ಕನ್ಹಯ್ಯ ಜಾಮೀನು ರದ್ದತಿಗೆ ಸುಪ್ರೀಂ ನಕಾರ
Update: 2016-08-11 23:11 IST
ಹೊಸದಿಲ್ಲಿ, ಆ.11: ದೇಶದ್ರೋಹದ ಪ್ರಕರಣ ದಲ್ಲಿ ಇಲ್ಲಿನ ಜವಾಹರಲಾಲ್ ನೆಹರೂ ವಿವಿ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಕನ್ಹಯ್ಯಾ ಕುಮಾರ್‌ಗೆ ನೀಡಲಾದ ಮಧ್ಯಾಂತರ ಜಾಮೀನನ್ನು ರದ್ದುಪಡಿಸಬೇಕೆಂದು ಕೋರಿ ಇಬ್ಬರು ವ್ಯಕ್ತಿಗಳು ಸಲ್ಲಿಸಿರುವ ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ಗುರುವಾರ ತಿರಸ್ಕರಿಸಿದೆ. ಬಿಡುಗಡೆಯಾದ ಬಳಿಕ ಕನ್ಹಯ್ಯಿ ಕುಮಾರ್ ಯಾವುದೇ ರಾಷ್ಟ್ರ ವಿರೋಧಿ ಭಾಷಣ ಮಾಡಿದ್ದರೆಂಬುದನ್ನು ಸಾಬೀತು ಪಡಿಸುವ ಯಾವುದೇ ಪುರಾವೆಗಳನ್ನು ಅರ್ಜಿದಾರರು ತನ್ನ ಮುಂದಿಟ್ಟಿಲ್ಲವೆಂದು ಮುಖ್ಯ ನ್ಯಾಯಮೂರ್ತಿ ಪಿ.ಎಸ್.ತೇಜ್ ಅರ್ಜಿಯನ್ನು ತಿರಸ್ಕರಿಸುತ್ತಾ ತಿಳಿಸಿದರು.
‘‘ಆರೋಪಿಗಳಿಂದ ಪ್ರಕರಣದ ತನಿಖೆಗೆ ಯಾವುದೇ ರೀತಿ ಅಡ್ಡಿಯುಂಟಾಗಿರುವ ಬಗ್ಗೆ ಯಾರೂ ಕೂಡಾ ಈವರೆಗೆ ನ್ಯಾಯಾಲಯದ ಗಮನಕ್ಕೆ ತಂದಿಲ್ಲವೆಂದು ಅದು ಸ್ಪಷ್ಟಪಡಿಸಿದೆ.