ಆಧಾರ್ ಕಾರ್ಡ್ ಸಂಖ್ಯೆ ಕಡ್ಡಾಯ

Update: 2016-08-16 18:40 GMT

ಮಂಗಳೂರು, ಆ.16: ಕೇಂದ್ರಿಯ ಸೈನಿಕ ಮಂಡಳಿಯ ನಿರ್ದೇಶನದ ಪ್ರಕಾರ ಎಲ್ಲ ಮಾಜಿ ಸೈನಿಕರು, ಮಾಜಿ ಸೈನಿಕರ ವಿಧವೆಯರು ಹಾಗೂ ಅವರ ಅವಲಂಬಿತರು ತಮ್ಮ ಆಧಾರ ಕಾರ್ಡ್ ಸಂಖ್ಯೆಯನ್ನು ಮಂಡಳಿಯಿಂದ ಪ್ರಾಪ್ತವಾಗುವ ಎಲ್ಲ ಯೋಜನೆಗಳಿಗೆ ಕಡ್ಡಾಯಗೊಳಿಸಲಾಗಿದೆ. ಹಾಗಾಗಿ ರಾಜ್ಯ/ಕೇಂದ್ರದ ವಿವಿಧ ಯೋಜನೆಯಡಿಯಲ್ಲಿ ವಿವರ ಸಲ್ಲಿಸುವಾಗ ಆಧಾರ ಕಾರ್ಡ್ ಸಂಖ್ಯೆಯ ವಿವರವನ್ನು ಕಡ್ಡಾಯವಾಗಿ ನ.30ರೊಳಗೆ ಕಳುಹಿಸಬೇಕು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರ ಕಾರ್ಯಾಲಯದ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News