ದೇಶ ಹಿಂದುಳಿಯಲು ಒಂದು ಕುಟುಂಬವೇ ಕಾರಣ: ಅಮಿತ್ ಶಾ
ಲಕ್ನೊ, ಆ.14: "ಸ್ವಾತಂತ್ರ್ಯಾನಂತರ ದೇಶದಲ್ಲಿ ಅಭಿವೃದ್ಧಿಯಾಗಿಲ್ಲ. ಇದಕ್ಕೆ ದೇಶವನ್ನು ಅರುವತ್ತು ವರ್ಷಗಳ ಕಾಲ ಆಳಿದ ಒಂದು ಕುಟುಂಬವೇ ಕಾರಣ. ಆದರೆ ದೇಶದ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯವಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ಶಾ ಹೇಳಿದ್ದಾರೆ.ಸ್ವಾತಂತ್ರ್ಯದಿನಕ್ಕಿಂತ ಮೊದಲು ಸ್ವಾತಂತ್ರ್ಯ ಸಮರ ಸೇನಾನಿಗಳ ತ್ಯಾಗ ಸ್ಮರಣೆಗಾಗಿ ಏರ್ಪಡಿಸಲಾಗಿದ್ದ "ಯಾದ್ ಕರೋ ಕುರ್ಬಾನಿ" ಕಾರ್ಯಕ್ರಮದ ಅಂಗವಾಗಿ ನಡೆದ "ತಿರಂಗ ಯಾತ್ರೆ"ಯಲ್ಲಿ ಭಾಗವಹಿಸಿ ಮಾತಾಡುತ್ತ ಅವರು ಹೀಗೆ ಹೇಳಿದ್ದಾರೆ ಎಂದು ವರದಿಯಾಗಿದೆ. ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶದ ಚುನಾವಣೆಯನ್ನು ಉದ್ದೇಶಿಸಿ ಅಮಿತ್ ಶಾರಿಂದ ಈ ಮಾತುಗಳು ಹೊರಬಿದ್ದಿವೆ."ದೇಶ ಪ್ರಗತಿಯಾಗಬೇಕಿದ್ದರೆ ಉತ್ತರ ಪ್ರದೇಶದ ಅಭಿವೃದ್ಧಿ ಅನಿವಾರ್ಯವಾಗಿದೆ. ದೇಶ ಹಿಂದುಳಿಯಲು ಹಿಂದಿನ ಕಾಂಗ್ರೆಸ್ ಸರಕಾರಗಳು ಕಾರಣವಾಗಿದೆ" ಎಂದ ಅಮಿತ್ ಶಾ, "ಉತ್ತರ ಪ್ರದೇಶದಲ್ಲಿ ಎಸ್ಪಿ ಅಥವಾ ಬಿಎಸ್ಪಿ ಅಧಿಕಾರಕ್ಕೆ ಬಂದರೆ ಸ್ವಸಮುದಾಯಗಳ ಅಭಿವೃದ್ಧಿಗಾಗಿ ಮಾತ್ರ ಕೆಲಸ ಮಾಡುತ್ತವೆ. ಆದರೆ ರಾಜ್ಯವನ್ನು ಪ್ರಗತಿ ಪಥದತ್ತ ಒಯ್ಯಲು ಬಿಜೆಪಿಯಿಂದ ಮಾತ್ರ ಸಾಧ್ಯವಿದೆ" ಎಂದು ಹೇಳಿದ್ದಾರೆಂದು ವರದಿಯಾಗಿದೆ.