ಭಾರತದ ಪ್ರತಿಯೊಬ್ಬ ಒಲಿಂಪಿಯನ್ ಗೆ ಬಹುಮಾನ ಘೋಷಿಸಿದ ಬಾಲಿವುಡ್ ನ ಭಾಯ್
Update: 2016-08-17 22:05 IST
ರಿಯೋ ಡಿ ಜನೈರೊ, ಆ.17: ರಿಯೋ ಒಲಿಂಪಿಕ್ಸ್‌ಗೆ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಭಾರತದ ಗುಡ್‌ವಿಲ್ ರಾಯಭಾರಿಯಾಗಿ ನೇಮಕಗೊಂಡಾಗ ದೇಶಾದ್ಯಂತ ಆಕ್ರೋಶ ಕಂಡು ಬಂದಿತ್ತು. ಆದರೆ ಅವರು ಎಲ್ಲವನ್ನು ವೌನವಾಗಿ ಸಹಿಸಿಕೊಂಡಿದ್ದರು. ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
ಆ.5ರಂದು ಆರಂಭಗೊಂಡಿದ್ದ ರಿಯೋ ಒಲಿಂಪಿಕ್ಸ್ ಗೇಮ್ಸ್ ಆ.21ರಂದು ಕೊನೆಗೊಳ್ಳಲಿದೆ. ಭಾರತ ಇಷ್ಟರ ತನಕ ರಿಯೋ ಒಲಿಂಪಿಕ್ಸ್‌ನಲ್ಲಿ ಪದಕದ ಖಾತೆ ತೆರೆದಿಲ್ಲ. ಹೀಗಿದ್ದರೂ ಅಥ್ಲೇಟ್‌ಗಳ ಪ್ರದರ್ಶನದ ಬಗ್ಗೆ ಟೀಕಿಸದೆ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಭಾರತದ ಎಲ್ಲ ಅಥ್ಲೀಟ್‌ಗಳಿಗೂ ತಲಾ 1,01,000 ರೂ. ಬಹುಮಾನ ಘೋಷಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ಸೂಪರ್‌ಸ್ಟಾರ್ ತನ್ನ ನಿರ್ಧಾರವನ್ನು ಪ್ರಕಟಿಸಿದ್ದಾರೆ.