕ್ತಿಯನ್ನು ಕಾಯಲಾಗಿದೆ ಮತ್ತು ಆತನಿಗೆ ಸರಿಯಾಗಿ ಪರಿಹಾರವನ್ನೂ ನೀಡಲಾಗಿದೆ ಎಂದು ಖಾತ್ರಿಪಡಿಸಿಕೊಳ್ಳಬಹುದು. ಮತ್ತು ಇದರಲ್ಲಿ ಚರ್ಚೆ ನಡೆದು ಹೆಚ್ಚಿನ ಪರಿಹಾರವನ್ನು ನೀಡಲು ಶಕ್ತರಾಗಿರುವ ಕೆಲವರು ಪಾರದರ್ಶಕ ರೀತಿಯಲ್ಲಿ ಕಸಿಯನ್ನು ಪಡೆಯಬಹುದು ಮತ್ತು ಕೆಲವು ಬಡವರು ಸ್ವಲ್ಪ ಹೆಚ್ಚಿನ ಪರಿಹಾರವನ್ನು ಪಡೆದುಕೊಳ್ಳಬಹುದು. ಇರಾನ್‌ನಲ್ಲಿ ಇಂಥಾ ನಿಯಂತ್ರಿತ ಮಾರುಕಟ್ಟೆಯ ಪ್ರಯೋಗ ನಡೆಸಲಾಗಿದ್ದು ಸಂಬಂಧೇತರ ದಾನಿಗಳಿಗೆ ಸರಕಾರವು ಇಂತಿಷ್ಟು ಪರಿಹಾರ ಎಂದು ನಿಗದಿಪಡಿಸಿದೆ. ಭಾರತದಲ್ಲಿರುವ ತೀವ್ರ ಅಸಮಾನತೆಯ ಹಿನ್ನೆಲೆಯಲ್ಲಿ ಇಂಥಾ ಒಂದು ನೀತಿಯ ಸಾಮಾಜಿಕ ಪರಿಣಾಮ ತುಂಬಾ ಸವಾಲೊಡ್ಡುವಂಥದ್ದಾಗಿರಬಹುದು. ಅಂಗಾಂಗಗಳ ಬೆಲೆಯನ್ನು ನಿಗದಿಪಡಿಸುವವರು ಯಾರು? ದಾನಿಯೇ? ಹೌದಾದಲ್ಲಿ ಅಂಗಾಂಗವನ್ನು ಹರಾಜು ಮಾಡಬಹುದೇ? ನಂತರ ಅದು ಹೆಚ್ಚು ಹರಾಜು ಕರೆದವರಿಗೆ ಸೇರುತ್ತದೆಯೇ? ಮತ್ತು ಹಣ ನೀಡಿದರೆ ದಾನಿಗಳು ಸಿಗುತ್ತಾರೆ ಎಂಬುದನ್ನು ಖಚಿತಪಡಿಸಿಕೊಂಡ ನಂತರ ಶ್ರೀಮಂತರು ತಮ್ಮ ಸಂಬಂಧಿಕರನ್ನು ಅಂಗಾಂಗ ದಾನ ಮಾಡಲು ಪ್ರೋತ್ಸಾಹಿಸುತ್ತಾರೆಯೇ? ಇವುಗಳು ಈ ನರಕಸದೃಶ ದೃಶ್ಯಾವಳಿಗಳ ಮುಖಕ್ಕೆ ಬಡಿಯುವ ಕೆಲವೊಂದು ಪ್ರಶ್ನೆಗಳಷ್ಟೆ .
ಇನ್ನೊಂದು ಕಡೆ ದರಿದ್ರ ಜೀವನ ಅಥವಾ ಅಂಗಾಂಗ ವೈಫಲ್ಯದಿಂದ ಉಂಟಾಗುವ ಸಾವು ಎದುರಾದಾಗ ಆ ನರಳಾಟವನ್ನು ನಾವು ಹೇಗೆ ನಿರೀಕ್ಷಿಸಬಹುದು? ಬಡವರು ಪ್ರಾಯಶಃ ತಮ್ಮ ಹಣೆಬರಹ ಎಂದು ಸ್ವೀಕರಿಸಿಬಿಡಬಹುದು ಆದರೆ ಮಧ್ಯಮವರ್ಗ ಮತ್ತು ಶ್ರೀಮಂತರು ಹೇಗಾದರೂ ಮಾಡಿ ಒಂದು ಅಂಗಾಂಗ ಪಡೆಯಲು ಪ್ರಯತ್ನಿಸುತ್ತಾರೆ. ಮತ್ತು ಎಲ್ಲಾ ದಾರಿಗಳು ಮುಚ್ಚಿದಾಗ ವ್ಯವಸ್ಥೆಯನ್ನು ಮೋಸಗೊಳಿಸಿ ಅಂಗಾಂಗವನ್ನು ಖರೀದಿಸುವ ಆಸೆ ಹುಟ್ಟುತ್ತದೆ. ಅಷ್ಟಕ್ಕೂ ಭಾರತದಲ್ಲಿ ಅವರು ಜೀವಿಸಿದ ಸಮಯದಲ್ಲಿ ಸರಿಯಾದ ಬೆಲೆತೆತ್ತರೆ ಆ ಪ್ರಯತ್ನ ಕೈಗೂಡುತ್ತದೆ ಎಂಬ ಖಾತ್ರಿ ಅವರಿಗಿರುತ್ತದೆ.

ಯಾರನ್ನು ದೂಷಿಸಬೇಕು?

ಹಾಗಾದರೆ ಈ ಪೀಡನಾಮಯ ಜಾಲಕ್ಕೆ ನಾವು ಯಾರನ್ನು ಜವಾಬ್ದಾರರನ್ನಾಗಿಸಬೇಕು? ಅಂಗಾಂಗ ವೈಫಲ್ಯದಿಂದ ಸಾಯುತ್ತಿರುವ ಆದರೆ ಅಂಗಾಂಗ ಕಸಿಯಿಂದ ತಾನು ಬದುಕಬಲ್ಲೆ ಎಂದು ಅರಿತಿದ್ದು ಅದನ್ನು ಹಣದಿಂದ ಖರೀದಿಸಲು ನಿರ್ಧರಿಸುವ ರೋಗಿಯೇ? ಅಥವಾ ತನ್ನ ಸಾಲವನ್ನು ತೀರಿಸಲೋ ಅಥವಾ ಕ್ಷಣಿಕವಾದರೂ ಬಡತನದ ನರಳಾಟದಿಂದ ಹೊರಬರುವ ಪ್ರಯತ್ನದಲ್ಲಿ ಮಧ್ಯವರ್ತಿಯು ನೀಡಿದ ಹಣದ ಆಮಿಷಕ್ಕೆ ಒಳಗಾಗಿ ಅಂಗಾಂಗ ದಾನ ಮಾಡಲು ಒಪ್ಪುವ ಮಹಿಳೆಯೇ? ಅಥವಾ ರೋಗಿ ಮತ್ತು ದಾನಿ ಇಬ್ಬರ ಹತಾಶ ಪರಿಸ್ಥಿತಿಯನ್ನು ಬಳಸಿಕೊಂಡು ಅದಕ್ಕೆ ಬೇಕಾದಂತಹ ನಕಲಿ ದಾಖಲೆಗಳನ್ನು ಮತ್ತು ಪಾವತಿಗೆ ಹಣವನ್ನು ವ್ಯವಸ್ಥೆಗೊಳಿಸುವ ದಲ್ಲಾಳಿಯೇ? ಅಥವಾ ಕೇವಲ ಸಂಖ್ಯೆಗಳು ಮತ್ತು ಲಾಭದ ಮೇಲೆ ಕಣ್ಣಿಟ್ಟಿರುವ ಆ ಮೂಲಕ ಇಂತಹ ಪ್ರಕ್ರಿಯೆಗಳಿಗೆ ಅವಕಾಶ ನೀಡುವ ಆಸ್ಪತ್ರೆಗಳು ಮತ್ತು ವೈದ್ಯಕೀಯ ತಂಡಗಳೇ? ಇನ್ನು ತೃತೀಯ ಚಿಕಿತ್ಸಕಾ ಸಾರ್ವಜನಿಕ ಔಷಧಿಗಳನ್ನು ಪೋಷಿಸುವಲ್ಲಿ ವಿಫಲವಾಗಿರುವ, ಅಂಗಾಂಗ ಕಸಿಯಂತಹ ಸೂಕ್ಷ್ಮ ವಿಷಯವನ್ನು ಖಾಸಗಿ ಕ್ಷೇತ್ರದ ಕೈಗೊಪ್ಪಿಸಿರುವ ಸರಕಾರವನ್ನು ದೂಷಿಸಬೇಕೇ? ಮತ್ತು ಅತಿರೇಕದ ಮತ್ತು ಜನಪ್ರಿಯ ರಾಜಕೀಯದ ಗುಂಗಿನಲ್ಲಿ ಕುರುಡಾಗಿರುವ ಆ ಮೂಲಕ ಹಲವು ದೇಶಗಳಂತೆ ಗುಣಮಟ್ಟದ ಆರೋಗ್ಯ ವ್ಯವಸ್ಥೆಯನ್ನು ಸಾಮಾಜಿಕ ರಾಜಕೀಯ ನೀತಿಯಾಗಿ ರೂಪಿಸುವಲ್ಲಿ ವಿಫಲವಾದ ಈ ದೇಶದ ಜನರನ್ನೇ? ಮತ್ತು ದಿನಪತ್ರಿಕೆಯಲ್ಲಿ ಕಿಡ್ನಿ ವೈಫಲ್ಯದಿಂದ ನರಳುತ್ತಿರುವ ಬೃಜ್‌ಕಿಶೋರ್ ಜೈಸ್ವಾಲ್ ಮತ್ತು ನಿರುದ್ಯೋಗಿ ಮದ್ಯವ

Writer - ಸಂಜಯ್ ನಗ್ರಾಲ್

contributor

Editor - ಸಂಜಯ್ ನಗ್ರಾಲ್

contributor

Similar News