×
Ad

ಭಾರತಕ್ಕೇಕೆ ಒಲಿಂಪಿಕ್ಸ್ ಪದಕ ಸಿಗುವುದಿಲ್ಲ ?

Update: 2016-08-17 13:14 IST

ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಪಡೆದ ಏಕೈಕ ಭಾರತೀಯ ಅಭಿನವ್ ಬಿಂದ್ರಾ ಅವರು ಭಾರತದ ಪದಕಗಳ ಬರಕ್ಕೆ ಸೂಕ್ತ ಕಾರಣಗಳಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಒಲಿಂಪಿಕ್ಸ್ ಆರಂಭವಾಗಿ 10 ದಿನಗಳೇ ಕಳೆದರೂ ಈ ಬಾರಿ ಒಂದು ಪದಕವನ್ನೂ ಇನ್ನೂ ಭಾರತ ಪಡೆದಿಲ್ಲ. ಈವರೆಗಿನ ಅತೀ ದೊಡ್ಡ ಅಂದರೆ 118 ಅಥ್ಲೀಟ್‌ಗಳ ತಂಡವನ್ನು ಭಾರತ ಒಲಿಂಪಿಕ್ಸಿಗೆ ಕಳುಹಿಸಿದೆ. ಆದರೆ ಫಲಿತಾಂಶ ಅಷ್ಟೇ ಬರಪೂರವಾಗಿಲ್ಲ.

ಶೂಟರ್ ಗಳು, ಹಾಕಿ ಟೀಮ್ ಅಥವಾ ವೈಯಕ್ತಿಕ ಅಥ್ಲೀಟ್ ಗಳು ಪದಕ ಪಡೆಯಲು ಸಾಧ್ಯವಾಗಿಲ್ಲ. ಪ್ರತಿಯೊಬ್ಬರ ಮನದಲ್ಲಿರುವ ಪ್ರಶ್ನೆಯೂ ಗರಿಷ್ಠ ಜನಸಂಖ್ಯೆಯಿರುವ ದೇಶ ಒಂದೂ ಪದಕವನ್ನು ಏಕೆ ಪಡೆಯುತ್ತಿಲ್ಲ ಎನ್ನುವುದೇ ಆಗಿದೆ. " ಯುಕೆ ( ಇಂಗ್ಲೆಂಡ್) ಗೆ ಪ್ರತಿ ಒಲಿಂಪಿಕ್ಸ್ ಪದಕಕ್ಕೆ 5.5 ಮಿಲಿಯನ್ ಪೌಂಡ್ ಖರ್ಚಾಗುತ್ತದೆ. ಅಷ್ಟು ಬಂಡವಾಳ ಹೂಡಬೇಕಾಗಿದೆ. ನಮ್ಮ ದೇಶದಲ್ಲಿ ನಾವು ಆ ವ್ಯವಸ್ಥೆ ಮಾಡಿಕೊಳ್ಳುವವರೆಗೆ ಹೆಚ್ಚಿನದೇನನ್ನು ನಿರೀಕ್ಷಿಸುವುದು ಬೇಡ."   ಎಂದು ಅಭಿನವ್ ಬಿಂದ್ರಾ ಹೇಳಿದ್ದಾರೆ. ಪತ್ರಿಕೆಯೊಂದು ಬ್ರಿಟನ್ ಹೇಗೆ ಅಥ್ಲೀಟ್‌ಗಳ ಮೇಲೆ ಅತ್ಯಧಿಕ ಮಟ್ಟದಲ್ಲಿ ಹಣ ಹೂಡುತ್ತಿದೆ ಎನ್ನುವ ಬರಹ ಪ್ರಕಟಿಸಿದ ಹಿನ್ನೆಲೆಯಲ್ಲಿ ಬಿಂದ್ರಾ ತಮ್ಮ ಅಭಿಪ್ರಾಯವನ್ನು ಟ್ವೀಟ್ ಮೂಲಕ ಹೊರಗಿಟ್ಟಿದ್ದಾರೆ.

ಬ್ಟಿಟನ್‌ನಲ್ಲಿ ಉತ್ತಮ ವ್ಯವಸ್ಥೆಯಿದೆ. ಸರ್ಕಾರವೂ ವಿಭಿನ್ನ ಕ್ರೀಡಾ ಮಂಡಳಿಗೆ ವ್ಯವಸ್ಥಿತವಾಗಿ ಹಣ ಹೂಡುತ್ತದೆ. ಈಗ ರಿಯೋ ಒಲಿಂಪಿಕ್ಸಲ್ಲಿ ಭಾರತದ ಪದಕದ ಆಶಯ ಕ್ಷೀಣವಾಗಿದೆ. ಭಾರತ ಸರ್ಕಾರವೂ ಬ್ರಿಟನ್ ರೀತಿಯ ಹೂಡಿಕೆ ಮಾಡುವ ತುರ್ತು ಇದೆ.

ಕೃಪೆ: http://zeenews.india.com/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News