ಸಿಗರೇಟ್ ಸೇದುತ್ತಿರುವ ಒಬಾಮ ಪುತ್ರಿ ಮಾಲಿಯಾ ಒಬಾಮ..!
Update: 2016-08-12 16:16 IST
ವಾಷಿಂಗ್ಟನ್, ಆ.12: ವಿಶ್ವದ ದೊಡ್ಡಣ್ಣ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಹಿರಿಯ ಮಗಳು ಮಾಲಿಯಾ ಒಬಾಮ ಅವರು ಸಂಗೀತ ಕಾರ್ಯಕ್ರಮವೊಂದರಲ್ಲಿ ಸಿಗರೇಟ್ ಸೇದುತ್ತಿರುವ ಚಿತ್ರ ಹಾಗೂ ವಿಡಿಯೋ ಇದೀಗ ಸಾಮಾಜಿಕ ಜಾಲಾ ತಾಣಗಳಲ್ಲಿ ವೈರಲ್ ಆಗಿದೆ.
ಚಿಕಾಗೋದ ಲೊಲ್ಲಾಪಾಲೂಜಾದಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಮಾಲಿಯಾ ಸ್ನೇಹಿತರ ಜತೆಗೆ ಭಾಗವಹಿಸಿದ್ದಳು. ಮಾಲಿಯಾಕ್ಕೆ ತೆರಳುವ ಉದ್ದೇಶಕ್ಕಾಗಿ ಅವರು ಇತ್ತೀಚೆಗೆ ನಡೆದ ಹಿಲರಿ ಕ್ಲಿಂಟನ್ ಅವರ ಡೆಮಾಕ್ರಿಟಿಕ್ ಪಕ್ಷದ ರಾಷ್ಟ್ರೀಯ ಸಮ್ಲೇಳನದಲ್ಲಿ ಭಾಗವಹಿಸಿರಲಿಲ್ಲ ಎಂದು ತಿಳಿದು ಬಂದಿದೆ.
ಒಬಾಮ ಪುತ್ರಿ ಸಿಗರೇಟ್ ಸೇದುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಕಾರಣವಾಗಿದೆ.