×
Ad

'ಮುಸ್ಲಿಮ್ ರಾಷ್ಟ್ರೀಯ ಮಂಚ್' ಮತ್ತು ಆರೆಸ್ಸೆಸ್ ನ ಹುನ್ನಾರ

Update: 2016-08-13 13:00 IST

ಅಗಸ್ಟ್ ಹದಿನೇಳರಂದು ಆರ್.ಎಸ್.ಎಸ್ ಸಹ ಸಂಘಟನೆ ಮುಸ್ಲಿಂ ರಾಷ್ಟ್ರೀಯ ಮಂಚ್ ಮತ್ತು ಅದರ ಮಹಿಳಾ ವಿಭಾಗ ಮುಸ್ಲಿಂ ಮಹಿಳಾ  ಫೌಂಡೇಷನ್  ರಕ್ಷಾ ಬಂಧನದ ನೆಪದಲ್ಲಿ    ಬಾಯೀ-ಬೆಹನ್ ದಿವಸ್ ಎಂಬ  ಕಾರ್ಯಕ್ರಮ ಆಯೋಜಿಸಲು ಹೊರಟಿದೆ , ಇದು ಯೋಗವನ್ನು ವಿಶ್ವಯೋಗ ದಿನವನ್ನಾಗಿ ಪರಿವರ್ತಿಸಿ ಸಂಘಪರಿಔಆರದ ಸಂಸ್ಕೃತಿಯನ್ನು ವಿಶ್ವದಾದ್ಯಂತ ಹೇರುವ ಹುನ್ನಾರದಂತಿದೆ. ಈ ಕಾರ್ಯಕ್ರಮದ ಹಿಂದೆ ಮುಸ್ಲಿಮರ ಮೇಲೆ ಮನುವಾದಿ ಸಂಸ್ಕೃತಿಯನ್ನು  ಹೇರಿ ಮುಸ್ಲಿಂ ಆಚಾರ ವಿಚಾರಗಳನ್ನು ನಶಿಸುವಂತೆ ಮಾಡುವ ದೊಡ್ಡದೊಂದು ಅಜೆಂಡಾವಿದೆ.

ಮುಸ್ಲಿಮ್ ರಾಷ್ಟ್ರೀಯ ಮಂಚ್'ನ ಮುಸ್ಲಿಂ  ಮಹಿಳಾ ಪೌಂಡೇಷನ್ ರಾಷ್ಟ್ರೀಯ ಅಧ್ಯಕ್ಷೆ ನಾಸ್ನಿಯಾ ಬೇಗಂ ಎಂಬವರನ್ನು ಬಿಟ್ಟು ಶೇಕಡಾ ತೊಂಬತ್ತರಷ್ಟು ಸಂಘಪರಿವಾರದ ಸದಸ್ಯೆಯರಿದ್ದಾರೆ.

2025 ರಲ್ಲಿ ಭಾರತವನ್ನು ಹಿಂದುತ್ವಸಿದ್ದಾಂತ ರಾಷ್ಟ್ರವನ್ನಾಗಿ ಮಾಡಲು ಹೊರಟಿರುವ ಆರ್.ಎಸ್.ಎಸ್ ಗೆ ಅದು ಅಷ್ಟು ಸುಲಭವಿಲ್ಲ ಎಂದು ಚೆನ್ನಾಗಿ ತಿಳಿದಿದೆ. ಆ ಕಾರಣಕ್ಕಾಗಿ ಆರ್.ಎಸ್.ಎಸ್ ನಾಮಧಾರಿ ಮುಸ್ಲಿಮ್ ಮಹಿಳೆಯರನ್ನು ಸೇರಿಸಿಕೊಂಡು ಮುಸ್ಲಿಂ ಫೌಂಡೇಶನ್ ರಚಿಸಿದೆ. ಆರ್.ಎಸ್.ಎಸ್ ಮತ್ತು ಬಿಜೆಪಿ ಕೃಪಾಪೋಷಿತವಾಗಿರುವ ಈ ಸಂಘಟನೆ ಮುಸ್ಲಿಮರ ವಿರುದ್ಧವೇ ಮುಸ್ಲಿಮರನ್ನು ಎತ್ತಿಕಟ್ಟುವ ಹುನ್ನಾರಹೊಂದಿದೆ.

ಇನ್ನು ಈ ರಕ್ಷಾ ಬಂಧನ ದಿನದ ಮೇಲುಸ್ತುವಾರಿ ವಹಿಸಿರುವ ಅರೆಸ್ಸೆಸ್ ಮುಖಂಡ ತೆರೆಮೆರೆಯಲ್ಲಿ ಮುಸ್ಲಿಮರನ್ನು ಒಗ್ಗೂಡಿಸಿ ಮುಸ್ಲಿಮರಿಂದಲೇ ಇಸ್ಲಾಂ ವಿರೋಧಿ ಚಟುವಟಿಕೆಗಳನ್ನು ಮಾಡಿಸಿ ಭಾರತದ ಮುಸ್ಲಿಮರು ತಮ್ಮ ಪರವಾಗಿದ್ದಾರೆ ಎಂಬ ಸಂದೇಶವನ್ನು ವಿಶ್ವಕ್ಕೆ ತಲುಪಿಸುವ ಯೋಜನೆ ಹೊಂದಿದ್ದಾರೆ , ಇದರಿಂದಾಗಿ ಮುಂದೊಂದು ದಿನ ಮುಸ್ಲಿಂ ರಾಷ್ಟ್ರೀಯ ಮಂಚ್ ಭಾರತದ ಮುಸ್ಲಿಮರ ಅಧಿಕೃತ ಸಂಘಟನೆಯಾಗಿದೆ ಎಂದು ಸಾರಲು ಆರ್ ಎಸ್ ಎಸ್ ಹೊರಟಂತಿದೆ.

ಮುಸ್ಲಿಮರ, ಮುಸ್ಲಿಂ ಧರ್ಮದ ನಾಶದ ದ್ಯೇಯದೊಂದಿಗೆ ಕಾರ್ಯಾಚರಿಸುತ್ತಿರುವ ಆರ್ ಎಸ್ ಎಸ್ ಹಾಗೂ ಇದರ ಸಹ ಸಂಘಟನೆ ಮುಸ್ಲಿಂ ಮಹಿಳಾ ಫೌಂಡೇಷನ್ ಹುಟ್ಟುಹಾಕಿ ಅದರ ಮೂಲಕ ಬಾಯೀ ಬೆಹನ್ ರಕ್ಷಾ ಬಂಧನ್ ಕಾರ್ಯಕ್ರಮವನ್ನು ಮುಸ್ಲಿಂ ಸಂಘಟನೆಗಳು, ವಿಧ್ವಾಂಸರು ವಿರೋಧಿಸಬೇಕಿದೆ.

Writer - ಅಹ್ಮದ್ ಎ.

contributor

Editor - ಅಹ್ಮದ್ ಎ.

contributor

Similar News