×
Ad

ಕೊಳೆ ಹರಡುವವರಿಗೆ ದಂಡ ವಿಧಿಸಲು ಚಿಂತನೆ: ನಾಯ್ಡು

Update: 2016-08-16 22:50 IST

ಹೊಸದಿಲ್ಲಿ, ಆ.16: ಸ್ವಚ್ಛ ಭಾರತ ಅಭಿಯಾನವನ್ನು ಯಶಸ್ವಿಗೊಳಿಸುವ ಭಾಗವಾಗಿ ನಗರ ಪ್ರದೇಶಗಳಲ್ಲಿ ಕೊಳೆ ಹರಡುವವರಿಗೆ ದಂಡ ವಿಧಿಸುವ ಕುರಿತು ಸರಕಾರ ಪರಿಶೀಲಿಸುತ್ತಿದೆಯೆಂದು ಕೇಂದ್ರ ಸಚಿವ ಎಂ.ವೆಂಕಯ್ಯ ನಾಯ್ಡು ಇಂದು ತಿಳಿಸಿದ್ದಾರೆ.

ಸ್ವಚ್ಛತಾ ಅಭಿಯಾನದ ಯಶಸ್ಸಿಗಾಗಿ ಸರಕಾರವು ಮೂರಂಶಗಳ ಕಾರ್ಯವ್ಯೆಹವೊಂದನ್ನು ಪರಿಶೀಲಿಸುತ್ತಿದೆ. ಮೊದಲನೆಯದು ಮೂಲ ಸೌಕರ್ಯ ಸೃಷ್ಟಿ, ಎರಡನೆಯದು ಮಾನಸಿಕ ಬದಲಾವಣೆ ಹಾಗೂ ಸಂಪೂರ್ಣ ಮೂಲ ಸೌಕರ್ಯ ಸೃಷ್ಟಿಯಾದ ಬಳಿಕ ನಗರ ಪ್ರದೇಶಗಳಲ್ಲಿ ದಂಡ ವಿಧಿಸುವುದರ ಬಗ್ಗೆ ಪರಿಶೀಲನೆ ಮೂರನೆಯದೆಂದು ಅವರು ವಿವರಿಸಿದ್ದಾರೆ.
ಸ್ವಚ್ಛ ಭಾರತ್ ಅಭಿಯಾನದ (ನಗರ) ಜನಾಂದೋಲನದಲ್ಲಿ ನಾಗರಿಕರ ಭಾಗವಹಿಸುವಿಕೆ ಹೆಚ್ಚಿಸುವ ಕುರಿತಾದ ಕಾರ್ಯಾಗಾರವೊಂದರ ಪಾರ್ಶ್ವದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ನಾಯ್ಡು, ಸ್ವಚ್ಛ ಭಾರತ ಅಭಿಯಾನವೀಗ ಜನಾಂದೋಲನವಾಗುತ್ತಿದೆ. ಆದರೆ, ಸಂಪೂರ್ಣವಾಗಿಯಲ್ಲ. ದೇಶದಲ್ಲಿ ಮಾನಸಿಕತೆಯ ಬದಲಾವಣೆ ವೇಗವಾಗಿ ಆಗುತ್ತಿದೆ. ಜನರು ಪ್ರಧಾನಿಯ ಯೋಜನೆಯನ್ನು ಬೆಂಬಲಿಸುತ್ತಿದ್ದಾರೆ ಎಂದರು.
ಸರಕಾರವು ಜನರನ್ನು ತಲುಪಲು ಹೊಸ ಮಾರ್ಗಗಳು ಹಾಗೂ ವಿಧಾನಗಳನ್ನು ಹುಡುಕಲು ಕೆಲಸ ಮಾಡುತ್ತಿದೆ. ಕಾರ್ಯಾಗಾರದಲ್ಲಿ ಟಾಟಾ ಸಮಾಜ ವಿಜ್ಞಾನ ಸಂಸ್ಥೆಯ ಪ್ರತಿನಿಧಿಗಳು ಹಾಗೂ ಹಲವು ವಿದೇಶಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರೆಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News