×
Ad

ತನ್ನ ಉತ್ತರಾಧಿಕಾರಿ ಮಹಿಳೆಯಾಗಿರಲಿ: ಬಾನ್‌ಕಿ ಮೂನ್

Update: 2016-08-17 13:11 IST

ನ್ಯೂಯಾರ್ಕ್, ಆ.17: ತನ್ನ ಉತ್ತರಾಧಿಕಾರಿ ಮಹಿಳೆಯಾಗಿರಲಿ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್‌ಕಿಮೂನ್ ಹೇಳಿದ್ದಾರೆ. ಕಳೆದ ಎಪ್ಪತ್ತು ವರ್ಷದ ಇತಿಹಾಸದಲ್ಲಿ ಈ ಸ್ಥಾನಕ್ಕೆ ಯಾವುದೇ ಮಹಿಳೆ ಆಯ್ಕೆಯಾಗಿಲ್ಲ. ಈಸಲವಾದರೂ ಅಂತಹದೊಂದು ಬದಲಾವಣೆ ಆಗಲಿ ಎಂದು ಅವರು ಹಾರೈಸಿದ್ದಾರೆಂದು ವರದಿಯಾಗಿದೆ. ಇದು ತನ್ನ ಅಭಿಪ್ರಾಯ ಮಾತ್ರವಲ್ಲ ಭದ್ರತಾ ಸಮಿತಿಯ ಹದಿನೈದು ಸದಸ್ಯರ ಅಭಿಪ್ರಾಯ ಕೂಡಾ ಆಗಿದೆ ಎಂದು ಅವರು ಹೇಳಿದ್ದಾರೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 193 ಸದಸ್ಯರಾಷ್ಟ್ರಗಳಿದ್ದು ಮಹಿಳೆಯನ್ನು ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸೂಚಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಆದರೆ ಯಾರನ್ನು ಆಸ್ಥಾನಕ್ಕೆ ಸೂಚಿಸುವುದು ಎಂಬುದು ಈಗ ಸ್ಪಷ್ಟವಾಗಿಲ್ಲ. ಮೂನ್‌ರ ಕೆಲಸಾವಧಿ ಮುಗಿಯಲಿರುವಂತೆ ಅವರ ಸ್ಥಾನಕ್ಕೆ ಒಟ್ಟು ಹನ್ನೊಂದು ಮಂದಿಯ ಹೆಸರುಗಳು ಪ್ರಸ್ತಾವಿಸಲಾಗಿದ್ದು. ಇವರಲ್ಲಿ ಐವರು ಮಹಿಳೆಯರೂ ಸೇರಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News