ಪ್ರವಾಸೋದ್ಯಮ ಕ್ಷೇತ್ರದಲ್ಲಿ ಪ್ರಗತಿ ದಾಖಲಿಸಿದ ರಾಸಲ್‌ಖೈಮ
ರಾಸಲ್‌ಖೈಮ,ಆ.13: ಅತ್ಯಂತ ವೇಗದಲ್ಲಿ ಬೆಳೆಯುತ್ತಿರುವ ಪ್ರವಾಸಿ ಕ್ಷೇತ್ರಗಳ ಪಟ್ಟಿಯಲ್ಲಿ ರಾಸಲ್‌ಖೈಮಕ್ಕೆ ಸ್ಥಾನ ಲಭಿಸಿದೆ ಎಂದು ರ್ಯಾಂಕ್ ಟೂರಿಸಂ ಡೆವಲಪ್‌ಮೆಂಟ್ ಅಥಾರಿಟಿ(ರ್ಯಾಂಕ್ ಟಿ.ಡಿ.ಎ) ಸಿಇಒ ಹೈತಂ ಮತ್ತಾರ್ ಹೇಳಿದ್ದಾರೆಂದು ವರದಿಯಾಗಿದೆ. 2015ಕ್ಕೆ ಹೋಲಿಸಿದರೆ ಈವರ್ಷ ವಿವಿಧ ದೇಶಗಳಿಂದ ಶೇ.17.4ಕ್ಕೂ ಅಧಿಕ ಪ್ರವಾಸಿಗರು ರಾಸಲ್‌ಖೈಮಕ್ಕೆ ಭೇಟಿ ನೀಡಿದ್ದಾರೆ. ಈವರ್ಷ ಟೂರಿಸಂ ಕ್ಷೇತ್ರದ ಆದಾಯದಲ್ಲಿ ಶೇ.17.4ರಷ್ಟು ಹೆಚ್ಚಳ ದಾಖಲಾಗಿದೆ.ಹೊಟೇಲ್ ಕ್ಷೇತ್ರವೂ ಹೆಚ್ಚಿನ ವರಮಾನ ಸಂಪಾದಿಸಿದೆ. ಈದ್ ಸಮಯದಲ್ಲಿ ಹೊಟೇಲ್‌ಗಳಲ್ಲಿ ತಂಗಲು 30,220 ಮಂದಿ ಆಗಮಿಸಿದ್ದರು ಎಂದು ಹೈತಮ್ ಮತ್ತಾರ್ ತಿಳಿಸಿದ್ದಾರೆಎಂದು ವರದಿಯಾಗಿದೆ.
ಭಾರತೀಯ ವ್ಯಾಪಾರಿಗಳುಮತ್ತುಪ್ರವಾಸಿಗಳಿಗೆ ರಾಸಲ್‌ಖೈಮ ಹೆಚ್ಚು ಪ್ರಿಯ ತಾಣವಾಗಿದೆ. ಕಳೆದ ವರ್ಷಕ್ಕಿಂತ ದುಪ್ಪಟ್ಟು ಭಾರತೀಯರು ರಾಸಲ್‌ಖೈಮಕ್ಕೆ ಭೇಟಿ ನೀಡಿದ್ದಾರೆಂದು ರ್ಯಾಂಕ್ ಟಿ.ಡಿ.ಎ. ತಿಳಿಸಿದೆ. ಜೈವಿಕ ಸಂಪತ್ತು, ಪರಂಪರಾಗತ ಅರಬ್ ಕೇಂದ್ರಗಳು, ಸಾಹಸ, ಮನರಂಜನಾ ಕೇಂದ್ರಗಳು, ಸಮುದ್ರ ತೀರ, ಅತ್ಯಾಧುನಿಕ ಹೊಟೇಲ್‌ಗಳು, ಮಿತ ಖರ್ಚು ಪ್ರವಾಸಿಗರನ್ನು ಹೆಚ್ಚು ರಾಸಲ್‌ಖೈಮಕ್ಕೆ ಆಕರ್ಷಿಸುತ್ತಿದೆ ಎನ್ನಲಾಗಿದೆ.
ಹಳೆತನದ ಸೊಗಡನ್ನು ಈಗಲೂ ಪ್ರತಿನಿಧಿಸುತ್ತಿರುವ ಅಲ್‌ಜಝೀರ ಅಲ್ ಹಮ್ರ, ಸ್ವಾತಂತ್ರ್ಯ ಹೋರಾಟದ ವೇದಿಕೆಯಾದ ದಯಾ ಪೋರ್ಟ್, ಪಕ್ಷಿ ಸಾಕಣೆ ಕೇಂದ್ರ, ಮ್ಯೂಸಿಯಂ, ಕೃಷಿ ಪ್ರದೇಶಗಳು ಇಲ್ಲಿನ ಆಕರ್ಷಣೆಯಾಗಿದೆ ಎಂದು ವರದಿತಿಳಿಸಿದೆ.