×
Ad

ಧಾರವಾಡದ ಗ್ರಾಮದಿಂದ ಜಗದೆಲ್ಲೆಡೆ ಹಾರುತ್ತಿದೆ... ತ್ರಿವರ್ಣ ಧ್ವಜ!

Update: 2016-08-13 23:48 IST

ಸ್ವಾತಂತ್ರ್ಯೋತ್ಸವ ದಿನಾಚರಣೆ ಹತ್ತಿರ ಬಂದಾಗ ರಾಷ್ಟ್ರೀಯ ಧ್ವಜವನ್ನು ಭಾರತದ ಪಟ್ಟಣ ಮತ್ತು ಗ್ರಾಮಗಳ ಬೀದಿ ಬೀದಿಗಳಲ್ಲಿ ಮಾರಲಾಗುತ್ತಿದೆ. ಇವೆಲ್ಲ ಪ್ಲಾಸ್ಟಿಕ್ ಧ್ವಜಗಳು. ನಿಜವಾದ ಅಧಿಕೃತ ಬಟ್ಟೆಯ ಧ್ವಜಗಳು ಉತ್ತರ ಕರ್ನಾಟಕದ ಸಣ್ಣ ಪಟ್ಟಣವೊಂದರಲ್ಲಿ ತಯಾರಿಸಲಾಗುತ್ತದೆ.
ರಾಷ್ಟ್ರೀಯ ಧ್ವಜವನ್ನು ತಯಾರಿಸುವುದು ಮತ್ತು ಸರಬರಾಜು ಮಾಡುವ ಏಕೈಕ ಅಧಿಕೃತ ಶಾಖೆಯೆಂದರೆ ಧಾರವಾಡ ಜಿಲ್ಲೆಯ ಬೆಂಗೇರಿ ಗ್ರಾಮದಲ್ಲಿರುವ ಕರ್ನಾಟಕದ ಖಾದಿ ಮತ್ತು ಗ್ರಾಮೋದ್ಯೋಗ ಸಂಯುಕ್ತ ಸಂಘ ಅಥವಾ ಕೆಕೆಜಿಎಸ್‌ಎಸ್‌ಎಫ್. ಈ ವರ್ಷ ಧ್ವಜಗಳಿಗೆ ಆರ್ಡರ್‌ಗಳು ಜೂನ್ ಕೊನೆಯ ವಾರದಲ್ಲಿ ಬರಲಾರಂಭಿಸಿವೆ. ಈಗಾಗಲೇ ಫೆಡರೇಶನ್ ರೂ. 1.03 ಕೋಟಿ ಧ್ವಜಗಳನ್ನು ಮಾರಾಟ ಮಾಡಿದೆ. ನಾಳೆ ಈ ಸಂಖ್ಯೆ ಏರುವ ಸಾಧ್ಯತೆಯಿದೆ. ಕೆಕೆಜಿಎಸ್‌ಎಸ್‌ಎಫ್ ಬಗ್ಗೆ ಕೆಲವು ಕುತೂಹಲಕರ ವಿವರಗಳು ಇಲ್ಲಿವೆ:

*ಕೆಕೆಜಿಎಸ್‌ಎಸ್‌ಎಫ್ ಅನ್ನು 1957 ನವೆಂಬರಲ್ಲಿ ಖಾದಿ ಮತ್ತು ಗ್ರಾಮೀಣ ಉದ್ಯಮಗಳನ್ನು ಪ್ರೋತ್ಸಾಹಿಸುತ್ತಿದ್ದ ಗಾಂಧೀವಾದಿ ಸ್ಥಾಪಿಸಿದ್ದರು. ವೆಂಕಟೇಶ್ ಟಿ. ಮಾಗಡಿ ಮತ್ತು ಶ್ರೀರಂಗ ಕಾಮತ್ ಕ್ರಮವಾಗಿ ಫೆಡರೇಶನ್‌ನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು. ಸಂಸ್ಥೆಯು ಗ್ರಾಮೀಣ ನಿರುದ್ಯೋಗಿ ಯುವಕರಿಗೆ ಖಾದಿ ಮತ್ತು ಗ್ರಾಮೀಣ ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚು ಉದ್ಯೋಗಾವಕಾಶ ಕೊಡುವ ಉದ್ದೇಶ ಹೊಂದಿದೆ.

 * ಕೆಕೆಜಿಎಸ್‌ಎಸ್‌ಎಫ್‌ಗೆ ಖಾದಿ ಮತ್ತು ಗ್ರಾಮೀಣ ಉದ್ಯಮ ಆಯೋಗವು ಅಂಗೀಕಾರ ನೀಡಿದ ಮೇಲೆ ಧ್ವಜ ತಯಾರಿಕಾ ಘಟಕವನ್ನು 2004ರಲ್ಲಿ ಸ್ಥಾಪಿಸಲಾಯಿತು. 2006ರಲ್ಲಿ ಇದಕ್ಕೆ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ ಪ್ರಮಾಣೀಕರಣವೂ ಸಿಕ್ಕಿದೆ.

* 17 ಎಕರೆಗಳಷ್ಟು ಜಾಗದಲ್ಲಿ ವ್ಯಾಪಿಸಿರುವ ಇದರ ಮುಖ್ಯಕಚೇರಿಯಲ್ಲಿ ಹಲವು ಸೌಲಭ್ಯಗಳಿವೆ. ಸಿದ್ಧ ಉಡುಪು ಗಾರ್ಮೆಂಟ್ ವಿಭಾಗ, ಅಲ್ಯುಮಿನಿಯಂ ಪಾತ್ರೆಗಳ ವಿಭಾಗ, ಪ್ರಾದೇಶಿಕ ಡೈ ಹೌಸ್ ವಿಭಾಗ ಮತ್ತು ಪ್ರಾಕೃತಿಕ ಸಾಧನಾಲಯ ಮತ್ತು ಯೋಗ ಕೇಂದ್ರ. ಇದು ಟೆಕ್ಸ್‌ಟೈಲ್ ಕೆಮಿಸ್ಟ್ರಿಯ ತರಬೇತಿ ಸಂಸ್ಥೆಯನ್ನೂ ಚಲಾಯಿಸುತ್ತದೆ.

 * ಧ್ವಜಗಳನ್ನು ಬಿಐಎಸ್ ಗುಣಮಟ್ಟದಲ್ಲಿ ತಯಾರಿಸಲಾಗುತ್ತದೆ. ಕೆಕೆಜಿಎಸ್‌ಎಸ್‌ಎಫ್ ವೆಬ್ ತಾಣದ ಪ್ರಕಾರ ರಾಷ್ಟ್ರೀಯ ಧ್ವಜಗಳ ಉತ್ಪಾದನೆಯು ಬಿಐಎಸ್ ಕಠಿಣ ಮಾರ್ಗದರ್ಶನದಲ್ಲಿ ಮಾಡುವುದು ಸರಳ ಕೆಲಸವಲ್ಲ. ಏಕೆಂದರೆ ಧ್ವಜಗಳ ಬಣ್ಣ, ಗಾತ್ರ, ನೂಲಿನ ಸಂಖ್ಯೆ, ಹುರಿಯ ಬಲ, ಡೈಯಿಂಗ್‌ನಲ್ಲಿ ಬಳಸಿದ ಬಣ್ಣಗಳ ಬಿಗಿತ ಇವುಗಳಲ್ಲಿ ಏನೇ ದೋಷ ಕಂಡರೂ ಅದನ್ನು ಭಾರತೀಯ ಧ್ವಜ ಸಂಹಿತೆ 2002ರ ಅಡಿ ದೊಡ್ಡ ಅಪರಾಧವಾಗಿ ಪರಿಗಣಿಸಲಾಗುವುದು ಮತ್ತು ದಂಡ ಅಥವಾ ಜೈಲು ಶಿಕ್ಷೆಗೂ ಕಾರಣವಾಗಲಿದೆ.

* ಧ್ವಜ ಮಾಡುವ ಕೆಲಸ ಬಹಳ ಕಷ್ಟ. ಅದರಲ್ಲಿ ಆರು ಹಂತಗಳಿವೆ: ಹ್ಯಾಂಡ್ ಸ್ಪಿನ್ನಿಂಗ್, ಹ್ಯಾಂಡ್ ವೀವಿಂಗ್, ಬ್ಲೀಚಿಂಗ್ ಮತ್ತು ಡೈಯಿಂಗ್, ಚಕ್ರ ಪ್ರಿಂಟಿಂಗ್, ಸ್ಟಿಚಿಂಗ್ ಮತ್ತು ಟಾಗ್ಲಿಂಗ್. *ರಾಷ್ಟ್ರೀಯ ಧ್ವಜ ಆಯತಾಕಾರದಲ್ಲಿರಬಾರದು ಮತ್ತು 3:2 ಅನುಪಾತದಲ್ಲಿ ಫ್ಲಾಗ್ ಕೋಡ್ ಫಾರ್ ಇಂಡಿಯಾ ಅನುಸಾರ ಇರಬೇಕು. ಆದರೆ ಅವುಗಳನ್ನು ಒಂಬತ್ತು ವಿಭಿನ್ನ ಗಾತ್ರದಲ್ಲಿ ಮಾಡಲಾಗುವುದು. ಪ್ರತಿಯೊಂದೂ ವಿಭಿನ್ನ ಪ್ರದರ್ಶ ನಗಳಿಗಾಗಿ. ಉದಾಹರಣೆಗೆ 450ಗಿ300 ಮಿ.ಮೀ. ಗಾತ್ರದ ಧ್ವಜ ಏರ್ ಕ್ರಾಫ್ಟಲ್ಲಿ ವಿವಿಐಪಿ ವಿಮಾನಗಳಿಗೆ, 225ಗಿ150 ಮಿ.ಮೀ ಧ್ವಜವು ಮೋಟಾರ್ ಕಾರುಗಳಿಗೆ ಮತ್ತು 150ಗಿ100 ಮಿ.ಮೀ. ಗಾತ್ರದವು ಟೇಬಲ್ ಧ್ವಜಗಳು. ದೊಡ್ಡ ಧ್ವಜಗಳನ್ನು ದೊಡ್ಡ ಕಟ್ಟಡಗಳ ಮೇಲೆ ಎತ್ತರದಲ್ಲಿ ಆರೋಹಣ ಮಾಡಲಾಗುವುದು.

*ಧ್ವಜಗಳ ಈಗಿನ ಬೆಲೆ ಅಂತರ್ಜಾಲದಲ್ಲಿ ಲಭ್ಯವಿಲ್ಲವಾದರೂ 2013ರಲ್ಲಿ 6X4 ವಿಭಾಗವು ರೂ. 1,550, 3ಗಿ4 1/2 ವಿಧ ರೂ. 900 ಬೆಲೆ ಬಾಳುತ್ತಿತ್ತು. 2X3 ವಿಧವು ರೂ. 550 ಮತ್ತು ಕಾರಿನ ಧ್ವಜವು ರೂ. 150 ಮೌಲ್ಯದ್ದಾಗಿದೆ. 2014ರಲ್ಲಿ ಫೆಡರೇಶನ್ 74 ಲಕ್ಷ ರಾಷ್ಟ್ರೀಯ ಧ್ವಜಗಳನ್ನು ಮಾರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News