ಇಮೇಲ್ ವಿವಾದ: ಹಿಲರಿ ಕ್ಲಿಂಟನ್‌ಗೆ ಕ್ಲೀನ್‌ಚಿಟ್
ವಾಷಿಂಗ್ಟನ್,ಆಗಸ್ಟ್ 18: ಅಮೆರಿಕದ ವಿದೇಶಾಂಗ ಸಚಿವೆಯಾಗಿದ್ದಾಗ ಹಿಲರಿ ಕ್ಲಿಂಟನ್ ತನ್ನ ಖಾಸಗಿ ಸರ್ವರ್‌ನಿಂದ ಇಮೇಲ್ ಕಳುಹಿಸಿದ್ದಾರೆಂಬ ಪ್ರಕರಣದ ತನಿಖೆಯನ್ನು ಪೂರ್ತಿಗೊಳಿಸಿರುವ ಎಫ್‌ಬಿಐ, ಯುಎಸ್ ಕಾಂಗ್ರೆಸ್‌ಗೆ ಸಲ್ಲಿಸಿದ ವರದಿಯಲ್ಲಿ ಹಿಲರಿ ಕ್ಲಿಂಟನ್ ವಿರುದ್ಧ ಯಾವುದೇ ಆರೋಪವನ್ನು ಹೊರಿಸಿಲ್ಲ ಎಂದು ವರದಿಯಾಗಿದೆ. ಅದು ಹಿಲರಿ ಕ್ಲಿಂಟನ್ ವಿರುದ್ಧ ಆರೋಪ ಹೊರಿಸಿಲ್ಲ ಮತ್ತು ಹಿಲರಿ ಕ್ಲಿಂಟನ್ ಹಾಗೂ ಸಾಕ್ಷಿಗಳಿಂದ ಹೇಳಿಕೆ ಪಡೆದು ವರದಿ ತಯಾರಿಸಿದೆ.
ಹಿಲರಿ ಕ್ಲಿಂಟನ್ ತನ್ನ ಸರ್ವರ್‌ನಿಂದ ಕಳುಹಿಸಿರುವ ಗುಪ್ತಸ್ವಭಾವದ ಇಮೇಲ್‌ಗಳನ್ನು ಎಫ್‌ಬಿಐ ಪರಿಶೀಲನೆ ನಡೆಸಿದೆ. ಆದರೆ ಅವುಗಳನ್ನು ಮುಂದಿಟ್ಟು ಅವರ ವಿರುದ್ಧ ಆರೋಪ ಹೊರಿಸಲು ಸಾಧ್ಯವಿಲ್ಲ ಎಂದು ಎಫ್‌ಬಿಐ ಅಭಿಪ್ರಾಯ ವ್ಯಕ್ತಪಡಿಸಿದೆ. ಆದರೆ, ಎಲ್ಲ ಗುಪ್ತರೀತಿಯ ಇಮೇಲ್ ಕಳುಹಿಸುವವರ ವಿರುದ್ಧ ಆರೋಪ ಹೊರಿಸದಿರಲೂ ಸಾಧ್ಯವಿಲ್ಲ ಎಂದು ಎಫ್‌ಬಿಐ ಸ್ಪಷ್ಟಪಡಿಸಿದೆ. ಇಮೇಲ್ ಕಳುಹಿಸಿದ ವೇಳೆ ಇದು ಗುಪ್ತಸ್ವಭಾವದ ಇಮೇಲ್ ಎಂದು ಸೂಚಿಕ ಚಿಹ್ನೆಗಳಿದ್ದರೂ ನಂತರ ಅದು ಪಾರ್ವರ್ಡ್ ಮಾಡುವಾಗ ಅಳಿಸಿಹೋಗಿತ್ತು ಎಂದು ಎಫ್‌ಬಿಐ ವರದಿ ತಿಳಿಸಿದೆ ಎಂದು ವರದಿಯಾಗಿದೆ.