ಒಗ್ಗಟ್ಟಿನಲ್ಲಿ ಪ್ರಜಾಪ್ರಭುತ್ವದ ಉಳಿವು
ಭಾರತದೇಶ ವೈವಿಧ್ಯತೆಗೆ ಹೆಸರುವಾಸಿಯಾಗಿದೆ..ಒಂದು ಕಾಲದಲ್ಲಿ ಈ ದೇಶವು ಬ್ರಿಟಿಷರ ಆಕ್ರಮಣಕ್ಕೆ ಒಳಗಾಗಿತ್ತು ಎಂಬುದು ವಾಸ್ತವ. ದನದ ಕೊಬ್ಬು,ಹಂದಿಯ ಕೊಬ್ಬನ್ನು ನೆಪವಾಗಿಟ್ಟುಕೊಂಡು ನಮ್ಮ ಒಗ್ಗಟ್ಟನ್ನು ಮುರಿಯುವಲ್ಲಿ ಬ್ರಿಟಿಷರು ಯಶಸ್ವಿಯಾಗಿದ್ದರು. ವಸ್ತುಸ್ಥಿತಿಯ ಅರಿವಾದಾಗ ಭಾರತೀಯರ ಸೂಕ್ಷ್ಮ ಪ್ರಜ್ಞೆ,ಬುದ್ಧಿವಂತಿಕೆ ಈ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟಿತು. ಇಂದು ಇತಿಹಾಸ ಮರುಕಳಿಸಿದೆ. ಜಾತಿ ಧರ್ಮದ ಹೆಸರಿನಲ್ಲಿ ಗಲಭೆಗಳನ್ನು ಸೃಷ್ಟಿಸಲಾಗುತ್ತಿದೆ ಮಾತ್ರವಲ್ಲ ಈ ಕಾಲದಲ್ಲೂ ಆಂತರಿಕ ಕಲಹಕ್ಕೆ ದನ ಒಂದು ನೆಪವಾಗಿದೆ. ದೇಶದಲ್ಲಿ ಆಂತರಿಕ ಕಲಹಗಳಾಗುವುದೆಂದರೆ ದೇಶವು ಸ್ವಾರ್ಥಹಿತಾಸಕ್ತಿಗಳ ಆಕ್ರಮಣಕ್ಕೆ ಒಳಗಾಗಲಿದೆ ಎಂಬುದರ ಸ್ಪಷ್ಟ ಸಂಕೇತವಾಗಿದೆ.
ಇನ್ನಾದರೂ ಈ ದೇಶದ ಬುದ್ಧಿಜೀವಿಗಳು,ಧಾರ್ಮಿಕ ಪಂಡಿತರು,ಚಿಂತಕರು, ಹೋರಾಟಗಾರರು ಎಚ್ಚೆತ್ತುಕೊಳ್ಳುವರೇ?ಧರ್ಮಭೇದ ಮರೆತು ಒಗ್ಗಟ್ಟಾಗುವರೇ? ಸ್ವಾರ್ಥಹಿತಾಸಕ್ತಿಗಳನ್ನು ಗುರುತಿಸುವರೇ? ಇತ್ತೀಚೆಗೆ ಸೇನೆಯ ಸರ್ವಾಧಿಕಾರಿ ಆಕ್ರಮಣಕ್ಕೆ ಟರ್ಕಿಯ ಜನತೆ ನೀಡಿದ ಉತ್ತರ ಭಾರತದಂತಹ ಪ್ರಜಾಪ್ರಭುತ್ವಕ್ಕೆ ಅತ್ತ್ಯು ತ್ತಮ ಮಾದರಿಯಾಗಿದೆ. ಈ ವಿಧಾನವನ್ನು ನಾವು ಅನುಸರಿಸಿದರೆ ಮಾತ್ರ ನಮ್ಮ ಸ್ಔಆರತಂತ್ರ್ಯೊತ್ಸವ ಅರ್ಥಪೂರ್ಣವಾಗಲು ಸಾಧ್ಯ. ಪ್ರಜಾಪ್ರಭುತ್ವ ಉಳಿಯಲು ಸಾಧ್ಯ.