ಟ್ರಂಪ್‌ರ ನಗ್ನಪ್ರತಿಮೆಯೊಂದಿಗೆ ಪ್ರತಿಭಟನೆ!
ನ್ಯೂಯಾರ್ಕ್, ಆಗಸ್ಟ್ 19: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ರ ನಗ್ನ ಪ್ರತಿಮೆಯೊಂದಿಗೆ ಪ್ರತಿಭಟನಕಾರರು ರಂಗಪ್ರವೇಶಿಸಿದ್ದಾರೆಂದು ವರದಿಯಾಗಿದೆ. ಇಂಡಿಕ್ಲೈನ್ ಎಂಬ ಸಂಘಟನೆ ಟ್ರಂಪ್ ವಿರುದ್ಧ ಅಮೆರಿಕ ನಗರಗಳಲ್ಲಿ ಹೊಸ ಪ್ರತಿಭಟನಾ ರೀತಿಗೆ ಚಾಲನೆ ನೀಡಿದ್ದು, ಟ್ರಂಪ್‌ರ ಪೂರ್ಣ ನಗ್ನ ರೂಪದ ಪ್ರತಿಮೆಯನ್ನು ನ್ಯೂಯಾರ್ಕ್, ಲಾಸ್‌ಏಂಜಲ್ಸ್, ಸಾನ್‌ಫ್ರಾನ್ಸಿಸ್ಕೊ, ಕ್ಲೇವ್‌ಲೆಂಡ್ ಮುಂತಾದ ನಗರಗಳಲ್ಲಿ ಅದು ಪ್ರದರ್ಶಿಸಿದೆ. ಟ್ರಂಪ್‌ರ ದ್ವೇಷಪೂರಿತ ಭಾಷಣವನ್ನು ಸಂಘಟನೆ ಈರೀತಿ ಪ್ರತಿಭಟಿಸುತ್ತಿದೆ. ಆದರೆ, ನ್ಯೂಯಾರ್ಕ್‌ನಲ್ಲಿ ಪ್ರದರ್ಶಿಸಿದ ಪ್ರತಿಮೆಯನ್ನು ಅಧಿಕಾರಿಗಳು ನಂತರ ತೆರವುಗೊಳಿಸಿದ್ದಾರೆಂದು ತಿಳಿದು ಬಂದಿದೆ.
ಟ್ರಂಪ್‌ರ ನಗ್ನ ಪ್ರತಿಮೆಯನ್ನು ನ್ಯೂಯಾರ್ಕ್‌ನಲ್ಲಿ ಜನಸಂದಣಿ ಮಧ್ಯೆ ಎರಡುಗಂಟೆಗಳ ಕಾಲ ಇರಿಸಲು ಪ್ರತಿಭಟನಾಕಾರಿಗೆ ಸಾಧ್ಯವಾಯಿತು ಎನ್ನಲಾಗಿದೆ. ಟ್ರಂಪ್ “ಪ್ಯಾಶಿಸಂನ ಹೊಸ ಚಕ್ರವರ್ತಿ” ಎಂದು ಪ್ರತಿಭಟನಕಾರರು ಹೇಳಿದ್ದಾರೆ.ತಮ್ಮ ಪ್ರತಿಭಟನೆ ಟ್ರಂಪ್‌ರನ್ನು ಅಧ್ಯಕ್ಷ ಸ್ಥಾನದಿಂದ ತಡೆಯಲು ಸಮರ್ಥವಾಗಬಹುದು ಎಂದು ಪ್ರತಿಭಟನಾಕಾರರ ಆಶಾವಾದವಾಗಿದೆ ಎಂದು ವರದಿ ತಿಳಿಸಿದೆ.