×
Ad

ಲಲಿತಾಗೆ ಇಂದು ಫೈನಲ್ ಪಂದ್ಯ

Update: 2016-08-14 23:42 IST

ರಿಯೋ ಡಿ ಜನೈರೊ, ಆ.14: ಭಾರತದ ಅಥ್ಲೀಟ್ ಲಲಿತಾ ಬಾಬರ್ ಸೋಮವಾರ ನಡೆಯಲಿರುವ ರಿಯೋ ಒಲಿಂಪಿಕ್ಸ್‌ನ 3,000 ಮೀ. ಸ್ಟೀಪಲ್‌ಚೇಸ್ ಫೈನಲ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.

 ಪದಕ ಜಯಿಸುವುದು ತುಂಬಾ ಕಠಿಣ, ಆದರೆ 27ರ ಹರೆಯದ ಮಹಾರಾಷ್ಟ್ರದ ಅಥ್ಲೀಟ್‌ಗೆ ಇದು ಅಸಾಧ್ಯವಾದುದೇನಲ್ಲ. ಲಲಿತಾ 1984ರ ಬಳಿಕ ಟ್ರಾಕ್‌ನಲ್ಲಿ ಫೈನಲ್‌ಗೆ ತಲುಪಿದ ಭಾರತದ ಎರಡನೆ ಮಹಿಳಾ ಅಥ್ಲೀಟ್ ಎನಿಸಿಕೊಂಡಿದ್ದಾರೆ.

1984ರಲ್ಲಿ ಪಿ.ಟಿ. ಉಷಾ 400 ಮೀ. ಹರ್ಡಲ್ಸ್‌ನಲ್ಲಿ ಫೈನಲ್‌ಗೆ ತಲುಪಿದ್ದರು. ಆದರೆ, ಕೆಲವೇ ಸೆಕೆಂಡ್ ಅಂತರದಲ್ಲಿ ಕಂಚು ವಂಚಿತರಾಗಿದ್ದರು. ಆದರೆ, ಲಲಿತಾ ಅಂತಹ ತಪ್ಪು ಮಾಡದಿರಲು ನಿರ್ಧರಿಸಿದ್ದಾರೆ.

ಲಲಿತಾ ಫೈನಲ್‌ನಲ್ಲಿ ಕೀನ್ಯ ಸಂಜಾತೆ ಬಹರೈನ್‌ನ ರುಥ್ ಜೆಬೆಟ್, ಹಾಲಿ ಚಾಂಪಿಯನ್ ಟುನಿಶಿಯಾದ ಹಬಿಬಿ ಘರಿಬಿ, ಕೀನ್ಯದ ಹಿವಿನ್ ಕಿಯೆಂಗ್ ವಿರುದ್ಧ ಕಠಿಣ ಸವಾಲು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News