ಜುಡೋ ಪದಕ ವಿಜೇತನಿಗೆ ಬೀಚ್‌ನಲ್ಲಿ ಪಂಚ್ ..!

Update: 2016-08-11 17:58 GMT

ರಿಯೋ ಡಿ ಜನೈರೊ, ಆ.11: ಒಲಿಂಪಿಕ್ಸ್‌ನ ಜುಡೋದಲ್ಲಿ ಕಂಚು ಜಯಿಸಿದ ಬೆಲ್ಜಿಯಂನ ಅಥ್ಲೀಟ್‌ಗೆ ಬೀಚ್‌ನಲ್ಲಿ ತಂಡವೊಂದು ಥಳಿಸಿದ ಘಟನೆ ಬೆಳಕಿಗೆ ಬಂದಿದೆ.
 ಡಿರ್ಕ್ ವ್ಯಾನ್ ಟಿಶೆಟ್ ಅವರು ರಿಯೋದ ಕೊಪಕಾಬನಾ ಬೀಚ್‌ನಲ್ಲಿ ತಡರಾತ್ರಿ  ಸಂಭ್ರಮಾಚಾರಣೆಗೆ  ತೆರಳಿದ್ದ  ವೇಳೆ ಈ ಘಟನೆ ನಡೆದಿದೆ.

   ಜುಡೋದ 73 ಕೆ.ಜಿ. ವಿಭಾಗದಲ್ಲಿ ಡಿರ್ಕ್ ಸೋಮವಾರ ಕಂಚು ಜಯಿಸಿದ್ದರು. ಬಳಿಕ ಡಿರ್ಕ್ ತನ್ನ ತರಬೇತಿ ಪಾಲುದಾರನೊಂದಿಗೆ ಬೀಚ್‌ಗೆ ತೆರಳಿದ್ದರು. ಬೀಚ್‌ನಲ್ಲಿ ತರಬೇತಿ ಪಾಲುದಾರನ ಫೋನನ್ನು ಕಳ್ಳನೊಬ್ಬ ಕಸಿದುಕೊಂಡು ಪರಾರಿಯಾಗುತ್ತಿದ್ದಾಗ ಅವನನ್ನು ಹಿಡಿಯಲು ಓಡಿದ ಡಿರ್ಕ್‌ನ ಮುಖಕ್ಕೆ ಅಪರಿಚಿತನೊಬ್ಬ ಬಲವಾದ ಪಂಚ್ ನೀಡಿದ್ದಾನೆ. ಇದರಿಂದಾಗಿ ಡಿರ್ಕ್ ಅವರ ಕಣ್ಣಿಗೆ ಗಾಯವಾಗಿದೆ ಎಂದು ಬೆಲ್ಜಿಯಂನ ಒಲಿಂಪಿಕ್ಸ್ ಕಮಿಟಿಯ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News