ಸಿಯಾಚಿನ್‌ನಲ್ಲಿ ಯೋಧರೊಂದಿಗೆ ರಕ್ಷಾಬಂಧನ ಆಚರಿಸಿದ ಇರಾನಿ
Update: 2016-08-18 18:35 IST
ಹೊಸದಿಲ್ಲಿ,ಆ.18: ಕೇಂದ್ರ ಸಚಿವೆ ಸ್ಮತಿ ಇರಾನಿ ಅವರು ಗುರುವಾರ ವಿಶ್ವದ ಅತ್ಯಂತ ಎತ್ತರದ ಯುದ್ಧಕ್ಷೇತ್ರವಾಗಿರುವ ಸಿಯಾಚಿನ್‌ನಲ್ಲಿ ಯೋಧರಿಗೆ ರಕ್ಷೆಗಳನ್ನು ಕಟ್ಟಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗಡಿಗಳನ್ನು ಕಾಯುತ್ತಿರುವ ನನ್ನ ಸೋದರರೊಂದಿಗೆ ಈ ಹಬ್ಬವನ್ನು ಆಚರಿಸುತ್ತಿರುವುದು ನನ್ನ ಪಾಲಿಗೆ ಗೌರವದ ವಿಷಯವಾಗಿದೆ. ಈ ಯೋಧರಿಗೆ ದೇಶವು ಚಿರಋಣಿಯಾಗಿದೆ ಎಂದರು.
ತನ್ಮಧ್ಯೆ ಕೇಂದ್ರ ಸಚಿವರಾದ ಸುಶ್ಮಾ ಸ್ವರಾಜ್,ಉಮಾ ಭಾರತಿ,ಮೇನಕಾ ಗಾಂಧಿ ಅವರೂ ಗಡಿಪ್ರದೇಶಗಳಿಗೆ ಭೇಟಿ ನೀಡಿ ಯೋಧರೊಂದಿಗೆ ಸಂವಾದ ನಡೆಸಿದರು.