ಶಾಲಾ ಶುಲ್ಕ ನಿರಾಕರಿಸಿದ್ದಕ್ಕೆ ಯುವತಿ ಆತ್ಮಹತ್ಯೆ
Update: 2016-08-18 23:47 IST
ಜೈಪುರ, ಆ.18: ಶಾಲಾ ಶುಲ್ಕ ಪಾವತಿಸಲು ತಂದೆ ನಿರಾಕರಿಸಿದ್ದರಿಂದ ಬೇಸತ್ತ 18 ವರ್ಷದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಉದಯಪುರ ಜಿಲ್ಲೆಯಲ್ಲಿ ನಡೆದಿದೆ.
ಹನ್ನೆರಡನೆ ತರಗತಿಯಲ್ಲಿ ಓದುತ್ತಿದ್ದ ಶಿಲ್ಪಾಕುಮಾರ್, ತನ್ನ ತಂದೆ ಶಾಲಾ ಶುಲ್ಕ ಪಾವತಿಸಲು ನಿರಾಕರಿಸಿದ್ದರಿಂದ ಹತಾಶಳಾಗಿ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಳು ಎಂದು ತನಿಖಾಧಿಕಾರಿ ಶಹಜದ್ ಅಲಿ ಹೇಳಿದ್ದಾರೆ.
ರಿಷಬ್‌ದೇವ್‌ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಕೆಯನ್ನು ಒಯ್ದು, ಪ್ರಥಮ ಚಿಕಿತ್ಸೆ ನೀಡಿ, ಉದಯಪುರದ ಎಂ.ಬಿ.ಆಸ್ಪತ್ರೆಗೆ ಸಾಗಿಸಲಾಯಿತು. ಬುಧವಾರ ರಾತ್ರಿ ಆಕೆ ಮೃತಪಟ್ಟಳು ಎಂದು ಅವರು ವಿವರಿಸಿದ್ದಾರೆ.