ಒಲಿಂಪಿಕ್ಸ್: ಸಾವಿರ ಚಿನ್ನ ಜಯಿಸಿದ ಅಮೆರಿಕ!
Update: 2016-08-14 23:38 IST
ರಿಯೋ ಡಿಜನೈರೊ, ಆ.14: ಅಮೆರಿಕ ಅಥ್ಲೆಟಿಕ್ ತಂಡ ಒಲಿಂಪಿಕ್ಸ್‌ನಲ್ಲಿ ಒಟ್ಟು 1000 ಚಿನ್ನದ ಪದಕ ಜಯಿಸಿದ ಅಪೂರ್ವ ಸಾಧನೆ ಮಾಡಿದೆ.
ಅಮೆರಿಕದ ಒಲಿಂಪಿಕ್ ಸಮಿತಿಯ(ಯುಎಸ್‌ಒಸಿ) ಪ್ರಕಾರ, ಸಿಮೊನ್ ಮಾನುಯೆಲ್ ನೇತೃತ್ವದ ಅಮೆರಿಕದ ಮಹಿಳೆಯರು 4-100 ಮೀ.ಮಿಡ್ಲೆ ಸ್ಪರ್ಧೆಯಲ್ಲಿ ಜಯಿಸಿರುವ ಚಿನ್ನ ಅಮೆರಿಕ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಜಯಿಸಿರುವ 1000ನೆ ಚಿನ್ನದ ಪದಕವಾಗಿದೆ. 1896ರಲ್ಲಿ ತ್ರಿಪಲ್ ಜಂಪ್ ಪಟು ಜೇಮ್ಸ್ ಕಾನೊಲಿ ಮೊದಲ ಬಾರಿ ಚಿನ್ನದ ಪದಕ ಜಯಿಸಿದ್ದರು.
1000 ಚಿನ್ನದ ಪದಕಗಳ ಪೈಕಿ ಅರ್ಧದಷ್ಟು ಪದಕಗಳು ಟ್ರಾಕ್ ಆ್ಯಂಡ್ ಫೀಲ್ಡ್(323) ಹಾಗೂ ಸ್ವಿಮ್ಮಿಂಗ್(246)ವಿಭಾಗಗಳಲ್ಲಿ ಜಯಿಸಲ್ಪಟ್ಟಿದ್ದು, ಇದು ಅಮೆರಿಕದ ಅದ್ಭುತ ಸಾಧನೆ ಎಂದು ಯುಎಸ್‌ಒಸಿ ತಿಳಿಸಿದೆ.
ಶನಿವಾರ ರಾತ್ರಿ ನಡೆದ 4-100 ಮೀ. ರಿಲೇಯಲ್ಲಿ ಅಮೆರಿಕದ ಚಿನ್ನ ಜಯಿಸಿದ್ದರೆ, ಆಸ್ಟೇಲಿಯ ಹಾಗೂ ಡೆನ್ಮಾರ್ಕ್ ತಂಡಗಳು ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿವೆ.