ಅಶ್ವಿನಿ ಪೊನ್ನಪ್ಪ-ಜ್ವಾಲಾ ಜೋಡಿಗೆ ಸೋಲು
Update: 2016-08-12 22:04 IST
ರಿಯೋ ಡಿ ಜನೈರೊ, ಆ.12: ಮಹಿಳೆಯರ ಬ್ಯಾಡ್ಮಿಂಟನ್ ಡಬಲ್ಸ್ ಪಂದ್ಯದಲ್ಲಿ ಇಂದು ಭಾರತದ ಅಶ್ವಿನಿ ಪೊನ್ನಪ್ಪ ಮತ್ತು ಜ್ವಾಲಾ ಗುಟ್ಟಾ ಅವರು ಸೋಲು ಅನುಭವಿಸಿದರು.
ಹಾಲೆಂಡ್‌ನ ಈಫ್ಜೆಮಸ್ಕನ್ಸ್ ಮತ್ತು ಸೆಲೇನಾ ಪೈಕ್ ವಿರುದ್ಧ ಅಶ್ವಿನ್ ಹಾಗೂಜ್ವಾಲಾ ಅವರು 16-21, 21-16, 17-21 ಅಂತರದಲ್ಲಿ ಸೋಲು ಅನುಭವಿಸಿದರು.
ಗುರುವಾರ ನಡೆದ ಪಂದ್ಯದಲ್ಲಿ ಅಶ್ವಿನಿ ಮತ್ತು ಜ್ವಾಲಾ ಅವರು ಇಂಡೋನೆಷ್ಯಾದ ಜೋಡಿಯ ವಿರುದ್ಧ ಸೋಲು ಅನುಭವಿಸಿದ್ದರು. ಇದರಿಂದಾಗಿ ಇವರಿಗೆಕ್ವಾರ್ಟರ್ ಫೈನಲ್ ಅವಕಾಶ ಕ್ಷೀಣಿಸಿದೆ.
ಇಂದು ಅಶ್ವಿನಿ ಪೊನ್ನಪ್ಪ ಮತ್ತು ಜ್ವಾಲಾ ಗುಟ್ಟಾ ಅವರ ಆಟ ಕೇವಲ 58 ನಿಮಿಷಗಳಲ್ಲಿ ಕೊನೆಗೊಂಡಿತು.