ಉವೈಸಿ ಒಬ್ಬ ಸ್ವಪ್ರಶಂಸಕ! : ಉ.ಪ್ರ ಕಾಂಗ್ರೆಸ್ ಅಧ್ಯಕ್ಷ ರಾಜ್‌ಬಬ್ಬರ್
ಕಾನ್‌ಪುರ, ಆ.16: ಅಸದುದ್ದೀನ್ ಉವೈಸಿಯವರನ್ನು ಉತ್ತರಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರಾಜ್‌ಬಬ್ಬರ್ ಕಟುವಾಗಿ ಟೀಕಿಸಿದ್ದಾರೆಂದು ವರದಿಯಾಗಿದೆ. ಉವೈಸಿ ಬಗ್ಗೆ ಸುದ್ದಿಗಾರರು ಕೇಳಿದಪ್ರಶ್ನೆಯೊಂದಕ್ಕೆ ರಾಜ್‌ಬಬ್ಬರ್ "ನೀವು ವಿದ್ಯಾವಂತರ ಕುರಿತು ಮಾತಾಡಿರಿ. ಯಾವುದೇ ಸ್ವಪ್ರಶಂಸಕನ ಬಗ್ಗೆ ಪ್ರಶ್ನೆಕೇಳಿ ಮನಸ್ಸು ಕೆಡಿಸಬೇಡಿ" ಎಂದು ಪ್ರತಿಕ್ರಿಯಿಸಿದರೆಂದು ವರದಿ ತಿಳಿಸಿದೆ. ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ನಿನ್ನೆ ಕಾನ್ಪುರದಲ್ಲಿ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಅವರು, ಉವೈಸಿ ಮಾತ್ರವಲ್ಲ ಅಖಿಲೇಶ್ ಯಾದವ್ ಸರಕಾರವನ್ನೂ ತರಾಟೆಗೆತ್ತಿಕೊಂಡಿದ್ದಾರೆಂದು ತಿಳಿದು ಬಂದಿದೆ.
ಸ್ವಾತಂತ್ರ್ಯೋತ್ಸವ ಸಂಬಂಧ ಆಯೋಜಿಸಲಾದ ಸಭೆಯಲ್ಲಿ ಸಭಿಕರನ್ನುದ್ದೇಶಿಸಿ ಮಾತಾಡಿದ ರಾಜ್‌ಬಬ್ಬರ್" ಎಲ್ಲ ಧರ್ಮದ ವರ್ಗದವರು ಗೋವನ್ನು ಪವಿತ್ರ ಎಂದು ನಂಬಿದ್ದಾರೆ.ನಾವು ಗೋವಿಗೆ ತಾಯಿಯ ಸ್ಥಾನವನ್ನು ನೀಡುತ್ತೇವೆ" ಎಂದಿದ್ದಾರೆ.ಈ ಸಂದರ್ಭದಲ್ಲಿ ಬಾಬರ್ ನಾಮವನ್ನು ಅವರು ಉಲ್ಲೇಖಿಸಿದ್ದು, ಇಲ್ಲಿನ ಜನರು ಗೋವನ್ನು ಪೂಜಿಸುತ್ತಾರೆ.ಅದಕ್ಕೆ ತಾಯಿಯ ಸ್ಥಾನ ನೀಡುತ್ತಾರೆ. ಆದ್ದರಿಂದ ಇಸ್ಲಾಮ್ ಧರ್ಮದ ವಿಶ್ವಾಸಿಗಳು ಎಂದೂ ಇಲ್ಲಿನ ವಿಶ್ವಾಸಿಗಳ ಮನಸ್ಸಿಗೆ ನೋವುಂಟು ಮಾಡಬಾರದು ಎಂದು ವಿನಂತಿಸಿದ್ದಾರೆ.
ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ರಾಜ್ ಬಬ್ಬರ್, "ಈ ದೇಶದಲ್ಲಿ ವಾಸಿಸುವ ವ್ಯಕ್ತಿ ತನ್ನ ತಾಯಿಯನ್ನು ಪೂಜಿಸುತ್ತಾನೆ, ಗೊವನ್ನು ಪೂಜಿಸುತ್ತಾನೆಮತ್ತು ಗೌರವಿಸುತ್ತಾನೆ. ಅದು ಧರ್ಮ, ಸಮುದಾಯಗಳಿಗೆ ಸಂಬಂಧಿಸಿದ ವಿಷಯವಲ್ಲ ಎಂದು ಹೇಳಿದ್ದಾರೆ. ’ಗುಲಾಮ್ ನಬಿ ಆಝಾದ್, ಮತ್ತು ಆಝಂಖಾನ್‌ರ ಕುರಿತು ಅಸದುದ್ದೀನ್ ಉವೈಸಿ ನೀಡಿದ್ದ "ಲೀಡರ್ ಅಲ್ಲ ಡೀಲರ್" ಎಂಬ ಹೇಳಿಕೆಗೂ ರಾಜ್‌ಬಬ್ಬರ್ ಖಾರವಾಗಿ ಪ್ರತಿಕ್ರಿಯಿಸದ್ದಾರೆಂದು ವರದಿ ತಿಳಿಸಿದೆ.