ಇಸ್ರೇಲ್ ವಿರುದ್ಧದ ಪಂದ್ಯದಲ್ಲಿ ಫೆಲೆಸ್ತೀನ್ ಧ್ವಜ ಪ್ರದರ್ಶಿಸಿದ ಸ್ಕಾಟಿಷ್ ಬೆಂಬಲಿಗರು

Update: 2016-08-18 03:16 GMT

ಸ್ಕಾಟ್ಲೆಂಡ್, ಆ.18: ಫೆಲೆಸ್ತೀನ್ ಪ್ರದೇಶವನ್ನು ಅತಿಕ್ರಮಿಸಿಕೊಂಡಿರುವ ಇಸ್ರೇಲ್ ಕ್ರಮವನ್ನು ಪ್ರತಿಭಟಿಸಿ, ಸ್ಕಾಟ್ಲೆಂಡ್ ಬೆಂಬಲಿಗರು ಗ್ಲಾಸ್ಗೊ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆದ ಸ್ಕಾಟ್ಲೆಂಡ್- ಇಸ್ರೇಲ್ ಫುಟ್‌ಬಾಲ್ ಕ್ಲಬ್‌ಗಳ ನಡುವಿನ ಪಂದ್ಯದ ವೇಳೆ ಸಾಮೂಹಿಕವಾಗಿ ಫೆಲೆಸ್ತೀನ್ ಧ್ವಜಗಳನ್ನು ಪ್ರದರ್ಶಿಸಿದ ಅಪರೂಪದ ಘಟನೆ ನಡೆಯಿತು.

ಗ್ಲಾಸ್ಗೊ ಸೆಲ್ಟಿಕ್ಸ್ ಹಾಗೂ ಇಸ್ರೇಲ್‌ನ ಹಪಿಯೋಲ್ ಬೀರ್ ಶೆವಾ ಕ್ಲಬ್‌ಗಳ ನಡುವಿನ ಪಂದ್ಯದಲ್ಲಿ ಈ ಘಟನೆ ನಡೆಯಿತು. ಸ್ಟೇಡಿಯಂ ಅಧಿಕಾರಿಗಳ ನಿಷೇಧದ ನಡುವೆಯೂ ಸ್ಕಾಟ್ಲೆಂಡ್ ಬೆಂಬಲಿಗರು ಸಾಮೂಹಿಕವಾಗಿ ಫೆಲೆಸ್ತೀನ್ ಧ್ವಜಗಳನ್ನು ಪ್ರದರ್ಶಿಸಿದರು.

ಪಂದ್ಯ ಆರಂಭಕ್ಕೆ ಮುನ್ನವೇ ಫೆಲೆಸ್ತೀನ್ ಅಲಯನ್ಸ್ ಗುಂಪಿನ ಸದಸ್ಯರು ಧ್ವಜ ಹಾಗೂ ಇಸ್ರೇಲ್ ದುರಾಕ್ರಮಣ ವಿರುದ್ಧದ ಕರಪತ್ರವನ್ನು ಪ್ರೇಕ್ಷಕರಿಗೆ ವಿತರಿಸಿದರು. ಒಂದು ವಾರಕ್ಕೆ ಮುನ್ನವೇ ಫೆಲೆಸ್ತೀನ್ ಪರ ಪ್ರತಿಭಟನೆ ನಡೆಸಲಾಗಿತ್ತು. ಇದಕ್ಕಾಗಿ 800 ಮಂದಿ ಫ್ಲೈ ದ ಫ್ಯ್ಲಾಗ್ ಫಾರ್ ಫೆಲೆಸ್ತೀನ್, ಸೆಲ್ಟಿಕ್ ಫಾರ್ ಜಸ್ಟೀಸ್ ಎಂಬ ಫೇಸ್‌ಬುಕ್ ಗುಂಪು ರಚಿಸಿಕೊಂಡು ವ್ಯಾಪಕ ಪ್ರಚಾರ ನಡೆಸಿದ್ದರು.

ಯೂರೋಪ್‌ನ ಫುಟ್‌ಬಾಲ್ ನಿಯಂತ್ರಣ ಸಂಸ್ಥೆಯಾದ ಯುಇಎಫ್‌ಎ ಇಸ್ರೇಲ್ ಹಾಗೂ ಅದರ ನೀತಿಗಳನ್ನು ಬೆಂಬಲಿಸಬಾರದು ಎಂದು ಈ ಫೇಸ್‌ಬುಕ್ ಗುಂಪು ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News