ಉಗ್ರರ ದಾಳಿ: ಐವರು ಸಿಆರ್‌ಎಫ್ ಯೋಧರಿಗೆ ಗಾಯ
Update: 2016-08-15 12:23 IST
ಶ್ರೀನಗರ,ಆ. 15:ಕಣಿವೆ ರಾಜ್ಯದಲ್ಲಿ ಉಗ್ರರ ಅಟ್ಟಹಾಸ ಮುಂದುವರಿದಿದ್ದು, ಉಗ್ರರ ಗುಂಡಿನ ದಾಳಿಗೆ ಐವರು ಸಿಆರ್'ಪಿಎಫ್ ಯೋಧರು ಗಾಯಗೊಂಡಿರುವ ಘಟನೆ ಇಲ್ಲಿಯ ನೌಹಟ್ಟಾ ಪ್ರದೇಶದಲ್ಲಿ ನಡೆದಿದೆ. ಜಾಮಾ ಮಸೀದಿ ಸಮೀಪ ಯೋಧರು ಸೋಮವಾರ ಆಗಮಿಸುತ್ತಿದ್ದಂತೆಯೇ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ತಿಳಿದು ತಿಳಿದು ಬಂದಿದೆ.
ಸೇನಾ ಪಡೆಗಳು ಸ್ಥಳಕ್ಕಾಗಮಿಸಿದ್ದು, ಉಗ್ರರನ್ನು ಪತ್ತೆಹಚ್ಚಲು ಕಾರ್ಯಾಚರಣೆ ಆರಂಭಿಸಿದೆ.