×
Ad

ಎನ್ನಾರೈ ಕೋಟಾಕ್ಕೆ ಕತ್ತರಿ

Update: 2016-08-16 22:44 IST

ಅಹ್ಮದಾಬಾದ್,ಆ.16: ಗುಜರಾತಿನ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶಕ್ಕೆ ಎಲ್ಲ ಅನಿವಾಸಿ ಭಾರತೀಯ(ಎನ್ನಾರೈ) ಕೋಟಾವನ್ನು ತೆಗೆದು ಹಾಕಿ ಸರಕಾರವು ಹೊರಡಿಸಿದ್ದ ಅಧ್ಯಾದೇಶವನ್ನು ರಾಜ್ಯ ಉಚ್ಚ ನ್ಯಾಯಾಲಯವು ಮಂಗಳವಾರ ಭಾಗಶಃ ರದ್ದುಗೊಳಿಸಿದೆ.

ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಬಯಸುವ ‘ನೈಜ’ ಎನ್ನಾರೈಗಳಿಗೆ ಕೋಟಾವನ್ನು ರದ್ದುಗೊಳಿಸುವ ಸರಕಾರದ ನಿರ್ಧಾರವು ಸಂವಿಧಾನ ವಿರೋಧಿ ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ಆರ್.ಸುಭಾಷ್ ರೆಡ್ಡಿ ಮತ್ತು ನ್ಯಾ.ವಿ.ಎಂ. ಪಂಚೋಲಿ ಅವರನ್ನೊಳಗೊಂಡ ವಿಭಾಗೀಯ ಪೀಠವು, ‘ಅವಲಂಬಿತ’ ಎನ್ನಾರೈಗಳ ಕೋಟಾವನ್ನು ರದ್ದುಗೊಳಿಸುವ ಸರಕಾರದ ನಿರ್ಧಾರವನ್ನು ಎತ್ತಿ ಹಿಡಿಯಿತು.
ಎನ್ನಾರೈ ಕೋಟಾವನ್ನು ಸಂಪೂರ್ಣವಾಗಿ ತೆಗೆದು ಹಾಕಲು ಯಾವುದೇ ಕಾರಣಗಳಿಲ್ಲ ಎಂದು ಹೇಳಿದ ನ್ಯಾಯಾಲಯವು, ಹಾಗೆ ಮಾಡುವುದು ಪಿ.ಎ. ಇನಾಮದಾರ್ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಉಲ್ಲಂಘನೆ ಯಾಗುತ್ತದೆ ಮತ್ತು ಅಸಾಂವಿಧಾನಿಕವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿತು.

ಇಂಡಿಯಾ ಹೇಳಿದೆ.

ವಿಜ್ಞಾನ ಪದವಿಧರನಾಗಿದ್ದು, ವಿಮಾನ ಯಾನ ಭದ್ರತೆಯ ಕುರಿತು ಹಲವು ಕೋರ್ಸ್‌ಗಳನ್ನು ಮಾಡಿರುವ ಚಂದರ್, ಹಲವು ಸಲ ಪ್ರಯಾಣಿಕರು ವಿಮಾನದಲ್ಲೇ ಮರೆತು ಹೋದ ಬೆಲೆ ಬಾಳುವ ವಸ್ತಗಳು ಹಾಗೂ ನಗದನ್ನು ಮರಳಿಸಿದ್ದಾರೆ. ಈ ಎಲ್ಲ ಸಂದರ್ಭಗಳಲ್ಲಿ ಪ್ರಯಾ ಣಿಕರಿಗೆ ಅದನ್ನು ಹಿಂದಿರುಗಿಸುವವರೆಗೆ ಅವರಿಗೆ ಅದನ್ನು ಕಳೆದು ಕೊಂಡಿರುವುದೇ ಗಮನಕ್ಕೆ ಬಂದಿರಲಿಲ್ಲವೆಂದು ಅದು ತಿಳಿಸಿದೆ.
ಈ ವರ್ಷ ಜೂನ್‌ನಲ್ಲಿ ವಿಮಾನ ತಪಾಸಣೆಯ ವೇಳೆ ರೂ. 5 ಲಕ್ಷ ವೌಲ್ಯದ ವಿದೇಶಿ ಹಣದ ಚೀಲ ಹಾಂಕಾಂಗ್‌ನಿಂದ ಬಂದ ವಿಮಾನದಲ್ಲಿ ಚಂದರ್‌ಗೆ ದೊರಕಿತ್ತು. ಅದನ್ನವರು ಪ್ರಯಾಣಿಕನಿಗೆ ಮರಳಿಸಿದ್ದರು. ಅದೇ ರೀತಿ 2003ರ ಆಗಸ್ಟ್‌ನಲ್ಲಿ ಸೌದಿ ಅರೇಬಿಯದಿಂದ ಬಂದಿದ್ದ ಭೋಪಾಲ್‌ನ ಪ್ರಯಾಣಿಕನೊಬ್ಬನ ಚಿನ್ನಾಭರಣಗಳನ್ನು ಹಿಂದಿರುಗಿಸಿದ್ದರು.
ಚಂದರ್, ಏರ್ ಇಂಡಿಯಾದಲ್ಲಿ 29 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News